IMD Weather Alert: ವಾಯುಭಾರ ಕುಸಿತ! ಮುಂದಿನ 5 ದಿನ ಬಿರುಗಾಳಿ ಮಳೆ ಎಚ್ಚರಿಕೆ, ಶಾಲೆಗಳಿಗೆ ರಜೆ ನಿರೀಕ್ಷೆ
IMD Weather Forecast: ಮುಂಗಾರು ಮಳೆ ದೇಶಾದ್ಯಂತ ಚುರುಕುಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಭಾಗಗಳಲ್ಲೂ ತೀವ್ರ ರೂಪದಲ್ಲಿ ಸುರಿಯುತ್ತಿದೆ. ಬೆಂಗಳೂರು, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿದೆ. ಈಗಾಗಲೇ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಹ ಸ್ಥಿತಿ ಉಂಟು ಮಾಡಿದೆ. ಭಾರೀ ಮಳೆಗೆ ಕೆಲ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 5 ದಿನ ಭಾರೀ ಮಳೆ ಮುಂದುವರಿಯಲಿದೆ.
ನಿರಂತರವಾಗಿ ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ಮುಂಗಾರು ಸ್ಟ್ರಫ್ ಬಿಕಾನೇರ್ ನಿಂದ ಸಾಗಿದ್ದು, ಬಂಗಾಳ ಕೊಲ್ಲಿಯ ಆಗ್ನೇಯಕ್ಕೆ ದಿಕ್ಕಿನತ್ತ ಸಾಗಿ ಹೋಗಲಿದೆ.

ವಿವಿಧೆ ವಾಯುಭಾರ ಕುಸಿತ, ವೈಪರೀತ್ಯಗಳು
ಮಧ್ಯಪ್ರದೇಶ ರಾಜ್ಯದ ಆಗ್ನೇಯ ಭಾಗ ಮತ್ತು ನೆರೆಹೊರೆ ಪ್ರದೇಶಗಳ ಮೇಲೆ ಚಂಡಮಾರುತದ ಪ್ರಸರಣ ಸಣ್ಣ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಇದರ ಪರಿಚಲನೆಯು ವಿದರ್ಭ ಮೂಲಕ ಸಾಗಲಿದೆ. ಇದು ಸಮುದ್ರ ಮಟ್ಟದಿಂದ 7.6 ಕಿ.ಮೀ ಎತ್ತರದಲ್ಲಿದೆ. ಇನ್ನೂ ದಕ್ಷಿಣ ಛತ್ತೀಸ್‌ಗಢದಿಂದ ಕೇರಳದ ಉತ್ತರ ಭಾಗದವರೆಗೂ ವಿದರ್ಭ ಮತ್ತು ನೆರೆಹೊರೆ ಮತ್ತು ಒಳನಾಡಿನ ಕರ್ನಾಟಕದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 5.8 ಮತ್ತು 7.6 ಕಿ.ಮೀ ಮಧ್ಯದಲ್ಲೊಂದು ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ.
ಉತ್ತರ ಪಾಕಿಸ್ತಾನ ಮತ್ತು ಪಕ್ಕದ ಪಂಜಾಬ್ ಮೇಲೆ ವೈಪರೀತ್ಯ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದಲ್ಲಿ ವಿಸ್ತರಿಸಿದೆ. ಅಸ್ಸಾಂ ಮತ್ತು ನೆರೆಹೊರೆಗಳ ಮೇಲೆ ಮೇಲ್ಭಾಗದ ವಾಯು ಚಂಡಮಾರುತ ಪರಿಚಲನೆ ಮುಂದುವರೆದಿದೆ. ಅದು ಸಮುದ್ರ ಮೇಲ್ಮೈನಿಂದ 1.5 ಕಿ.ಮೀ. ಎತ್ತರದಲ್ಲಿದೆ. ಇದೆಲ್ಲ ಕಾರಣಗಳಿಂದ ಮುಂದಿನ ಐದು ದಿನದಿಂದ ಒಂದು ವಾರದವರೆಗೆ ಸಾಧಾರಣದಿಂದ ವೈಪರೀತ್ಯ ಮಳೆ ನಿರೀಕ್ಷಿಸಲಾಗಿದೆ. ಯಾವೆಲ್ಲ ರಾಜ್ಯಗಳಿಗೆ ಭಾರೀ ಮಳೆ ಬರಲಿದೆ ಎಂಬ ಮುನ್ಸೂಚನೆ ಇಲ್ಲಿದೆ.
