ಮಹಾಶಿವರಾತ್ರಿ ಸಂಭ್ರಮ: ಉಪವಾಸ, ಜಾಗರಣೆ, ಅಭಿಷೇಕ, ಭಜನೆ

Posted By:
Subscribe to Oneindia Kannada

"ಕಣ್ಣ ಮುಚ್ಚಿ ಕುಳಿತರೆ ಕಾಣುವೆ ನೀನೊಬ್ಬನೆ, ಕಣ್ಣ ಬಿಟ್ಟು ನೋಡಿದರೆ ಕಾಣ್ವರು ನೂರಾರು ಶಿವರು" ಮಹಾ ಶಿವರಾತ್ರಿ ಹಬ್ಬದಲ್ಲಿ ಪ್ರಳಯಕಾಲಕನಾದ ಪರಶಿವನನ್ನು ಅನನ್ಯ ಶ್ರದ್ಧಾ ಮತ್ತು ಭಕ್ತಿಯಿಂದ ದಿನದ ನಾಲ್ಕು ಯಾಮಗಳಲ್ಲಿ ಪೂಜಿಸಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಮಾರ್ಚ್ 07ರ ಬ್ರಾಹ್ಮಿ ಮುಹೂರ್ತದಿಂದ ಪೂಜಾಕಾರ್ಯ ಆರಂಭವಾಗಿದೆ.

ಅಂದ ಹಾಗೆ ಇವತ್ತು ಸರಕಾರಿ ರಜಾ ದಿನ. ಶಿವಲಿಂಗಗಳಿಗೆ ಅಹೋರಾತ್ರಿ ಅಭಿಷೇಕ. ಒಟ್ಟು ನಾಲಕ್ಕು ಯಾಮದ ಪೂಜೆ. ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಈ ದಿನ ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಉಪವಾಸವನ್ನೂ ಆಚರಿಸಲಾಗುತ್ತದೆ. ಭಕ್ತಾದಿಗಳು ರಾತ್ರಿ ಇಡೀ ಎಚ್ಚರವಿದ್ದು ಶಿವಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ.[ಉಗ್ರರೂಪಿ ಉಜ್ಜಯಿನಿ ಮಹಾಕಾಲೇಶ್ವರ ಕಥೆ]

ಮಾಸ ಶಿವರಾತ್ರಿ ಪ್ರತಿ ತಿಂಗಳು ಆಚರಣೆಯಲ್ಲಿರುತ್ತದೆ. ಆದರೆ, ಮಾಘ ಕೃಷ್ಣ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆಗೆ ವಿಶೇಷ ಮಹತ್ವವಿದೆ. ದೇಶದ ವಿವಿಧೆಡೆ ಭಕ್ತಾದಿಗಳು ಪೂಜೆ, ಅಭಿಷೇಕ, ಆರತಿ, ಭಜನೆ ಮೂಲಕ ಪರಮಶಿವನನ್ನು ಸ್ಮರಿಸುವ ಚಿತ್ರಗಳು ಇಲ್ಲಿವೆ...

ಅಲಹಾಬಾದಿನಲ್ಲಿ ಶಿವನಿಗೆ ಅಭಿಷೇಕ

ಅಲಹಾಬಾದಿನಲ್ಲಿ ಶಿವನಿಗೆ ಅಭಿಷೇಕ

ಅಲಹಾಬಾದಿನಲ್ಲಿ ಶಿವನಿಗೆ ಸಾಮೂಹಿಕವಾಗಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಗಿದೆ. PTI Photo

ಹರಿದ್ವಾರದಲ್ಲಿ ಗಂಗೆಗೆ ಆರತಿ

ಹರಿದ್ವಾರದಲ್ಲಿ ಗಂಗೆಗೆ ಆರತಿ

ಹರಿದ್ವಾರದಲ್ಲಿ 'ಹರ್ ಕಿ ಪೌರಿ' ಗಂಗೆಗೆ ಅರತಿ ಬೆಳಗಿದ ಭಕ್ತಾದಿಗಳು

ಜಮ್ಮುವಿನಲ್ಲಿ ಕಾಶ್ಮೀರಿ ಪಂಡಿತರಿಂದ ಪೂಜೆ

ಜಮ್ಮುವಿನಲ್ಲಿ ಕಾಶ್ಮೀರಿ ಪಂಡಿತರಿಂದ ಪೂಜೆ

ಜಮ್ಮುವಿನಲ್ಲಿ ವಲಸಿಗರ ಕ್ಯಾಂಪಿನಲ್ಲಿರುವ ಕಾಶ್ಮೀರಿ ಪಂಡಿತ ಕುಟುಂಬದಿಂದ ಶಿವಪೂಜೆ.

ಪುರಿಯಲ್ಲಿ ಮರಳುಶಿಲ್ಪದಲ್ಲಿ ಶಿವ

ಪುರಿಯಲ್ಲಿ ಮರಳುಶಿಲ್ಪದಲ್ಲಿ ಶಿವ

ಒಡಿಶಾದಲ್ಲಿ ಮರಳುಶಿಲ್ಪಿ ಮನಸ್ ಕುಮಾರ್ ಸಾಹೂ ಅವರ ಕಲ್ಪನೆಯಲ್ಲಿ ಅರಳಿದ ಪರಮಶಿವ.

ನಟ ಅಕ್ಷಯ್ ಕುಮಾರ್ ಅವರಿಂದ ಟ್ವೀಟ್

ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿ ಅರ್ಥಪೂರ್ಣವಾಗಿ ಆಚರಿಸಿ ಎಂದಿದ್ದಾರೆ.

ಮಧ್ಯಪ್ರದೇಶದ ಭೋಜ್ಪುರ್ ದೇಗುಲದಲ್ಲಿ ವಿಶೇಷ ಪೂಜೆ

ಮಧ್ಯಪ್ರದೇಶದ ಭೋಜ್ಪುರ್ ದೇಗುಲದಲ್ಲಿ ವಿಶೇಷ ಪೂಜೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Pictures: India Celebrates Maha Shivaratri. Maha Shivaratri literally means the night of Shiva and is celebrated every year on the 13th night/14th day of the Maagha month of the Hindu calendar. This is Shivaratri celebrated on Monday, 07h March.
Please Wait while comments are loading...