ಸಾವಿತ್ರಿ ಪ್ರವಾಹದಲ್ಲಿ ಕೊಚ್ಚಿಹೋದ 4 ನಾಲ್ವರ ಪತ್ತೆ

Written By:
Subscribe to Oneindia Kannada

ಮುಂಬೈ, ಆಗಸ್ಟ್ 04 : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ಬಳಿ ಮಹಾರಾಷ್ಟ್ರ-ಗೋವಾ ಹೆದ್ದಾರಿಯಲ್ಲಿದ್ದ ಬ್ರಿಟಿಷರ ಕಾಲದ ಸೇತುವೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಕೊಚ್ಚಿ ಹೋದ ದುರಂತದಲ್ಲಿ ಕಣ್ಮರೆಯಾಗಿದ್ದ 22 ಜನರಲ್ಲಿ ನಾಲ್ಕು ಮಂದಿಯ ಶವ ಪತ್ತೆಯಾಗಿದೆ.

ಎರಡು ಬಸ್ ಮತ್ತು ನಾಲ್ಕು ಕಾರುಗಳು ನೀರುಪಾಲಾಗಿದ್ದು ಯಾವ ಕುರುಹು ಪತ್ತೆಯಾಗಿರಲಿಲ್ಲ. ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.

ಬುಧವಾರ(ಆಗಸ್ಟ್ 3) ಮುಂಜಾನೆ 2 ಗಂಟೆ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಸೇತುವೆ ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡಿ ಹೋಗಿದೆ. ಸೇತುವೆ ಕೊಚ್ಚಿಕೊಂಡು ಹೋದ ನಂತರದ ರಕ್ಷಣಾ ಕಾರ್ಯಾಚರಣೆ ಚಿತ್ರಗಳನ್ನು ಪಿಟಿಐ ಬಿಡುಗಡೆ ಮಾಡಿದೆ.[ಮುಂಬೈ-ಗೋವಾ ಸೇತುವೆ ಧ್ವಂಸ, ಸಹಾಯವಾಣಿ ಇಲ್ಲಿದೆ]

ಶೇ. 80 ಸೇತುವೆ ಧ್ವಂಸ

ಶೇ. 80 ಸೇತುವೆ ಧ್ವಂಸ

ಸೇತುವೆಯ ಶೇ 80ರಷ್ಟು ಭಾಗ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಹಾಡ್‌ನ‌ ಹೆದ್ದಾರಿಯಲ್ಲಿದ್ದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಶತಮಾನಗಳಷ್ಟು ಹಳೆಯದಾದ ಸೇತುವೆ ಕೊಚ್ಚಿ ಹೋಗಿದೆ.

ಪರ್ಯಾಯ ದಾರಿ

ಪರ್ಯಾಯ ದಾರಿ

ಸಾವಿತ್ರಿ ನದಿಗೆ ಅಡ್ಡಲಾಗಿದ್ದ ಬ್ರಿಟಿಷ್ ಕಾಲದ ಸೇತುವೆ ಕುಸಿದು ದುರಂತ ಸಂಭವಿಸಿದ್ದು,ಇದೀಗ ಸಮೀಪದಲ್ಲಿರುವ ಇನ್ನೊಂದು ಸೇತುವೆಯ ಮೂಲಕ ವಾಹನಗಳು ಸಂಚರಿಸುತ್ತಿವೆ.

ರಕ್ಷಣಾ ಕಾರ್ಯಾಚರಣೆ

ರಕ್ಷಣಾ ಕಾರ್ಯಾಚರಣೆ

ಸ್ಥಳದಲ್ಲಿ ಎನ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಕರಾವಳಿ ರಕ್ಷಣಾ ಪಡೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ.

ಮಾತಾಡಿದ ಮೋದಿ

ಮಾತಾಡಿದ ಮೋದಿ

ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಸೈನಿಕರ ಶ್ರಮ

ಸೈನಿಕರ ಶ್ರಮ

ಸೇತುವೆಯಲ್ಲಿ ಕೊಚ್ಚಿ ಹೋದವರ ಪತ್ತೆಗೆ ಸೈನಿಕರು ನಿರಂತರ ಕಾರ್ಯಾಚರಣೆ ನಡೆಸಿದರು.

ಹೆಲಿಕಾಪ್ಟರ್ ಬಳಕೆ

ಹೆಲಿಕಾಪ್ಟರ್ ಬಳಕೆ

ಹೆಲಿಕಾಪ್ಟರ್ ಬಳಕೆ ಮಾಡಿಕೊಂಡು ದುರ್ಘಟನೆಯ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IN Pics: Around 22 people and several vehicles feared to have been swept away after a bridge across the Savitri river near Mahad on Mumbai-Goa Highway collapsed on late Tuesday.
Please Wait while comments are loading...