ಹಾಸ್ಟೆಲಿನಲ್ಲಿ ಐಐಟಿ ವಿದ್ಯಾರ್ಥಿ ನೇಣಿಗೆ ಶರಣು

iit-madras-student-akshay-kumar-commit-suicide-by-hanging-in-hostel
ಚೆನ್ನೈ, ನ. 4: ಮದ್ರಾಸ್ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲ ವರ್ಷದ ವಿದ್ಯಾರ್ಥಿಯೊಬ್ಬ ಶನಿವಾರ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.

ಅಂದಹಾಗೆ 19 ವರ್ಷದ ಅಕ್ಷಯ್ ಕುಮಾರ್ Indian Institute of Technology (IIT)- Madras ವ್ಯಾಸಂಗಕ್ಕೆ ಸೇರಿ ಮೂರು ತಿಂಗಳಾಗಿತ್ತು. ಈತ ರಾಜಸ್ಥಾನದ ಬರಾನ್ ಜಿಲ್ಲೆಯವ. ಅಕ್ಷಯ್, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪದವಿ ಪಡೆದಿದ್ದ.

ಒಂಟಿತನ ಕಾಡಿತೇ? ಅಕ್ಷಯ್ ನೇಣಿಗೆ ಗೋಣು ಒಡ್ಡಿರುವುದನ್ನು ಆತನ ಮಿತ್ರನೊಬ್ಬ ರಾತ್ರಿ 10.30ರಲ್ಲಿ ನೋಡಿ, ಹಾಸ್ಟೆಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾನೆ. ಕ್ಲಾಸ್ ಮೇಟ್ಸ್ ಮತ್ತು ಹಾಸ್ಟೆಲ್ ಮೇಟ್ಸ್ ಎಲ್ಲ ವೀಕೆಂಡ್ ಪಿಕ್ಚರ್ ಗೆ ಹೋಗಿದ್ದಾಗ ಅಕ್ಷಯ್, ಸಾವಿಗೆ ಶರಣಾಗಿದ್ದಾನೆ. ಆತ ಯಾವುದೇ ಮರಣಪತ್ರ ಬರೆದಿಟ್ಟಿಲ್ಲ. ಹಾಗಾಗಿ ಪೊಲೀಸರು ಆತನ ಸಾವಿನ ರೀತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಭಾನುವಾರ ನಗರಕ್ಕೆ ಆಗಮಿಸಿದ ಅಕ್ಷಯನ ತಂದೆ ನಂದಕಿಶೋರ್ ಕುಮಾರ್ ಅವರಿಗೆ ಮೃತದೇಹವನ್ನು ಒಪ್ಪಿಸಿದ್ದಾರೆ. ನಂದಕಿಶೋರ್ ಕುಮಾರ್ ಅವರಿಗೂ ತಮ್ಮ ಪುತ್ರನ ಸಾವು ನಿಗೂಢವೆನಿಸಿದ್ದು, ತಮ್ಮ ಪುತ್ರನ ಸಾವಿಗೆ ಕಾರಣ ಏನೆಂಬುದು ಅವರಿಗೂ ತಿಳಿದುಬಂದಿಲ್ಲ. ಜುಲೈನಲ್ಲಿ IIT ಸೇರಿದ್ದ ಅಕ್ಷಯ್, ಹೆಚ್ಚಾಗಿ ಯಾರೊಂದಿಗೂ ಬೆರೆಯದೇ ಏಕಾಂಗಿಯಾಗಿ ಉಳಿಯುತ್ತಿದ್ದ ಎಂದು ಮಿತ್ರರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+