ಚಿತ್ರ: ದೇಶದ ವಿವಿಧೆಡೆ ಬುದ್ಧ ಪೂರ್ಣಿಮಾ ಆಚರಣೆ

ಬೆಂಗಳೂರು, ಮೇ.14: ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದ ಭಗವಾನ್ ಬುದ್ಧನ 2558ನೇ ಜನ್ಮ ದಿನಾಚರಣೆ ಮಹೋತ್ಸವವನ್ನು ಭಕ್ತಿ ಶ್ರದ್ಧೆ, ಧ್ಯಾನದಿಂದ ದೇಶದ ವಿವಿಧೆಡೆ ಬುಧವಾರ ಆಚರಿಸಲಾಗಿದೆ.

ಬೌದ್ಧಧರ್ಮದಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಕೆಲವೊಮ್ಮೆ 'ಬುದ್ಧ' ಪದವನ್ನು ಕೇವಲ ಬೌದ್ಧಧರ್ಮದ ಸ್ಥಾಪಕನಾದ ಸಿದ್ದಾರ್ಥ ಗೌತಮನನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ. ಬುದ್ದ ಸಂದೇಶ: ಸಂಶೋದನೆ,ತಿಳುವಳಿಕೆ,ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು.ಇದುವೇ ಬುದ್ಧ ಧಮ್ಮ.

ಜೆನ್ ಕಥೆ ತುಣುಕು: ಭಗವಾನ್ ಗೌತಮ ಬುದ್ಧನನ್ನು ಒಮ್ಮೆ ಒಬ್ಬ ಶಿಷ್ಯ ಪ್ರಶ್ನಿಸಿದ. 'ಧ್ಯಾನ ಎಂದರೇನು?'
ಜೆನ್ ಸಂಸ್ಥಾಪಕ ಅದಕ್ಕೆ ಉತ್ತರಿಸುತ್ತಾ, 'ಸ್ತಂಭನ'(ತಡೆಯುವಿಕೆ) ಎಂದ.
ಮಾತು ಮುಂದುವರೆಸುತ್ತಾ, 'ಯಾವ ತಡೆ ಹಿಡಿಯಬಹುದೋ, ಆಗ ಅದು ಧ್ಯಾನ ಎನಿಸುತ್ತದೆ'.
ನಮ್ಮ ಆಲೋಚನೆ ಲಹರಿ ಸದಾ ಎಲ್ಲೆಡೆ ಹರಿಯುತ್ತಿರುತ್ತದೆ. ಮನಸ್ಸು ಚಂಚಲ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಈ ಆಲೋಚನೆಗಳನ್ನು ತಡೆಹಿಡಿಯುವ ಕ್ರಮವೇ ಧ್ಯಾನ. ಸಂಪೂರ್ಣ ತಡೆ ಹಿಡಿಯಲ್ಪಟ್ಟ ಸ್ಥಿತಿಯೇ ಧ್ಯಾನಾವಸ್ಥೆ' ಎಂದನು ಬುದ್ಧನ ಪ್ರಕಾರ ಧ್ಯಾನ ಎಂದರೆ "ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ". ಬುದ್ಧ ಪೂರ್ಣಿಮಾ ದಿನ ಆಚರಣೆ ಚಿತ್ರಗಳನ್ನು ಮುಂದೆ ನೋಡಿ...

ಮುಂಬೈನಲ್ಲಿ ಬುದ್ಧ ಪೂರ್ಣಿಮಾ ಆಚರಣೆ

ಮುಂಬೈನಲ್ಲಿ ಬುದ್ಧ ಪೂರ್ಣಿಮಾ ಆಚರಣೆ

ಮುಂಬೈನಲ್ಲಿ ಬೌದ್ಧ ಭಿಕ್ಷುಗಳಂತೆ ವಸ್ತ್ರ ಧರಿಸಿದ ಮಕ್ಕಳು ಬುದ್ಧ ಪೂರ್ಣಿಮಾ ಆಚರಣೆ ಮಾಡಿದರು.

