ಬಾಂಧವ್ಯದ ಹಬ್ಬ, ರಕ್ಷಾಬಂಧನ ಸಂಭ್ರಮಾಚರಣೆ
ಬೆಂಗಳೂರು, ಆ.10: ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವ ರಕ್ಷಾ ಬಂಧನ ಹಬ್ಬವನ್ನು ಭಾನುವಾರ ದೇಶದೆಲ್ಲೆಡೆ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿಯ ಶಾಲಾ ಮಕ್ಕಳು ರಾಖಿ ಕಟ್ಟುವ ಮೂಲಕ ಸಂಭ್ರಮಪಟ್ಟರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭ ಹಾರೈಸಿದ್ದಾರೆ.
ರಕ್ಷಾ ಬಂಧನವನ್ನು ಆಚರಿಸುವ ರಾಖಿ ಶ್ರಾವಣ ಹುಣ್ಣಿಮೆ ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ.
ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ ಮತ್ತು ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಅಂದು ಸಮುದ್ರ ದೇವನಾದ ವರುಣನಿಗೆ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. ಈ ದಿನವು ಅತ್ಯಂತ ಮಂಗಳಕರವೆಂದು ಪ್ರತೀತಿ. ಈ ಬಾರಿ ಬ್ರಾಹ್ಮಣ ಪವಿತ್ರ ಹಬ್ಬ ಎನಿಸಿರುವ ಉಪಕರ್ಮ ಕೂಡಾ ಇದೇ ದಿನ ಎಲ್ಲೆಡೆ ಆಚರಿಸಲಾಗಿದೆ. ಹಬ್ಬದ ಚಿತ್ರಗಳನ್ನು ಮುಂದೆ ನೋಡಿ..

ಮಕ್ಕಳಿಂದ ರಾಖಿ ಕಟ್ಟಿಸಿಕೊಂಡ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ ಪುಟಾಣಿಗಳು PTI Photo/PIB

ದೀದಿಯಿಂದ ಶಾರುಖ್ ಗೆ ರಾಖಿ
ಕೋಲ್ಕತ್ತಾ: ಕಿಂಗ್ ಖಾನ್ ಶಾರುಖ್ ಗೆ ನಿನ್ನೆಯೇ ರಾಖಿ ಕಟ್ಟಿದ ದೀದಿ ಮಮತಾ ಬ್ಯಾನರ್ಜಿ

ಆರೆಸ್ಸೆಸ್ ನಿಂದ ರಕ್ಷಾ ಬಂಧನ ಆಚರಣೆ
ಹುಬ್ಬಳ್ಳಿಯ ಗೋಕುಲ್ ಗಾರ್ಡನ್ ನಲ್ಲಿ ಆರೆಸ್ಸೆಸ್ ನಿಂದ ರಕ್ಷಾ ಬಂಧನ ಆಚರಣೆ ನಡೆದಿದ್ದು ಹೀಗೆ, ಪಿಟಿಐ ಚಿತ್ರ

ವಾರಣಾಸಿಯಲ್ಲಿ ಉಪಕರ್ಮ ಹಬ್ಬ
ವಾರಣಾಸಿಯಲ್ಲಿ ಹೊಸ ಯಜ್ಞೋಪವಿತ ಧಾರಣೆ ಮಹೋತ್ಸವ ಹೋಮ ಹವನ ಉಪಕರ್ಮ ಆಚರಣೆ

ನಾಗಪುರದಲ್ಲಿ ಖೈದಿಗೆ ರಾಖಿ
ನಾಗಪುರದಲ್ಲಿ ಖೈದಿಗೆಯಾಗಿರುವ ಅಣ್ಣನಿಗೆ ರಾಖಿ ಕಟ್ಟಿ ರೋದಿಸಿದ ಸೋದರಿಯರು.

ಯೋಧರಿಗೆ ರಾಖಿ ಕಟ್ಟಿದ ಯುವತಿ
ಗಡಿಭದ್ರತಾ ಪಡೆ ಯೋಧರಿಗೆ ರಾಖಿ ಕಟ್ಟಿದ ಯುವತಿಯರು. PTI Photo

ಸಾಧ್ವಿ ರಿತಾಂಬರ ಅವರಿಂದ ರಾಖಿ
ಸಾಧ್ವಿ ರಿತಾಂಬರ ಅವರಿಂದ ರಾಖಿ ಕಟ್ಟಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ಲಕ್ನೋದಲ್ಲಿ ಉಪಕರ್ಮ ಆಚರಣೆ
ಉತ್ತರಪ್ರದೇಶದಲ್ಲಿ ಬ್ರಾಹ್ಮಣ ಬಾಲಕರಿಂದ ಉಪಕರ್ಮ ಆಚರಣೆ

ಹೈದರಾಬಾದಿನಲ್ಲಿ ರಾಜ್ಯಪಾಲರಿಗೆ ರಾಖಿ
ಹೈದರಾಬಾದಿನಲ್ಲಿ ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು.

ರಾಷ್ಟ್ರಪತಿಗಳಿಗೆ ರಾಖಿ ಕಟ್ಟಿದ ಮಕ್ಕಳು
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಖಿ ಕಟ್ಟಿದ ಮಕ್ಕಳು

ಸಂಗಮದಲ್ಲಿ ಹುಣ್ಣಿಮೆ ಆರತಿ ಬೆಳಕು
ಅಲಹಾಬಾದಿನ ಸಂಗಮದಲ್ಲಿ ಹುಣ್ಣಿಮೆ ಆರತಿ ಬೆಳಕು ಪ್ರಜ್ವಲಿಸಿದೆ. ರಕ್ಷಾಬಂಧನ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗಿದೆ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications