ಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು : ರಾಹುಲ್ ಘೋಷಣೆ

Recommended Video

      Lok Sabha Elections 2019 : ಪ್ರಧಾನಿಯಾದ್ರೆ ರಾಹುಲ್ ಗಾಂಧಿ ಏನ್ ಮಾಡ್ತಾರಂತೆ ಗೊತ್ತಾ? | Oneindia Kannada

      ನವದೆಹಲಿ, ಮಾರ್ಚ್ 30 : "ನಾವು (ಕಾಂಗ್ರೆಸ್) ಒಂದು ವೇಳೆ ಅಧಿಕಾರಕ್ಕೆ ಬಂದರೆ, ನೀತಿ ಆಯೋಗವನ್ನು ರದ್ದು ಮಾಡುತ್ತೇವೆ" ಎಂದು ರಾಹುಲ್ ಗಾಂಧಿ ಅವರು ಘೋಷಿಸಿದ್ದು, ನೀತಿ ಆಯೋಗ ಪ್ರಯೋಜನಕ್ಕೆ ಬಾರದ ಸರಕಾರಿ ಸಂಸ್ಥೆಯಾಗಿದೆ ಎಂದು ಜರಿದಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಪ್ರಧಾನ ಮಂತ್ರಿ ಅವರನ್ನು ಮಾರ್ಕೆಟಿಂಗ್ ಮಾಡಲು ಪ್ರೆಸೆಂಟೇಷನ್ ಮಾಡುವುದು ಮತ್ತು ಸುಳ್ಳು ಅಂಕಿಅಂಶಗಳನ್ನು ಪ್ರಸ್ತುತ ಪಡಿಸುವ ನೀತಿ ಆಯೋಗವನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ರದ್ದು ಮಾಡುವುದಾಗಿ ಅವರು ಹೇಳಿದ್ದಾರೆ.

      ನಾವು ನೀತಿ ಆಯೋಗದ ಸ್ಥಾನಕ್ಕೆ ಯೋಜನಾ ಆಯೋಗವನ್ನು ಸ್ಥಾಪಿಸುತ್ತೇವೆ. ಇದರಲ್ಲಿ 100ಕ್ಕೂ ಕಡಿಮೆ ಸಿಬ್ಬಂದಿಗಳು ಇರಲಿದ್ದು, ಪ್ರಸಿದ್ಧ ಆರ್ಥಿಕತಜ್ಞರು ಮತ್ತು ಇತರ ನಿಪುಣರು ಈ ಆಯೋಗದಲ್ಲಿ ಇರಲಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಟ್ವೀಟಿಸಿದ್ದಾರೆ.

      ಕೇಂದ್ರ ಸರಕಾರದ ಆರ್ಥಿಕ ನೀತಿ ನಿಯಮಗಳನ್ನು ರೂಪಿಸುವ, ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಥವನ್ನು ರೂಪಿಸುವ ಕೆಲಸವನ್ನು ನೀತಿ ಆಯೋಗ ಮಾಡುತ್ತಿದೆ. ಪ್ರಧಾನಿಯೇ ನೀತಿ ಆಯೋಗದ ಅಧಿಕಾರೇತರ ಚೇರ್ಮನ್ ಆಗಿದ್ದು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಇದರ ಸದಸ್ಯರಾಗಿರುತ್ತಾರೆ. ಇದು ಸ್ಥಾಪನೆಯಾಗಿದ್ದು 2015ರ ಜನವರಿ 1ರಂದು.

      65 ವರ್ಷಗಳ ಪ್ಲಾನಿಂಗ್ ಕಮಿಷನ್ ಅನ್ನು ರದ್ದುಗೊಳಿಸಿ ನೀತಿ ಆಯೋಗವನ್ನು ಸ್ಥಾಪಿಸಲಾಗಿತ್ತು. ಇದಕ್ಕೆ ರಾಜೀವ್ ಕುಮಾರ್ ಅವರು ಉಪಾಧ್ಯಕ್ಷರಾಗಿದ್ದು, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಪಿಯೂಷ್ ಗೋಯಲ್, ರಾಧಾ ಮೋಹನ್ ಸಿಂಗ್ ಅವರು ಅಧಿಕಾರೇತರ ಸದಸ್ಯರಾಗಿದ್ದಾರೆ.

