ಆಗಸ್ಟ್‌ 30ರವರೆಗೆ ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ; IMD

ನವದೆಹಲಿ, ಆಗಸ್ಟ್‌ 27: ಮುಂಗಾರು ಪ್ರಭಾವದಿಂದಾಗಿ ಕೆಲವು ರಾಜ್ಯಗಳಲ್ಲಿ ಮಳೆಯಾಗುತ್ತಿದ್ದು, ಆಗಸ್ಟ್‌ 30ರವರೆಗೂ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರದ ನಂತರವೂ ಈಶಾನ್ಯ ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ. ಮುಂದಿನ ಎರಡು ದಿನಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ ಹಾಗು ಸಿಕ್ಕಂನಲ್ಲಿ ಶುಕ್ರವಾರದವರೆಗೂ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಈಶಾನ್ಯ ರಾಜ್ಯಗಳೊಂದಿಗೆ ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮಳೆಯಾಗಲಿರುವ ಸೂಚನೆ ನೀಡಲಾಗಿದೆ.

ಅರುಣಾಚಲ, ಅಸ್ಸಾಂ, ಮೇಘಾಲಯದಲ್ಲಿ ಕೂಡ ಕೆಲವು ದಿನಗಳವರೆಗೂ ಮಳೆ ಮುಂದುವರೆಯುತ್ತದೆ ಎಂದು ತಿಳಿಸಲಾಗಿದೆ. ಪೂರ್ವ ಭಾರತದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ನೈಋತ್ಯ ಹಾಗೂ ಮಧ್ಯ ಭಾರತದಲ್ಲಿ ಮುಂದಿನ ಮೂರು ದಿನಗಳವರೆಗೂ ಚದುರಿದ ಮಳೆಯಾಗುತ್ತದೆ ಎಂದು ತಿಳಿಸಿದೆ. ಮುಂದೆ ಓದಿ...

ತಮಿಳುನಾಡು, ಕರ್ನಾಟಕ, ಕೇರಳದಲ್ಲಿ ಮಳೆ

ತಮಿಳುನಾಡು, ಕರ್ನಾಟಕ, ಕೇರಳದಲ್ಲಿ ಮಳೆ

ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮುಂದಿನ ಎರಡು ದಿನಗಳ ಕಾಲ ಅಧಿಕ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಈ ರಾಜ್ಯಗಳಲ್ಲಿ ಆಗಸ್ಟ್‌ 28ರಿಂದ ಮಳೆ ಚುರುಕುಪಡೆಯುತ್ತದೆ. ಆಗಸ್ಟ್‌ 28ರಿಂದ 30ರವೆಗೂ ಈ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತದೆ ಎಂದು ತಿಳಿಸಿದೆ.

ತಮಿಳುನಾಡು, ಕೇರಳ ಹಾಗೂ ಮಾಹೆಯ ಘಾಟಿ ಪ್ರದೇಶಗಳಲ್ಲಿ ಆಗಸ್ಟ್ 29 ಹಾಗೂ ಆಗಸ್ಟ್‌ 30ರವರೆಗೆ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದೆ. ಕೇರಳದಲ್ಲಿ ಅತ್ಯಧಿಕ ಮಳೆ ಸೂಚನೆ ನೀಡಲಾಗಿದೆ.

ವಾಯವ್ಯ, ಕೇಂದ್ರ ಭಾರತದಲ್ಲಿ ಆ.28ರ ನಂತರ ಹೆಚ್ಚಾಗಲಿದೆ ಮಳೆ

ವಾಯವ್ಯ, ಕೇಂದ್ರ ಭಾರತದಲ್ಲಿ ಆ.28ರ ನಂತರ ಹೆಚ್ಚಾಗಲಿದೆ ಮಳೆ

ಉತ್ತರಾಖಂಡ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಮಳೆ ಚಟುವಟಿಕೆ ಮುಂದುವರೆಯಲಿದೆ. ಆಗಸ್ಟ್‌ 29ರಂದು ಉತ್ತಾಖಂಡದಲ್ಲಿ ವ್ಯಾಪಕ ಮಳೆ ಮುಂದುವರೆಯುತ್ತದೆ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಆಗಸ್ಟ್‌ 28ರಂದು ಅತಿ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ತಿಳಿಸಿದೆ. ವಾಯವ್ಯ ಹಾಗೂ ಕೇಂದ್ರ ಭಾರತದಲ್ಲಿ ಆಗಸ್ಟ್‌ 28ರವರೆಗೆ ಕಡಿಮೆ ಮಟ್ಟದ ಮಳೆಯಾಗಲಿದ್ದು, ಆನಂತರ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಇಲಾಖೆ ತಿಳಿಸಿದೆ.

ಆಗ್ನೇಯ/ನೈಋತ್ಯ ಮಾರುತಗಳ ಪ್ರಭಾವ

ಆಗ್ನೇಯ/ನೈಋತ್ಯ ಮಾರುತಗಳ ಪ್ರಭಾವ

ಆಗಸ್ಟ್‌ 27ರಂದು ನೈಋತ್ಯ ಹಾಗೂ ಪಶ್ಚಿಮ ಕೇಂದ್ರ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದೆ. ಜೊತೆಗೆ ಮುಂಗಾರು ಆಗಸ್ಟ್‌ 27ರಿಂದ ಪೂರ್ವದಿಂದ ದಕ್ಷಿಣಕ್ಕೆ ಚಲಿಸಲಿದೆ. ಈ ಕಾರಣವಾಗಿ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದೆ. ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತಕ್ಕೆ ಪ್ರಬಲ ಆಗ್ನೇಯ/ ನೈಋತ್ಯ ಮಾರುತಗಳು ಆಗಸ್ಟ್‌ 27ರವರೆಗೆ ಬೀಸಲಿದ್ದು, ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಆಗಸ್ಟ್‌ ಎರಡನೇ ವಾರದಲ್ಲಿ ವಿರಾಮ ಪಡೆದುಕೊಂಡಿದ್ದ ಮಳೆ ತಿಂಗಳ ಅಂತ್ಯದಲ್ಲಿ ಚುರುಕುಪಡೆಯಲಿದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಮುಂದಿನ ಎರಡು ದಿನ ಅಧಿಕ ಮಳೆ

ಕರ್ನಾಟಕದಲ್ಲಿ ಮುಂದಿನ ಎರಡು ದಿನ ಅಧಿಕ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಆಗಸ್ಟ್‌ 28ರಿಂದ, ಎರಡು ದಿನಗಳ ಅವಧಿ ಎರಡು ದಿನ ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಆ. 28ರಿಂದ 2 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 30ರವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+