IMD Cyclone Forecast: ವಿವಿಧೆಡೆ ಹವಾಮಾನ ವೈಪರೀತ್ಯ ಉಲ್ಬಣ: ಈ ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ...Rain Alert

IMD Weather Forecast: ಪಶ್ಚಿಮ ಬಂಗಾಳದ ನದಿಯ ಮಧ್ಯ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ವಾಯುಭಾರ ಕುಸಿತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 23 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸಿದೆ. ಇಂದು ಮಂಗಳವಾರ ಜುಲೈ 15 ಬೆಳಗ್ಗೆ ಜಾರ್ಖಂಡ್ ಮೂಲಕ ವೇಗವಾಗಿ ಸಾಗಿದೆ. ಇದರಿಂದ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ವೈಪರೀತ್ಯವು ಸಮುದ್ರ ಹಾಗೂ ಭೂಮಿ ಮೇಲ್ಮೈನಲ್ಲಿ ಬಿರುಗಾಳಿ ಸಹಿತ ಬದಲಾವಣೆ ಆಗಿದೆ. ವಾಯುಭಾರ ಕುಸಿತ ಜಾರ್ಖಂಡ್‌ನಿಂದ ಧನ್ಬಾದ್ ನಿಂದ ಈಶಾನ್ಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿ, ಹಜಾರಿಬಾಗ್ ನಿಂದ ಪೂರ್ವಕ್ಕೆ 140 ಕಿ.ಮೀ ದೂರದಲ್ಲಿ ಮತ್ತು ಗಯಾದ ಪೂರ್ವ-ಆಗ್ನೇಯಕ್ಕೆ 200 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಈ ವೈಫರೀತ್ಯ ತೀವ್ರಗೊಂಡರೆ ಮತ್ತಷ್ಟು ಜೋರು ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

IMD Alert Monsoon Intensifies Over North India States Due to Low Pressure Over Jharkhand

ಜಾರ್ಖಂಡ್ ಮತ್ತು ಪಕ್ಕದ ದಕ್ಷಿಣ ಬಿಹಾರ ರಾಜ್ಯದಲ್ಲಿ, ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಗಳಲ್ಲಿ ಈ ಹವಾಮಾನ ವೈಪರಿತ್ಯಗಳು ತೀವ್ರತೆ ಸಹಿತ ಮುಂದುವರಿಯಲಿವೆ. ಇನ್ನೂ ಉತ್ತರ ರಾಜಸ್ಥಾನದ ಮಧ್ಯ ಭಾಗಗಳಲ್ಲಿ ಸ್ಪಷ್ಟವಾದ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಅದು ಇಂದು ಜುಲೈ 15ರಂದು ಬೆಳಗ್ಗೆ 05.30ಕ್ಕೆ ಕೊಂಚ ತೀವ್ರಗೊಂಡಿದೆ. ಆದರೆ ಕೇಂದ್ರ ಪ್ರದೇಶದಲ್ಲಿಯೇ ಇದ್ದು, ಎಲ್ಲಿಯೂ ಚಲಿಸಿಲ್ಲ ಎನ್ನಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ರಾಜಸ್ಥಾನದ ಪಶ್ಚಿಮ-ವಾಯುವ್ಯಕ್ಕೆ ನಿಧಾನವಾಗಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಭಾರೀ ಮಳೆ?

ಇಷ್ಟು ಮಾತ್ರವಲ್ಲದೇ ಅರಬ್ಬಿ ಸಮುದ್ರ ಭಾಗಗಳಲ್ಲೂ ಸ್ಟ್ರಫ್ ಉಂಟಾಗಿದೆ. ಇವೆಲ್ಲ ವೈಫರಿತ್ಯಗಳಿಂದ ಇದರಿಂದ ಗುಜರಾತ್, ಮಧ್ಯ ಪ್ರದೇಶ, ದೆಹಲಿ, ಉತ್ತರ ಪ್ರದೇಶ ಹಾಗೂ ಜಾರ್ಖಂಡ್, ಪಶ್ಚಿಮ ಬಂಗಾಳಕ, ತ್ರಿಪುರ, ಹರಿಯಾಣ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮುಂದಿನ ಮೂರು ದಿನ ಮುಂಗಾರು ಮಳೆ ಆರ್ಭಟ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರದ ಮುನ್ಸೂಚನೆಯಲ್ಲಿ ತಿಳಿಸಿದೆ.

ಜುಲೈ 16ರಂದು ಮಧ್ಯ ಪ್ರದೇಶ, ಜಾರ್ಖಂಡ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ನೆರೆ ಹೊರೆಯ ರಾಜ್ಯಗಳಲ್ಲಿ ಭಾರೀ ಮಳೆ ಬರಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಉತ್ತರ ಪ್ರದೇಶ, ತ್ರಿಪುರ, ಮಣಿಪುರ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಲಕ್ಷಣಗಳಿದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಇನ್ನುಳಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಅನೇಕ ಕಡೆಗಳಲ್ಲಿ ತುಂತುರು ಹಗುರ ಮಳೆ ಕೆಲವೆಡೆ ಭಾರೀ ಮಳೆ ಸುರಿಯುತ್ತಿದೆ. ಕರಾವಳಿ ರಾಜ್ಯಗಳಾದ ಒಡಿಶಾ, ಆಂಧ್ರ ಪ್ರದೇಶ, ಕೇರಳ ಮತ್ತು ಕರ್ನಾಟಕ ಭಾಗಗಳಲ್ಲಿ ಮುಂಗಾರು ತುಸು ಚುರುಕಾಗಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನಾ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+