ಕೋಲ್ಕತ್ತಾದಲ್ಲಿ ಪವಿತ್ರ ದಾರ ಕಟ್ಟುವಿಕೆ

ಕೋಲ್ಕತ್ತಾದಲ್ಲಿ ಪವಿತ್ರ ದಾರ ಕಟ್ಟುವಿಕೆ

ಕೋಲ್ಕತ್ತಾದಲ್ಲಿ ಬೌಧ ಭಿಕ್ಷುವೊಬ್ಬರು ಮಗುವಿಗೆ ಪವಿತ್ರ ದಾರವನ್ನು ಕಟ್ಟುತ್ತಿದ್ದಾರೆ. ಮಹಾಬೋಧಿ ದೇಗುಲದಲ್ಲಿ ಬುದ್ಧನ 2558ನೇ ಜನ್ಮದಿನಾಚರಣೆ ಸಂಭ್ರಮ ಕಾಣಬಹುದು. ಪಿಟಿಐ ಚಿತ್ರ

ಉತ್ತರಪ್ರದೇಶದಲ್ಲಿ ಬುದ್ಧ ಪೂರ್ಣಿಮಾ

ಉತ್ತರಪ್ರದೇಶದಲ್ಲಿ ಬುದ್ಧ ಪೂರ್ಣಿಮಾ

ಉತ್ತರಪ್ರದೇಶದಲ್ಲಿ ಬುದ್ಧ ಪೂರ್ಣಿಮಾ ಆಚರಣೆಗಾಗಿ ಚಾಂದಾಸಿ ಜಿಲ್ಲೆಯಲ್ಲಿ ತುಂಬಿದ ರೈಲುಗಳಲ್ಲಿ ಭಕ್ತಾದಿಗಳು ಸಾಗುತ್ತಿರುವ ಚಿತ್ರPTI Photo

ಅಲಹಾಬಾದಿನಲ್ಲಿ ಪವಿತ್ರ ಸ್ನಾನ

ಅಲಹಾಬಾದಿನಲ್ಲಿ ಪವಿತ್ರ ಸ್ನಾನ

ಅಲಹಾಬಾದಿನಲ್ಲಿ ಹಿಂದೂ ಭಕ್ತಾದಿಗಳು ಬುದ್ಧ ಪೂರ್ಣಿಮಾ ಅಂಗವಾಗಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು

ಬಿಹಾರ ಸಿಎಂರಿಂದ ಬುದ್ಧ ಪೂರ್ಣಿಮಾ

ಬಿಹಾರ ಸಿಎಂರಿಂದ ಬುದ್ಧ ಪೂರ್ಣಿಮಾ

ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಂದ ಕಲ್ಯನ್ ಬಿಘಾದ ದೇಗುಲದಲ್ಲಿ ಬುದ್ಧ ಪೂರ್ಣಿಮಾ ಆಚರಣೆ.

ಗಯಾದಲ್ಲಿ ವಿಯಟ್ನಾಂ ಭಕ್ತರು

ಗಯಾದಲ್ಲಿ ವಿಯಟ್ನಾಂ ಭಕ್ತರು

ಗಯಾದ ಮಹಾಬೋಧಿ ದೇಗುಲದಲ್ಲಿ ವಿಯಟ್ನಾಂ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಕೋಲ್ಕತ್ತಾದಲ್ಲಿ ಬುದ್ಧ ಜಯಂತಿ ಆಚರಣೆ

ಕೋಲ್ಕತ್ತಾದಲ್ಲಿ ಬುದ್ಧ ಜಯಂತಿ ಆಚರಣೆ

ಕೋಲ್ಕತ್ತಾದಲ್ಲಿ ಭಕ್ತರಿಂದ ಬುದ್ಧ ಜಯಂತಿ ಆಚರಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+