IMD India Weather: ದೇಶದ ಈ ರಾಜ್ಯಗಳಲ್ಲಿ ಆ.14 ರವರೆಗೆ ಮಳೆ, ಪ್ರದೇಶವಾರು ಮುನ್ಸೂಚನೆ
ಬೆಂಗಳೂರು, ಆಗಸ್ಟ್ 11: ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಿವಿಧೆಡೆ ಮುಂಗಾರು ಮಳೆ ಮುಂದಿನ ಐದು ದಿನಗಳವರೆಗೆ ಮತ್ತೆ ಮುಂದುವರಿಯುವ ಸಾಧ್ಯತೆಗಳು ಇವೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಬಿಹಾರ, ಸಿಕ್ಕಿಂ, ಪಶ್ಚಿಮ ಬಂಗಾಳ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ.
ಸಮುದ್ರ ಮಟ್ಟದಲ್ಲಿ ಸ್ಟ್ರಫ್ ಸೇರಿದಂತೆ ಕೆಲವು ಬದಲಾವಣೆಗಳ ಪರಿಣಾಮವಾಗಿ ಅನೇಕ ದಿನಗಳ ಕಾಲ ಈ ರಾಜ್ಯಗಳಲ್ಲಿ ಮಳೆ ಸುರಿದಿತ್ತು. ಇದೀಗ ತುಸು ಕ್ಷೀಣಿಸಿದ್ದು, ಸಾಧಾರಣದಿಂದ ಉತ್ತಮವಾಗಿ, ಕೆಲವೆಡೆ ಹಗುರ ಮಳೆ ಆಗಲಿದೆ ಎಂದು ತಿಳಿದು ಬಂದಿದೆ. ಈ ಮಳೆ ಮುಂದಿನ ವಾರದವರೆಗೆ ಹಿಮಾಲಯ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿರಲಿದೆ.

ಇನ್ನೂ ಚಂಡಮಾರುತದ ಪರಿಚಲನೆ ಲಕ್ಷಣಗಳು ಕಡಿಮೆ ಉಷ್ಣವಲಯ ಈಶಾನ್ಯ ಉತ್ತರ ಪ್ರದೇಶ ಮತ್ತು ಪಕ್ಕದ ವಾಯುವ್ಯ ಬಿಹಾರದಲ್ಲಿ ಕಂಡು ಬಂದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮುಂದಿನ ವಾರದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಕ್ಷೀಣಿಸುವ ನೀರಿಕ್ಷೆ ಇದೆ. ಭಾರತದ ವಾಯುವ್ಯ ಪ್ರದೇಶದಲ್ಲಿ ಹಗುರದಿಂದ ಮಧ್ಯಮ ಪ್ರಮಾಣದಲ್ಲಿ ಮಳೆ ಆಗಲಿದ್ದು, ಒಂದೆರಡು ಕಡೆ ಜೋರಾಗಿ ಸುರಿಯಲಿದೆ.
ಪ್ರದೇಶವಾರು ಮಳೆ ಮುನ್ಸೂಚನೆ ಮಾಹಿತಿ
ಭಾರತದ ವಾಯುವ್ಯ ಭಾಗದ ರಾಜ್ಯಗಳಲ್ಲಿ, ಪೂರ್ವ ಉತ್ತರ ಪ್ರದೇಶದ ಉತ್ತರ ಭಾಗಗಳಲ್ಲಿ ಹಾಗೂ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಆಗಸ್ಟ್14ರವರೆಗೆ ಭಾರೀಯಿಂದ ಅತ್ಯಧಿಕ ಮಳೆ ಬೀಳಲಿದೆ. ಇನ್ನೂ ಆಗಸ್ಟ್ 13ರ ವರೆಗೆ ಪಂಜಾಬ್, ಹರಿಯಾಣದಲ್ಲಿ ಹಗುರ ಮಳೆ ಸುರಿಯಲಿದೆ.

ಉತ್ತರ ಭಾರತದ ಉತ್ತರ ಪ್ರದೇಶ ಮತ್ತು ಜಮ್ಮು, ಉತ್ತರಾಖಂಡದಲ್ಲಿ 13 ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ವಾಯುವ್ಯ ಭಾರತದ ಇನ್ನುಳಿದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಬಹುದು ಎಂದು ಇಲಾಖೆ ತಿಳಿಸಿದೆ.
ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಹಾಗೂ ಮಿಜೋರಾಂ ಇದೇ ವಾರದ ಆರಂಭದಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಅದೇ ಪ್ರದೇಶದಲ್ಲಿ ಸಾಧಾರಣವಾಗಿ ಮಳೆ ಆಗಲಿದೆ.
ಕೆಲವೆಡೆ ಭಾರಿ ಮಳೆ ನಿರೀಕ್ಷೆ
ಪೂರ್ವ ಭಾರತದ ಬಿಹಾರ, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಉತ್ತರ ಪ್ರದೇಶಗಳಲ್ಲಿ ಆಗಸ್ಟ್ ಆಗಸ್ಟ್ 16ರ ತನಕ ಹಾಗೂ ಗಂಗಾನದಿಯ ಪಶ್ಚಿಮ ಬಂಗಾಳ ಕೆಲವೆಡೆ ಆಗಸ್ಟ್ 12 ರಂದು ಭಾರೀ ಮಳೆ ಸುರಿಯಲಿದೆ. 10 ರಿಂದ 13 ರವರೆಗೆ ಬಿಹಾರದ ಉತ್ತರ ಭಾಗಗಳಲ್ಲಿ ಮತ್ತು ಆಗಸ್ಟ್ 11 ಮತ್ತು 12 ರಂದು ಸಿಕ್ಕಿಂನಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಭಾರತದ ಮಧ್ಯ ಭಾಗ ಹಾಗೂ ಪಶ್ಚಿಮ ಭಾಗದ ರಾಜ್ಯಗಳಲ್ಲಿ ಮತ್ತು ದಕ್ಷಿಣ ಪೆನಿನ್ಸುಲರ್ ಪ್ರದೇಶಗಳಲ್ಲಿ ಎರಡರಿಂದ ಮೂರು ದಿನ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದೆ. ಈ ಮೂಲಕ ವಿವಿಧೆಡೆ ಅಬ್ಬರಿಸಿದ್ದ ಮುಂಗಾರು ಈ ವಾರಾಂತ್ಯಕ್ಕೆ ಇಳಿಮುಖವಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications