ಗುರು ಪೂರ್ಣಿಮಾ: ಶ್ರದ್ಧಾ ಭಕ್ತಿಯಿಂದ ಗುರುವಿಗೆ ನಮಿಸಿದ ಭಾರತ
ಬೆಂಗಳೂರು, ಜುಲೈ 09: ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಇಂದು ಗುರು ಪೂರ್ಣಿಮಾ ಹಬ್ಬವಾಗಿದ್ದು, ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಂಭ್ರಮಾಚರಣೆಯನ್ನು ಕಾಣಬಹುದು.
ಯಾರಿಂದಲೂ ಅಪಹರಿಸಲಾಗದ ಸಂಪತ್ತಾದ 'ವಿದ್ಯೆ' ಯನ್ನು ಧಾರೆ ಎರೆಯುವ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನು ರೂಪಿಸುವ ಕಿಂಗ್ ಮೇಕರ್ ಗಳಾದ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಟ್ವಿಟ್ಟರ್ ನಲ್ಲಿ ವಂದನೆ ಸಲ್ಲಿಸಿದ್ದಾರೆ...
ಗುರು ಪೂರ್ಣಿಮಾ ದಿನದಂದು ಸನ್ಮಾರ್ಗ ತೋರಿದ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ವಂದಿಸಲಾಗುತ್ತದೆ. ಬೌದ್ಧ ಧರ್ಮಗುರು ಗೌತಮ ಬುದ್ಧ ಹಾಗೂ ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ಇಬ್ಬರು ಇದೇ ದಿನದಂದು ಜನಿಸಿರುವುದು ವಿಶೇಷ
ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು 'ಗುರು' ಎನಿಸಿಕೊಳ್ಳುತ್ತಾನೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

ಮೊರದಾಬಾದಿನಲ್ಲಿ ಪೂಜೆ
ಉತ್ತರಪ್ರದೇಶದ ಮೊರದಾಬಾದಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಾಲೆಗಳಲ್ಲಿ ತಮ್ಮಶಿಕ್ಷಕರನ್ನು ಪೂಜಿಸಿ, ಆರತಿ ಬೆಳಗಿ ಭಕ್ತಿಯಿಂದ ಆರಾಧಿಸಿದ ವಿದ್ಯಾರ್ಥಿ ವೃಂದ.

ಅಲಹಾಬಾದ್
ಅಲಹಾಬಾದಿನ ಸಂಗಮದಲ್ಲಿ ಗುರು ಪೂರ್ಣಿಮಾದ ಅಂಗವಾಗಿ ವಿಶೇಷ ಪೂಜೆ, ಆರತಿ ನಡೆಸಲಾಗುತ್ತದೆ.

ಅಹಮದಾಬಾದ್
ಅಹಮದಾಬಾದಿನ ಆಶ್ರಮವೊಂದರಲ್ಲಿ ವಿಶಿಷ್ಟವಾಗಿ ನಡೆದ ಗುರುಪೂರ್ಣಿಮಾ ಸಂಭ್ರಮಾಚರಣೆ.

ಮಥುರಾ
ಮಥುರಾದಲ್ಲಿ ಗುರು ಪೂರ್ಣಿಮಾದ ಅಂಗವಾಗಿ ಗೋವರ್ಧನ ಪರಿಕ್ರಮ ಪ್ರತಿ ವರ್ಷ ನಡೆಯುತ್ತದೆ.

ಬೇಲೂರು ಮಠ
ಪಶ್ಚಿಮ ಬಂಗಾಲದ ಬೇಲೂರಿನ ರಾಮಕೃಷ್ಣ ಮಠದಲ್ಲಿ ಗುರು ಪೂರ್ಣಿಮಾ ಸಂಭ್ರಮ.
|
ನರೇಂದ್ರ ಮೋದಿ
ಗುರುಪೂರ್ಣಿಮಾ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ
|
ಗುರು ಪೂರ್ಣಿಮಾ ಆಚರಣೆ
ಗುರು ಪೂರ್ಣಿಮಾ ಆಚರಣೆ ಸಂದರ್ಭದಲ್ಲಿ ಬಂದಿರುವ ಟ್ವೀಟ್ಸ್, ಜ್ಞಾನವನ್ನು ಎಲ್ಲಾ ಮೂಲಗಳಿಂದ ಪಡೆದುಕೊಳ್ಳುವುದರ ಮಹತ್ವವನ್ನು ಸಾರುವ ಟ್ವೀಟ್ಸ್.
|
ಹಳೆ ಚಿತ್ರ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಗುರು ರಮಾಕಾಂತ್ ಅರ್ಚೆಕರ್ ಜತೆಗಿರುವ ಹಳೆ ಚಿತ್ರವನ್ನು ಟ್ವೀಟ್ ಲೋಕ ಹಂಚಿಕೊಂಡಿದೆ.
|
ಗುರು ವಂದನೆ ಕಾರ್ಯಕ್ರಮ
ಎಲ್ಲೆಡೆಯಿಂದ ಗುರು ಪೂರ್ಣಿಮಾ ಅಂಗವಾಗಿ ಗುರು ವಂದನೆ ಕಾರ್ಯಕ್ರಮ ಆಯೋಜನೆಗೊಂಡಿದೆ.












Click it and Unblock the Notifications