ಚಿತ್ರಗಳಲ್ಲಿ: ಭಾರತದೆಲ್ಲೆಡೆ ಕಂಡು ಬಂದ ಸ್ವತಂತ್ರ ದಿನ ಸಂಭ್ರಮ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 15: ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಕೃಷಿ ಪ್ರಧಾನ ದೇಶ, ಅತಿ ಹೆಚ್ಚು ಯುವ ಜನಾಂಗ ಹೊಂದಿರುವ ಎಂಬೆಲ್ಲ ಹೆಗ್ಗಳಿಕೆ ಹೊಂದಿರುವ ಭಾರತಕ್ಕಿಂದು ಜನ್ಮದಿನ. ಅಭಿವೃದ್ಧಿ ಮಂತ್ರಪಠಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದೆಲ್ಲೆಡೆ ಸಂಭ್ರಮಾಚರಣೆ ಎಂದಿನಂತೆ ಸಾಗಿದೆ. ಆಯ್ದ ಚಿತ್ರಗಳ ಸಂಗ್ರಹ ನಿಮ್ಮ ಮುಂದಿದೆ. [ಗ್ಯಾಲರಿ: ವಾಘಾ ಗಡಿಯಲ್ಲಿ ಭಾರತ-ಪಾಕ್ ನಡುವೆ ಸಿಹಿ ಹಂಚಿಕೆ]

ಅಣುಶಕ್ತಿ, ಕ್ರಿಕೆಟ್, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಿತ್ತು ತಿನ್ನುವ ಹತ್ತು ಹಲವು ಸಮಸ್ಯೆಗಳ ನಡುವೆ ದೇಶ ಇಂದು 70ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದೆ.[70ನೇ ಸ್ವಾತಂತ್ರ್ಯೋತ್ಸವ : ಕೆಂಪುಕೋಟೆ ಮೇಲೆ ಮೋದಿ ಹೇಳಿದ್ದೇನು?]

ಬ್ರಿಟಿಷರಿಂದ 1947ಕ್ಕೆ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡರೂ, ಭಾರತ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವಾಗೇ ಉಳಿದಿದೆ. ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಅಪಾರ ಸಂಪತ್ತು ಹೊಂದಿರುವ ರಾಷ್ಟ್ರ ಆರ್ಥಿಕವಾಗಿ ಅವನತಿ ಹಾದಿ ಹಿಡಿಯುತ್ತಿದೆ. ಭಾರತದ ಜನ್ಮದಿನ ಸಂಭ್ರಮಾಚರಣೆಯ ಕೆಲವು ದೃಶ್ಯಗಳು ಇಲ್ಲಿವೆ ಕಣ್ತುಂಬಿಕೊಳ್ಳಿ...[ಸಹಬಾಳ್ವೆ ತತ್ವವನ್ನು ಕಾಪಾಡಲು ಕರೆ ನೀಡಿದ ರಾಷ್ಟ್ರಪತಿ]

ಬೆಂಗಳೂರಿನಲ್ಲಿ ಮಿಡ್ ನೈಟ್ ಮ್ಯಾರಥಾನ್

ಬೆಂಗಳೂರಿನಲ್ಲಿ ಮಿಡ್ ನೈಟ್ ಮ್ಯಾರಥಾನ್

ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಓಟ ಏರ್ಪಡಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಕಾಶ್ಮೀರದಲ್ಲಿ 13 ವರ್ಷದ ಬಾಲಕಿ ತಾನ್ಜಿಮ್

ಕಾಶ್ಮೀರದಲ್ಲಿ 13 ವರ್ಷದ ಬಾಲಕಿ ತಾನ್ಜಿಮ್

ಶ್ರೀನಗರದಲ್ಲಿ 13 ವರ್ಷದ ಬಾಲಕಿ ತಾನ್ಜಿಮ್ ಮಿರಾನಿ ವೋರಾ ಅವರು ಮುಸ್ಲಿಮ್ ಯುವ ಅತಂಕವಾದಿ ವಿರೋಧಿ ಸಮಿತಿ ಮೂಲಕ ಭಾರತದ ಬಾವುಟವನ್ನು ಹಿಡಿದು ನಿಂತಿದ್ದಾರೆ. ಆಗಸ್ಟ್ 15ರಂದು ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಮಾಡುವುದಾಗಿ ಬಾಲಕಿ ತಾನ್ಜಿಮ್ ಘೋಷಿಸಿದ್ದರು. ಆದರೆ, ಭದ್ರತಾ ಪಡೆಯವರು ವಿಮಾನ ನಿಲ್ದಾಣದಲ್ಲೇ ತಾನ್ಜಿಮ್ ಹಾಗೂ ಇತರರನ್ನು ತಡೆದರು.(ಪಿಟಿಐ ಚಿತ್ರ)

