2018ರಿಂದ ಆನ್ ಲೈನ್ ನಲ್ಲಿ ಐಐಟಿ ಪ್ರವೇಶ ಪರೀಕ್ಷೆ

Posted By:
Subscribe to Oneindia Kannada

ಚೆನ್ನೈ, ಆಗಸ್ಟ್ 21 : ಪ್ರತಿಷ್ಠಿತ ಇಂಡಿಯನ್ ಇನ್ಸ್​ ಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಪ್ರವೇಶ ಪರೀಕ್ಷೆಗಳನ್ನು ಮುಂದಿನ ವರ್ಷದಿಂದ (2018) ಆನ್ ಲೈನ್ ನಲ್ಲಿ ನಡೆಸಲು ಜಂಟಿ ಪ್ರವೇಶ ಮಂಡಳಿ (ಜೆಎಬಿ) ನಿರ್ಧರಿಸಿದೆ.

ಹಾಸನದಲ್ಲಿ ಐಐಟಿ ಸ್ಥಾಪಿಸಲು ದೇವೇಗೌಡರ ಆಗ್ರಹ

ಶೈಕ್ಷಣಿಕ ಸಂಸ್ಥೆಯ ನೀತಿ ನಿಯಮಗಳ ಜಾರಿ ಮತ್ತು ಮೌಲ್ಯಮಾಪನವನ್ನು ಸರಳಗೊಳಿಸಲು ಜಂಟಿ ಪ್ರವೇಶ ಮಂಡಳಿ(ಜೆಎಬಿ) ಭಾನುವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

IIT Entrance Exam To Go Completely Online From 2018: Official

ಆನ್ ಲೈನ್ ಮಾದರಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿಗದಿತ ಕೇಂದ್ರದಲ್ಲಿ ಬರೆಯಲಿದ್ದಾರೆ. ಪೆನ್ನು, ಕಾಗದ ಬಳಸುವ ಬದಲು ಪ್ರಶ್ನೆಗಳಿಗೆ ಕಂಪ್ಯೂಟರ್ ನಲ್ಲಿ ಉತ್ತರಿಸಬೇಕಾಗುತ್ತದೆ.

ಪ್ರಸ್ತುತ ಆಪ್ಟಿಕಲ್ ಮಾರ್ಕ್ ರೀಡಿಂಗ್ ಶೀಟ್ ಗಳನ್ನು ಬಳಸಲಾಗುತ್ತಿದ್ದು, ಪೆನ್ನು ಅಥವಾ ಪೆನ್ಸಿಲ್ ನಿಂದ ವಿದ್ಯಾರ್ಥಿಗಳು ಭರ್ತಿ ಮಾಡುತ್ತಿದ್ದರು.

ಅದನ್ನು ಮೆಷಿನ್ ಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತಿತ್ತು. ಈ ಪರೀಕ್ಷಾ ವಿಧಾನ ಮುಂದಿನ ವರ್ಷದಿಂದ ಇರುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The entrance examination for the Indian Institutes of Technology (IITs) will go completely online from 2018 to make logistics and evaluations easier, the Joint Admission Board (JAB) decided on Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