ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡಮಾನ್‌ ದ್ವೀಪಕ್ಕೆ 'ಪಬಕ್' ಸೈಕ್ಲೋನ್ ಲಗ್ಗೆ:ಎಲ್ಲೆಲ್ಲಿ ಮಳೆ ಸಾಧ್ಯತೆ?

|
Google Oneindia Kannada News

ನವದೆಹಲಿ, ಜನವರಿ 5: 'ಪಬಕ್' ಚಂಡಮಾರುತ ಗಾಳಿಯು ಥೈಲ್ಯಾಂಡ್‌ನಿಂದ ಅಂಡಮಾನ್ ದ್ವೀಪದ ಕಡೆಗೆ 16 ಕೆಎಂಪಿಎಚ್ ವೇಗದಲ್ಲಿ ಬೀಸುತ್ತಿದ್ದು ಜನವರಿ 5ರ ಸಂಜೆಯೊಳಗೆ ಅಂಡಮಾನ್ ದ್ವೀಪವನ್ನು ಪ್ರವೇಶಿಸುವ ಸಾಧ್ಯತೆ ಇದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಆಂಧ್ರಕ್ಕೆ ಚಂಡಮಾರುತ ಹೊಡೆತ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಆಂಧ್ರಕ್ಕೆ ಚಂಡಮಾರುತ ಹೊಡೆತ

ಅರಬ್ಬಿ ಸಮುದ್ರದಲ್ಲಿ ಜನವರಿ 7ರವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತವು ಅಂಡಮಾನ್‌ನಿಂದ ಜನವರಿ 5-7ರ ಒಳಗೆ ಅರಬ್ಬಿ ಸಮುದ್ರ ಪ್ರವೇಶಿಸಲಿದ್ದು ಜನವರಿ 8ರಂದು ಅರಬ್ಬಿ ಸಮುದ್ರವನ್ನು ಸಂಪೂರ್ಣವಾಗಿ ಆವರಿಸಲಿದೆ.

ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ

ಥೈಲ್ಯಾಂಡ್‌ನಿಂದ 8.5 ಡಿಗ್ರಿ ಅಕ್ಷಾಂಶದಲ್ಲಿ ಹಾಗೂ 99.7 ಡಿಗ್ರಿ ರೇಖಾಂಶದಲ್ಲಿ 820 ಕಿ.ಮೀ ಪೋಲಾರ್‌ ಬ್ಲೈರ್ ಗೆ ತಲುಪಿದೆ. ಅದು ಇಂದು ಅಂಡಮಾನ್ ಸಮುದ್ರವನ್ನು ಪ್ರವೇಶಿಸಲಿದೆ. ಬಳಿಕ ಜನವರಿ 6-7 ರಂದು 70-80 ಕೆಎಂಪಿಎಚ್ ವೇಗದಲ್ಲಿ ಮಯನ್ಮಾರ್ ಪ್ರವೇಶಿಸಲಿದೆ.

IMD issues alert over emergence of cyclone Pabuk into the Andaman Islands

ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಪುದುಚೆರಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಹೆಚ್ಚು ಮಳೆಯಾಗದಿದ್ದರೂ ಕೂಡ ಚಂಡಮಾರುತ ಪ್ರಭಾವವಿರಲಿದೆ. ಈಗಾಗಲೇ ಗಜ ಚಂಡಮಾರುತದಿಂದ ತತ್ತರಿಸಿರುವ ಕೆಲವು ರಾಜ್ಯಗಳಿಗೆ ಈಗ ಮತ್ತೊಂದು ಸೈಕ್ಲೋನ್ ಭೀತಿ ಎದುರಾಗಿದೆ.

English summary
Total suspension of fishing operation over Andaman Sea and adjoining southeast & eastcentral Bay of Bengal from 5-7 Jan& over eastcentral&adjoining southeast Bay of Bengal on 8 Jan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X