ವಿಶ್ವ ಪ್ರಸಿದ್ಧ ಮರಳು ಶಿಲ್ಪಿ ಪಟ್ನಾಯಕ್

ವಿಶ್ವ ಪ್ರಸಿದ್ಧ ಮರಳು ಶಿಲ್ಪಿ ಪಟ್ನಾಯಕ್

ವಿಶ್ವ ಪ್ರಸಿದ್ಧ ಮರಳು ಶಿಲ್ಪಿ ಪುರಿಯ ಸುದರ್ಶನ್ ಪಟ್ನಾಯಕ್ ಅವರು ಸ್ವಾತಂತ್ರೋತ್ಸವಕ್ಕೆ ಶುಭ ಹಾರೈಸಿದ್ದು ಹೀಗೆ

ನವದೆಹಲಿಯಲ್ಲಿ ಬಾಲಕನ ಕೈಲಿ ತ್ರಿವರ್ಣ ಕೇಕ್

ನವದೆಹಲಿಯಲ್ಲಿ ಬಾಲಕನ ಕೈಲಿ ತ್ರಿವರ್ಣ ಕೇಕ್

ಹಳೆ ದೆಹಲಿಯಲ್ಲಿ ಬಾಲಕನ ಕೈಲಿ ತ್ರಿವರ್ಣ ಕೇಕ್ PTI Photo by Shahbaz Khan

ಆರ್ಮಿ ಬಗ್ಗೆ ತಿಳಿದುಕೊಳ್ಳಿ

ಆರ್ಮಿ ಬಗ್ಗೆ ತಿಳಿದುಕೊಳ್ಳಿ

ಆರ್ಮಿ ಬಗ್ಗೆ ತಿಳಿದುಕೊಳ್ಳಿ ಕಾರ್ಯಕ್ರಮದಲ್ಲಿ ಜೈಪುರದ ಮಹಿಳೆಯೊಬ್ಬರು ರಾಕೆಟ್ ಲಾಂಚರ್ ಹಿಡಿದು ನಿಂತಿದ್ದಾರೆ

ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಓಟ

ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಓಟ

ಮಹಾರಾಷ್ಟ್ರದ ಕರಡ್ ನಲ್ಲಿ ಬಾಲಕರಿಂದ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ಓಟ

ಅಟ್ಟಾರಿ-ವಾಘಾ ಗಡಿಯಲ್ಲಿ ಸಂಭ್ರಮ

ಅಟ್ಟಾರಿ-ವಾಘಾ ಗಡಿಯಲ್ಲಿ ಸಂಭ್ರಮ

ಪಾಕಿಸ್ತಾನದ ಸೆಕ್ಟರ್ ಕಮಾಂಡರ್ ಶೌಕತ್ ಅಲಿ ಅವರು ಗಡಿ ಭದ್ರತಾ ಪಡೆ ಕಮಾಂಡತ್ ಸುದೀಪ್(ಬಲಗಡೆ) ಅವರಿಗೆ ಸ್ವತಂತ್ರ ದಿನದ ಅಂಗವಾಗಿ ಸಿಹಿ ನೀಡಿದರು. ಅಟ್ಟಾರಿ-ವಾಘಾ ಗಡಿ ಭಾಗದಲ್ಲಿ ಕಂಡು ಬಂದ ದೃಶ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 70th Independence Day was celebrated across India on Monday(August 15). While President Pranab Mukherjee addressed the nation on the eve of the historic day, Prime Minister Narendra Modi addressed the nation from the Red Fort on Monday morning. Here are the pictures from across the Nation
Please Wait while comments are loading...