ಇಫ್ತಾರ್ ಕೂಟದಲ್ಲಿ ಬಿರಿಯಾನಿ ಬಾರಿಸಿದ ಗರಿಗರಿ ನಾಯಕರು

Written By:
Subscribe to Oneindia Kannada

ರಂಜಾನ್ ಹಬ್ಬದಲ್ಲಿ ಉಪವಾಸದಷ್ಟೆ ಪ್ರಮುಖ ಸ್ಥಾನವನ್ನು ಇಫ್ತಾರ್ ಕೂಟಗಳು ಪಡೆದುಕೊಂಡಿವೆ. ರಾಜಕಾರಣಿಗಳು ಸಹ ಹಬ್ಬದಲ್ಲಿ ಪಾಲ್ಗೊಳ್ಳುವುದು, ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಬಹುದು, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಇರಬಹುದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇರಬಹುದು ಎಲ್ಲರೂ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಮುಸ್ಲಿಮರ ಸಾಂಪ್ರದಾಯಿಕ ಪದ್ಧತಿಯಂತೆ ತಲೆ ಮೇಲೆ ಟೋಪಿ ಧರಿಸಿ ಪ್ರತಿ ವರ್ಷ ಕಾಣಿಸಿಕೊಳ್ಳುತ್ತಾರೆ.[ರಂಜಾನ್ ಖಾದ್ಯಗಳ ಮಳಿಗೆಗಳಲ್ಲಿ ಒಂದು ಸುತ್ತು!]

ಇಫ್ತಾರ್ ಕೂಟದಲ್ಲಿ ಕಾಣಿಸಿಕೊಂಡ ನಾಯಕರ ಚಿತ್ರಗಳನ್ನೆಲ್ಲ ಒಟ್ಟುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಹಾಗೆ ಒಂದು ಸುತ್ತು ಇಫ್ತಾರ್ ಕೂಟದಲ್ಲಿ ನಾವು ಭಾಗವಹಿಸಿಕೊಂಡು ಬರೋಣ...(ಪಿಟಿಐ ಚಿತ್ರಗಳು)

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಮುಸಲ್ಮಾನರಿಗೆ ಶುಭಾಶಯ ಕೋರಿದರು.

ಗುಲಾಂ ನಬಿ ಆಜಾದ್

ಗುಲಾಂ ನಬಿ ಆಜಾದ್

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಲಕ್ನೋದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ಪಾಸ್ವಾನ್ ಪರಿವಾರ

ಪಾಸ್ವಾನ್ ಪರಿವಾರ

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿ, ಬಿಜೆಪಿ ಹಿರಿಯ ನಾಯಕ ಸುಶಿಲ್ ಕುಮಾರ್ ಮೋದಿ ಪಾಟ್ನಾದಲ್ಲಿ.

ಅಮ್ಮ ಇಫ್ತಾರ್

ಅಮ್ಮ ಇಫ್ತಾರ್

ಚೆನ್ನೈ ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ತಮಿಳುನಾಡು ಸಿಎಂ ಜಯಲಲಿತಾ.

ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿ

ನವದೆಹಲಿಯಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸ್ವಾಗತ.

ಅಹಮದಾಬಾದ್

ಅಹಮದಾಬಾದ್

ಅಹಮದಾಬಾದ್ ಜಗನ್ನಾಥ ದೇವಾಲಯದ ದಿಲೀಪ್ ದಾಸ್ ಮಹಾರಾಜ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ಕೇಜ್ರಿವಾಲ್ ಕ್ರೇಜಿ

ಕೇಜ್ರಿವಾಲ್ ಕ್ರೇಜಿ

ನವದೆಹಲಿಯಲ್ಲಿ ತಾವೇ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.

ಸೆಲ್ಫಿ ಕ್ರೇಜ್!

ಸೆಲ್ಫಿ ಕ್ರೇಜ್!

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡ ಮಹಿಳೆ.

ಶರದ್ ಪವಾರ್

ಶರದ್ ಪವಾರ್

ಎನ್ ಸಿಪಿ ನಾಯಕ ಶರದ್ ಪವಾರ್ ಮುಂಬೈ ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ನಿತೀಶ್ ಕುಮಾರ್

ನಿತೀಶ್ ಕುಮಾರ್

ಪಾಟ್ನಾದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ತಲೆ ಮೇಲೆ ಟೋಪಿ ಧರಿಸಿ ಕಾಣಿಸಿಕೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್.

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

ಲಕ್ನೋದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಕಾಣಿಸಿಕೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್.

ಹೇಗಿದೆ ನಮ್ಮ ಜೋಡಿ?

ಹೇಗಿದೆ ನಮ್ಮ ಜೋಡಿ?

ಬಿಹಾರ ಮುಖ್ಯಂಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಒಟ್ಟಾಗಿ ಕಾಣಿಸಿಕೊಂಡರು.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಕೋಲ್ಕತಾದಲ್ಲಿ ನಡೆದ ಇಫ್ತಾರ್ ಕೂಟದ ವೇಳೆ ಪ್ರಾರ್ಥನೆಯಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ದೆಹಲಿಯಲ್ಲಿ ನಡೆದ ಇಫ್ತಾರ್ ಕುಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.

ದೇವೇಗೌಡರು

ದೇವೇಗೌಡರು

ಬೆಂಗಳೂರಿನಲ್ಲಿ ಜೆಡಿಎಸ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In Pics: As many Political leaders participated in ramzan iftar all over the country. Delhi CM Arvind Kejriwal, AICC president sonia gandhi, Karnataka CM Siddaramaiah witnessed iftar Party.
Please Wait while comments are loading...