ಮಗುವನ್ನು ಬಲಿ ಪಡೆದ ಹೇಮಾಮಾಲಿನಿ ಮರ್ಸಿಡಿಸ್ ಬೆಂಜ್
ಜೈಪುರ, ಜು.03 : ನಟಿ ಮತ್ತು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ರಾಜಸ್ಥಾನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೇಮಾಮಾಲಿನಿ ಅವರ ಕಾರು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದ್ದು, ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಮಥುರಾ ಸಂಸದೆ (ಬಿಜೆಪಿ) ಹೇಮಾಮಾಲಿನಿ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಗುರುವಾರ ರಾತ್ರಿ ಎದುರಿನಿಂದ ಬರುತ್ತಿದ್ದ ಮಾರುತಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ರಾಜಸ್ಥಾನದ ದೌಸಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. [ರಾಜ್ಯಸಭೆ ನಿವೃತ್ತರಿಗೆ, ಸಚಿನ್ ಗಲ್ಲ : ಹೇಮಾ ಮಾಲಿನಿ]
ಹೇಮಾಮಾಲಿನಿ ಅವರ ತಲೆ, ಹಣೆ, ಬೆನ್ನು ಮತ್ತು ಕಾಲುಗಳಿಗೆ ಗಾಯವಾಗಿದೆ. ಅವರನ್ನು ಜೈಪುರದ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಮಾಮಾಲಿನಿ ಅವರ ಹಣೆಗೆ ಹೊಲಿಗೆ ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. [ಕಾರು ಅಪಘಾತದ ಚಿತ್ರಗಳು]
ಆಲ್ಟೋ ಕಾರಿನಲ್ಲಿದ್ದ 4 ವರ್ಷದ ಬಾಲಕಿ ಸೋನಂ ಮೃತಪಟ್ಟಿದ್ದು ಇತರ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ. [ಪಿಟಿಐ ಚಿತ್ರಗಳು]

ರಾಜಸ್ಥಾನದಲ್ಲಿ ಹೇಮಮಾಲಿನಿ ಕಾರು ಅಪಘಾತ
ಮಥುರಾದ ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಗುರುವಾರ ರಾತ್ರಿ ಎದುರಿನಿಂದ ಬರುತ್ತಿದ್ದ ಮಾರುತಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ರಾಜಸ್ಥಾನದ ದೌಸಾ ಬಳಿಯ ಹೆದ್ದಾರಿಯಲ್ಲಿ ಈ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಜೈಪುರಕ್ಕೆ ತೆರಳುತ್ತಿದ್ದರು
ಹೇಮಾಮಾಲಿನಿ ಅವರು ಮಥುರಾದಿಂದ ಜೈಪುರಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಆಲ್ಟೋ ಕಾರು ಜೈಪುರದಿಂದ ಲಾಸ್ಲೊತ್‌ಗೆ ತೆರಳುತ್ತಿತ್ತು. ಆಲ್ಟೋ ಕಾರಿನಲ್ಲಿ ಪುರುಷ, ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳಿದ್ದರು. ಹೇಮಾಮಾಲಿನಿ ಅವರ ಕಾರಿನಲ್ಲಿ ಚಾಲಕ ಸೇರಿ ಮೂವರಿದ್ದರು.

ಹೇಮಾಮಾಲಿನಿ ಆಸ್ಪತ್ರೆಗೆ ದಾಖಲು
ಅಪಘಾತದಿಂದಾಗಿ ಹೇಮಾಮಾಲಿನಿ ಅವರ ತಲೆ, ಹಣೆ, ಬೆನ್ನು ಮತ್ತು ಕಾಲುಗಳಿಗೆ ಗಾಯವಾಗಿದೆ. ಅವರನ್ನು ಜೈಪುರದ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಮಾಮಾಲಿನಿ ಅವರ ಹಣೆಗೆ ಹೊಲಿಗೆ ಹಾಕಲಾಗಿದೆ.

ಮಗು ಸಾವು, ಮೂವರಿಗೆ ಗಾಯ
ಆಲ್ಟೋ ಕಾರಿನಲ್ಲಿದ್ದ 4 ವರ್ಷದ ಬಾಲಕಿ ಸೋನಂ ಅಪಘಾತದಿಂದ ಮೃತಪಟ್ಟಿದ್ದು ಇತರ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
| Array |
ಉತ್ತಮ ಚಿಕಿತ್ಸೆ ನೀಡಲಾಗುತ್ತದೆ
ಅಪಘಾತದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಟ್ವಿಟ್ ಮಾಡಿದ್ದಾರೆ.

ಎಫ್‌ಐಆರ್ ದಾಖಲು
ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಾಮಾಲಿನಿ ಅವರ ಕಾರು ಚಾಲಕನ ವಿರುದ್ಧ ರಾಜಸ್ಥಾನ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಶುಕ್ರವಾರ ಚಾಲಕನ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಹೋಗಿದ್ದರು
ಹೇಮಾಮಾಲಿನಿ ಅವರಿಗೆ ಕರ್ನಾಟಕ ನಂಟಿದೆ. 2011ರಲ್ಲಿ ರಾಜ್ಯ ಸಭೆಗೆ ಕರ್ನಾಟಕದಿಂದ ಅವರನ್ನು ಆರಿಸಿ ಕಳಿಸಲಾಗಿತ್ತು. 2014ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, 5,74,633 ಮತಗಳನ್ನು ಪಡೆದು ಜಯಗಳಿಸಿದ್ದಾರೆ.












Click it and Unblock the Notifications