ಎಲ್ಲೆಲ್ಲಿ ಭಾರೀ ಮಳೆ ಸಂಭವ
ಈ ಮೇಲಿನ ಪ್ರಭಾವದಿಂದಾಗಿ ಮುಂದಿನ ಎರಡು ದಿನಗಳಲ್ಲಿ ಅರುಣಾಚಲ ಪ್ರದೇಶ, ಕರಾವಳಿ ಕರ್ನಾಟಕ, ಮಧ್ಯ ಮಹಾರಾಷ್ಟ್ರ ಮತ್ತು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಅಸ್ಸಾಂ ಮತ್ತು ಮೇಘಾಲಯ, ಪೂರ್ವ ರಾಜಸ್ಥಾನ, ಗುಜರಾತ್ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ ಮಧ್ಯಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲೂ ಭಾರೀ ಮಳೆ ಆಗಲಿದೆ. ಇದರಲ್ಲಿ ಬಹುತೇಕ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ.
ಪಂಜಾಬ್, ಹಿಮಾಲಯದ ಉಪ-ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ತೆಲಂಗಾಣ ಮತ್ತು ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ನಂತರದ ಮೂರು ದಿನಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಜಮ್ಮು-ಕಾಶ್ಮೀರ, ಜಾರ್ಖಂಡ್ ಮತ್ತು ತೆಲಂಗಾಣ, ಕರ್ನಾಟಕ, ದೆಹಲಿ, ಮಧ್ಯ ಪ್ರದೇಶ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಶಾಲೆ-ಕಾಲೇಜುಗಳಿಗೆ ರಜೆ ಸಾಧ್ಯತೆ?
ಇದರಿಂದಾಗಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದ ಒಂದೆರಡು ಜಿಲ್ಲೆಗಳಲ್ಲಿ ಭಾರೀ ಮಳೆ ಪ್ರಯುಕ್ತ ಶನಿವಾರವು ರಜೆ ನೀಡುವ ನಿರೀಕ್ಷೆ ಇದೆ. ಕರ್ನಾಟಕ ಕರಾವಳಿ ಎರಡು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಿರುವ ಐಎಂಡಿ ಬಿರುಗಾಳಿ ಸಹಿತ ಅತ್ಯಧಿಕ ಮಳೆಯ ಮುನ್ಸೂಚನೆ ನೀಡಿದೆ. ಇನ್ನೂ ಆಂಧ್ರಪ್ರದೇಶ, ಒಡಿಶಾ ಸೇರಿ ಇತರ ರಾಜ್ಯಗಳ ಕರಾವಳಿ ಭಾಗಕ್ಕೂ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಶನಿವಾರವು ಶಾಲೆ-ಕಾಲೇಜುಗಳಿಗೆ ರಜೆ ನೀಡುವ ಸಂಭವವಿದೆ.
ಕರಾವಳಿ ಭಾಗದಲ್ಲಿ ಬಿರುಗಾಳಿ ವೇಗ ಹೆಚ್ಚಳ
ನೈಋತ್ಯ, ಪೂರ್ವ-ಮಧ್ಯ ಅರೇಬ್ಬಿ ಸಮುದ್ರದ ಕೆಲವು ಭಾಗಗಳಲ್ಲಿ ಪ್ರತಿ ಗಂಟೆಗೆ 55 ಕಿ.ಮೀ ನಿಂದ 65 ಕಿ.ಮೀ ವರೆಗೆ ಬಿರುಗಾಳಿ ಬೀಸಲಿದೆ. ಕರ್ನಾಟಕ, ಕೇರಳ ಕರಾವಳಿ, ಲಕ್ಷದ್ವೀಪ, ಕೊಮೊರಿನ್ ಪ್ರದೇಶಗಳು ಸೇರಿದಂತೆ ಹಲವು ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ. ಕೆಲವೊಮ್ಮೆ ಗಂಟೆಗೆ 60 ಕಿ.ಮೀ.ವರೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಮಾನ ತಜ್ಞರು ಮಾಹಿತಿ ನೀಡಿದ್ದಾರೆ.












Click it and Unblock the Notifications