• search
For Quick Alerts
ALLOW NOTIFICATIONS  
For Daily Alerts

  ಶನಿವಾರದ ಸುದ್ದಿ : ಹರ್ಯಾಣದಲ್ಲಿ ಶಂಕಿತ ದನಗಳ್ಳನ ಬರ್ಬರ ಹತ್ಯೆ

  By Prasad
  |

  ನವದೆಹಲಿ, ಆಗಸ್ಟ್ 04 : ಗೋವುಗಳ ಕಳ್ಳಸಾಗಣೆ ಮಾಡುವವರ ಹತ್ಯೆಯಾಗುತ್ತಿರುವ ವಿರುದ್ಧ ದನಿ ಜೋರಾಗುತ್ತಿರುವ ಸಂದರ್ಭದಲ್ಲಿಯೇ ಹರ್ಯಾಣದಲ್ಲಿ ಶಂಕಿತ ದನಗಳ್ಳನನ್ನು ಗ್ರಾಮಸ್ಥರು ಬಡಿದು ಕೊಂಡಿದ್ದಾರೆ.

  ಬೆಹರೋಲಾ ಗ್ರಾಮದಲ್ಲಿ ಈ ಘಟನೆ ಆಗಸ್ಟ್ 3ರ ಬೆಳಗಿನ ಜಾವ ನಡೆದಿದ್ದು, ಹತ್ಯೆಯಾದವನ ಜೊತೆಗಿದ್ದ ಇನ್ನಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಹೋದರರ ವಿರುದ್ಧ ಕೇಸನ್ನು ದಾಖಲಿಸಲಾಗಿದೆ.

  ***
  ಕೈಯಲ್ಲಿ ಚೂರಿ ಹಿಡಿದು ದೆಹಲಿಯ ಕೇರಳ ಭವನವನ್ನು ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ಭವನದಲ್ಲಿದ್ದರು.

  ಆ ಅಪರಿಚಿತ ವ್ಯಕ್ತಿ ಕೈಯಲ್ಲಿ ಏನೇನೋ ದಾಖಲೆಗಳನ್ನು ಹಿಡಿದುಕೊಂಡು ಕೇರಳ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ. ಆತ ಶೇ.80ರಷ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎನ್ನಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ***
  ಭೂಸೇನೆಗೆ ಸೇರಿದ ಭೂಮಿಯನ್ನು ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ.

  ಮೆಟ್ರೋ ಯೋಜನೆಗೆ ರಕ್ಷಣಾ ಇಲಾಖೆ ಭೂಮಿ ನೀಡಲು ರಕ್ಷಣಾ ಮಂತ್ರಿ ಒಪ್ಪಿಗೆ

  ಇಂದು 3.30ಕ್ಕೆ ನಿರ್ಮಲಾ ಸೀತಾರಾಮನ್ ಅವರು 'ಡಿಫೆನ್ಸ್ ಇಂಡಿಯಾ ಸ್ಟಾರ್ಟಪ್ ಚಾಲೆಂಜ್' ಅನ್ನು ಎಚ್ಎಎಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಲಾಂಚ್ ಮಾಡಲಿದ್ದು, ರಕ್ಷಣಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಯುವ ಸಂಶೋಧಕರೊಂದಿಗೆ ಸಂವಾದ ನಡೆಸಲಿದ್ದಾರೆ.

  ***
  ನವದೆಹಲಿಯಲ್ಲಿ ಇಂದು ನಡೆಯುತ್ತಿರುವ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣದಿಂದಾಗಿ ಭಾಗವಹಿಸುತ್ತಿಲ್ಲ. ಲೋಕಸಭೆ ಚುನಾವಣೆಗೆ ತಯಾರಿ, ಪ್ರಧಾನಿ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಸಭೆಯ ನೇತೃತ್ವ ವಹಿಸಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್, ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ, ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಗುಲಾಮ್ ನಬಿ ಆಝಾದ್ ಮುಂತಾದವರು ಭಾಗವಹಿಸುತ್ತಿದ್ದಾರೆ.

  ***
  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ನಿವಾಸವನ್ನು ಅನುಮತಿ ಇಲ್ಲದೆ ಪ್ರವೇಶಿಸಿದ್ದಲ್ಲದೆ, ಕರ್ತವ್ಯನಿರತ ಪೇದೆಯ ಮೇಲೆ ಹಲ್ಲೆ ಮಾಡಿದ ಮುರ್ಫಾಸ್ ಶಾ ಎಂಬ ವ್ಯಕ್ತಿಯನ್ನು ರಕ್ಷಣಾ ಸಿಬ್ದಂದಿ ಇಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಆತ ಅಲ್ಲಿಯ ಕೆಲ ವಸ್ತುಗಳಿಗೂ ಹಾನಿ ಮಾಡಿದ್ದಾನೆ.

  ***
  ಶನಿವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಶೋಪಿಯನ್ ನಲ್ಲಿ ಭಾರತೀಯ ಸೈನಿಕರು ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಘಟನೆ ಕಿಲ್ಲೋರಾ ಗ್ರಾಮದಲ್ಲಿ ನಡೆದಿದ್ದು, ಉಗ್ರರಿಗೆ ಭಾರತೀಯ ಸೈನಿಕರು ತಿರುಗೇಟು ನೀಡುತ್ತಿದ್ದಾಗ ಸ್ಥಳೀಯರು ರಕ್ಷಣಾ ಸಿಬ್ಬಂದಿ ವಾಹನಕ್ಕೆ ಕಲ್ಲುಗಳನ್ನು ಎಸೆದಿದ್ದಾರೆ.

  ಕಾಶ್ಮೀರ: ಐವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Important National News in Kannada. Sonia Gandhi will not be attending the Congress Working Committee (CWC) meeting due to illness.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more