      If voted to power will scrap NITI Aayog : Rahul Gandhi

      ಇನ್ನಿತರ ಘೋಷಣೆಗಳು : ತಾವು ಅಧಿಕಾರಕ್ಕೆ ಬಂದರೆ, ಜಿಎಸ್ಟಿಯನ್ನು ರದ್ದುಗೊಳಿಸಿ ಏಕರೂಪದ ತೆರಿಗೆ ಪದ್ಧತಿ ಜಾರಿ ಮಾಡುವುದಾಗಿ, ಶೇ.20ರಷ್ಟಿರುವ ಬಡಜನರಿಗೆ ವರ್ಷಕ್ಕೆ 72 ಸಾವಿರ ರುಪಾಯಿ ಖಾತೆಗೆ ಜಮಾ ಮಾಡುವುದಾಗಿ, ಈಶಾನ್ಯ ಭಾರತ ಕಳೆದುಕೊಂಡಿರುವ ಸಾಮಾಜಿಕ ಸ್ಥಾನಮಾನವನ್ನು ದೊರಕಿಸಿಕೊಡುವುದಾಗಿ ಅವರು ವಾಗ್ದಾನ ಮಾಡಿದ್ದಾರೆ.

      ರಾಹುಲ್ ಗಾಂಧಿ ಅವರ ಈ ಘೋಷಣೆ ತಮಾಷೆಯ ಚರ್ಚೆಗೂ ದಾರಿ ಮಾಡಿಕೊಟ್ಟಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಗಾಂಧಿ ಕುಟುಂಬದ ಹೆಸರಿನಲ್ಲಿರುವ ಏಲ್ಲ ಏರ್ಪೋರ್ಟ್ ಗಳು, ವಿಶ್ವವಿದ್ಯಾಲಯಗಳು, ರಸ್ತೆಗಳಿಗೆ ಇಟ್ಟಿರುವ ಹೆಸರನ್ನು ರದ್ದುಪಡಿಸುತ್ತದೆ ಎಂದು ಹೆಮ್ಮೆಯ ಭಾರತೀಯ ಎಂದು ಹೆಸರಿಟ್ಟುಕೊಂಡವರು ಹೇಳಿದ್ದಾರೆ.

      ಮತ್ತೊಬ್ಬರು ರಾಹುಲ್ ಗಾಂಧಿ ಅವರಿಗೆ ಆಡುವ ಮಾತಿನ ಮೇಲೆ ನಿಗಾ ಇರುವುದಿಲ್ಲ. ನ್ಯಾಯ್ ಯೋಜನೆ ಅಡಿಯಲ್ಲಿ ಬಡಜನತೆಗೆ ನೀಡಲಾಗುತ್ತಿರುವ ಹಣದ ಬಗ್ಗೆ ಒಂದು ಸಂದರ್ಭದಲ್ಲಿ ಒಂದೊಂದು ಹೇಳಿದ್ದ ವಿಡಿಯೋವನ್ನು ಹಾಕಿದ್ದಾರೆ. ಅದರಲ್ಲಿ, ರಾಹುಲ್ ಅವರು ಒಂದು ಬಾರಿ ವರ್ಷಕ್ಕೆ 72 ಸಾವಿರ ನೀಡುವುದಾಗಿ ಹೇಳಿದ್ದರೆ, ಮತ್ತೊಂದರಲ್ಲಿ ತಿಂಗಳಿಗೆ 72 ಸಾವಿರ ರುಪಾಯಿ ನೀಡುವುದಾಗಿ ಹೇಳಿದ್ದಾರೆ, ಮಗದೊಂದರಲ್ಲಿ ವರ್ಷಕ್ಕೆ 72 ಸಾವಿರ ಕೋಟಿ ರುಪಾಯಿ ನೀಡುವುದಾಗಿ ತಿಳಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+