ಕ್ರಿಕೆಟರ್ ಶ್ರೀಶಾಂತ್ ಮದುವೆ ಸಂಭ್ರಮಾಚರಣೆ

ಗುರುವಾಯೂರು, ಡಿ.13: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಆರೋಪಿಯಾಗಿ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಮಧ್ಯಮ ವೇಗಿ ಎಸ್ .ಶ್ರೀಶಾಂತ್ ತನ್ನ ದೀರ್ಘ ಕಾಲದ ಗೆಳತಿ, ಜೈಪುರ ರಾಜಮನೆತನದ ಭುವನೇಶ್ವರಿ ಕುಮಾರಿ ಅವರನ್ನು ಗುರುವಾರ, ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ವರಿಸಿದ್ದಾರೆ.

ಗುರುವಾರ ಬೆಳಗ್ಗೆ ಕೇರಳ ಸಂಪ್ರದಾಯದಂತೆ ಕೊಚ್ಚಿಯ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು. ವಿವಾಹಪೂರ್ವ ಕಾರ್ಯಕ್ರಮಗಳು ಬುಧವಾರ ಖಾಸಗಿ ಹೋಟೆಲ್ ನಲ್ಲಿ ನಡೆದಿವೆ. ಉಭಯ ಕುಟುಂಬದ ಅಥಿತಿಗಳು ಮತ್ತು ಆಪ್ತರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ವಿವಾಹ ಸಮಾರಂಭಕ್ಕಾಗಿ ಭುವನೇಶ್ವರಿ ಕುಮಾರಿ ಕುಟುಂಬ ಡಿ.8ರಂದೇ ಕೊಚ್ಚಿಗೆ ಆಗಮಿಸಿತ್ತು. ವಿವಾಹದ ನಂತರ ಶ್ರೀಶಾಂತ್ ದಂಪತಿ ಎರ್ನಾಕುಲಂ ಜಿಲ್ಲೆಯಲ್ಲಿರುವ ಶ್ರೀಶಾಂತ್ ಅವರ ಪೂರ್ವಿಕರ ಊರಾದ ಕೋಥಮಂಗಲಂ ನಿವಾಸಕ್ಕೆ ತೆರಳಿದರು.

ಐಪಿಎಲ್ 6 ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾಂತ್, ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪದಡಿ ದೆಹಲಿ ಪೊಲೀಸರು ಮೇ 16ರಂದು ಬಂಧನಕ್ಕೊಳಗಾಗಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪ್ರಸ್ತುತ ಶ್ರೀಶಾಂತ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

'ಬಿಸಿಸಿಐ ನಿರ್ಣಯ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ಇದು ಅತ್ಯಂತ ಆಶ್ಚರ್ಯಕರವಾಗಿದೆ. ಕೋರ್ಟಿನಲ್ಲಿ ಇನ್ನೂ ಕೇಸ್ ಬಾಕಿಯಿದೆ. ಜಾಮೀನು ಸಿಕ್ಕಿದೆ. ಬಿಸಿಸಿಐ ನಡೆ ಅಚ್ಚರಿ ತಂದಿದೆ' ಎಂದು ಶ್ರೀಶಾಂತ್ ಪ್ರತಿಕ್ರಿಯಿಸಿದ್ದರು. ಶ್ರೀಶಾಂತ್ ಮತ್ತು ಭುವನೇಶ್ವರಿ ಕುಮಾರಿ ಅವರ ಮದುವೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬರುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು, ಅದರೆ, ಮೋದಿ ಅವರು ಬಂದಿರಲಿಲ್ಲ.(ಪಿಟಿಐ)

ಸಂಭ್ರಮದಲ್ಲಿ ಕುಟುಂಬ ವರ್ಗ

ಸಂಭ್ರಮದಲ್ಲಿ ಕುಟುಂಬ ವರ್ಗ

ಕೊಚ್ಚಿಯಲ್ಲಿರುವ ಶ್ರೀಶಾಂತ್ ಅವರ ಸೋದರಿಯ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತು. ಇಲ್ಲಿರುವುದು ಸಾಂದರ್ಭಿಕ ಚಿತ್ರ.

ದೋಷ ನಿವಾರಣೆ ಪೂಜೆ

ದೋಷ ನಿವಾರಣೆ ಪೂಜೆ

ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪಿಯಾಗಿದ್ದ ಶ್ರೀಶಾಂತ್ ಅವರು ಜಾಮೀನು ಪಡೆದು ಜೈಲಿನಿಂದ ಹೊರಬಂದ ಮೇಲೆ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು. ಕೊಚ್ಚಿಯ ಪೂರ್ಣಾತ್ರೇಯಸ್ ದೇಗುಲದಲ್ಲಿ ತುಲಾಭಾರ ಸೇವೆ ಸಲ್ಲಿಸಿದ್ದರು. ಮದುವೆಗೂ ದೋಷ ನಿವಾರಣೆಗೆ ಹಲವು ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದರು.

ದೀರ್ಘ ಕಾಲದ ಗೆಳತಿ ಜತೆ ಮದುವೆ

ದೀರ್ಘ ಕಾಲದ ಗೆಳತಿ ಜತೆ ಮದುವೆ

ಶ್ರೀಶಾಂತ್ ತನ್ನ ದೀರ್ಘ ಕಾಲದ ಗೆಳತಿ, ಜೈಪುರ ರಾಜಮನೆತನದ ಭುವನೇಶ್ವರಿ ಕುಮಾರಿ ಅವರನ್ನು ಗುರುವಾರ, ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ವರಿಸಿದ್ದಾರೆ.

ಕೇರಳ ಸಂಪ್ರದಾಯದಂತೆ

ಕೇರಳ ಸಂಪ್ರದಾಯದಂತೆ

ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು

ಸರಳ ವಿವಾಹ ಸಮಾರಂಭ

ಸರಳ ವಿವಾಹ ಸಮಾರಂಭ

ಸರಳವಾಗಿ ವಿವಾಹ ಸಮಾರಂಭ ನೆರವೇರಿತು. ಶ್ರೀಶಾಂತ್ ದಂಪತಿ ಎರ್ನಾಕುಲಂ ಜಿಲ್ಲೆಯಲ್ಲಿರುವ ಶ್ರೀಶಾಂತ್ ಅವರ ಪೂರ್ವಿಕರ ಊರಾದ ಕೋಥಮಂಗಲಂ ನಿವಾಸಕ್ಕೆ ತೆರಳಿದರು.

ಸಂಭ್ರಮದಲ್ಲಿ ಕುಟುಂಬ ವರ್ಗ

ಸಂಭ್ರಮದಲ್ಲಿ ಕುಟುಂಬ ವರ್ಗ

ಕ್ರಿಕೆಟರ್ ಶ್ರೀಶಾಂತ್ ಮದುವೆ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+