ನಿಯಮ ಮೀರಿ ಅಮೆರಿಕದಲ್ಲಿದ್ದೀರಾ? ಕಾದಿದೆ ತಕ್ಕ ಶಾಸ್ತಿ!

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 15: ಬಿ 1- ಬಿ 2 ವೀಸಾ ವೀಸಾ ಪಡೆದು, ಅಮೆರಿಕಕ್ಕೆ ತೆರಳಿದ ನಂತರ ನಿಯಮಗಳನ್ನು ಉಲ್ಲಂಘಿಸಿ ಅಲ್ಲೇ ನೆಲೆಸಿರುವ ಭಾರತೀಯರ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಉದಾಹರಣೆಗೆ, ಬೆಂಗಳೂರಿನ ನಿವಾಸಿಯೊಬ್ಬರು 2014ರ ಸೆಪ್ಟಂಬರ್ ನಲ್ಲಿ ತಮ್ಮ ಸಂಬಂಧಿಕರ ಮದುವೆಯೊಂದರಲ್ಲಿ ಭಾಗವಹಿಸಲು ಬಿ 1- ಬಿ 2 ವೀಸಾ ಪಡೆದು ಫ್ಲೋರಿಡಾಕ್ಕೆ ತೆರಳಿದ್ದರೆಂದಿಟ್ಟುಕೊಳ್ಳೋಣ. ಅಮೆರಿಕದಲ್ಲಿ ತಮಗೆ ಇರಬಹುದಾದ ಅನೇಕ ಸಂಬಂಧಿಗಳ ಮನೆಗಳಿಗೆ ಭೇಟಿ ನೀಡುತ್ತಾ ತಿಂಗಳಾನುಗಟ್ಟಲೆ ಕಾಲ ತಳ್ಳಿದ ನಂತರ, ಕ್ಯಾಲಿಫೋರ್ನಿಯಾದಲ್ಲಿ ಕೆಲಸವೊಂದನ್ನು ಹುಡುಕಿಕೊಂಡು ಅಲ್ಲೇ ಉಳಿದಿದ್ದಾರೆಂದುಕೊಳ್ಳೋಣ. ಇಂಥವರಿಗೆ ಸಮಸ್ಯೆ ಎದುರಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

Illegal immigrants from India may suffer in the Donald Trump regime

ಏಕೆಂದರೆ, ಈ ಬೆಂಗಳೂರು ನಿವಾಸಿಯು ಪಡೆದಿರುವ ವೀಸಾದ ನಿಯಮಗಳ ಪ್ರಕಾರ, ಅವರು 2015ರ ಮಾರ್ಚ್ ವರೆಗೆ ಅಮೆರಿಕದಲ್ಲಿ ಉಳಿಯಲು ಅವಕಾಶವಿರುತ್ತದೆ. ವೀಸಾದಲ್ಲಿ ಹತ್ತು ವರ್ಷಗಳ ಕಾಲ ಇರಬಹುದೆಂದು ಉಲ್ಲೇಖಿಸಲಾಗಿದೆಯಾದರೂ ಅಮೆರಿಕದ ಪ್ರವೇಶದ ವೇಳೆ ಸೂಚಿಸಲಾಗಿರುವಂತೆ ಅವರು 2015ರ ಮಾರ್ಚ್ ನ ನಂತರ ಅಮೆರಿಕದಲ್ಲಿ ಉಳಿದುಕೊಳ್ಳುವಂತಿಲ್ಲ.

ಹಾಗೇನಾದರೂ ಉಳಿದುಕೊಂಡಿದ್ದರೆ ಅವರನ್ನು ಭಾರತಕ್ಕೆ ಓಡಿಸಲಾಗುತ್ತದೆ ಅಥವಾ ಜೈಲು ವಾಸದಂಥ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಅವೆರಡೂ ಇಲ್ಲದೆ, ತಾವೇ ಸ್ವಯಂಕೃತವಾಗಿ ಭಾರತಕ್ಕೆ ಬಂದರೆ ಅಂಥವರಿಗೆ ಮತ್ತೆ ಅಮೆರಿಕದ ವೀಸಾ ಸಿಗಲಾರದು. ಇಂಥ ಕಠಿಣ ಕ್ರಮಗಳನ್ನು ಜಾರಿಗೆ ತರಲು ಟ್ರಂಪ್ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಅಮೆರಿಕದಲ್ಲೇ ನೆಲೆಸಿರುವ ಭಾರತೀಯ ಪಟ್ಟಿ ತಯಾರಿಸಲು ಅಮೆರಿಕ ಸರ್ಕಾರ ಸೂಚಿಸಿದ್ದು, ಈಗಾಗಲೇ ಅಲ್ಲಿನ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮುಂದುವರಿಸಿದ್ದಾರೆ.

ಮೂಲಗಳ ಪ್ರಕಾರ, 2014ರಿಂದೀಚೆಗೆ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. 2009ರಲ್ಲಿ ಮೂರೂವರೆ ಲಕ್ಷದಷ್ಟಿದ್ದ ಭಾರತೀಯ ವಲಸಿಗರ ಸಂಖ್ಯೆ ಆನಂತರದ ವರ್ಷಗಳಲ್ಲಿ ನಂತರ ಶೇ. 43ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indians who are in America, without a valid visa by the authorities may face severe punishments from Donald Trump Government. They may be deported or even imprisoned. Or, if they return, will never be able to return to the US again.
Please Wait while comments are loading...