ಸಂಚಾರಿ ನಿಯಮ ಉಲ್ಲಂಘಿಸಿದರೆ ಪೊಲೀಸರಿಗೆ ದುಪ್ಪಟ್ಟು ದಂಡ

Recommended Video

      ಪೊಲೀಸರ ಫೈನ್ ಕೇಳಿದ್ರೆ ಶಾಕ್ ಆಗ್ತೀರ..? | Oneindia Kannada

      ಬೆಂಗಳೂರು, ಸೆಪ್ಟೆಂಬರ್ 6: ಇನ್ನುಮುಂದೆ ಸಂಚಾರಿ ನಿಯಮವನ್ನು ಪೊಲೀಸರು ಉಲ್ಲಂಘಿಸಿದರೂ ಕೂಡ ದುಪ್ಪಟ್ಟು ದಂಡ ಬೀಳಲಿದೆ.

      ಸಂಚಾರ ನಿಯಮ ಎನ್ನುವುದು ಪೊಲೀಸರು, ವೈದ್ಯರು, ರಾಜಕಾರಣಿಗಳಿಗೆ, ಸಾಮಾನ್ಯ ಜನರಿಗೆ ಬೇರೆ ಅಲ್ಲ ಎಲ್ಲರಿಗೂ ನಿಯಮ ಅನ್ವಯಿಸುತ್ತದೆ.

      ದೆಹಲಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ದುಪ್ಪಟ್ಟು ಹೆಚ್ಚು ದಂಡ ಕಟ್ಟಬೇಕಾದೀತು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಜಂಟಿ ಆಯುಕ್ತರಾದ ಮೀನು ಚೌಧರಿ ಅವರು, ಸಂಚಾರಿ ನಿಯಮದ ಶಿಸ್ತು ಪಾಲಿಸಬೇಕಾದ ಯಾವುದೇ ಅಧಿಕಾರಿಗಳು, ಸಂಚಾರಿ ನಿಯಮ ಮುರಿದಲ್ಲಿ ಎರಡು ಪಟ್ಟು ದಂಡಕಟ್ಟಬೇಕೆಂದು ಅಧಿಸೂಚನೆ ಹೊರಡಿಸಿದ್ದಾರೆ.

      ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬೆಂಗಳೂರಲ್ಲಿ ಕೇವಲ 2 ದಿನಗಳಲ್ಲಿ ಬರೋಬ್ಬರಿ 30 ಲಕ್ಷ ರೂ ದಂಡ ಸಂಗ್ರಹವಾಗಿದೆ.

      ನಗರದಲ್ಲಿ ದಾಖಲಾಗಿರುವ ಸಂಚಾರಿ ಉಲ್ಲಂಘನೆ ಪ್ರಕರಣಗಳ ಮೊತ್ತವನ್ನು ಗುರುವಾರ ಟ್ರಾಫಿಕ್ ಪೊಲೀಸರು ಬಹಿರಂಗಪಡಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಆರೋಪದಲ್ಲಿ ಇದುವರೆಗೂ ಒಟ್ಟು 2978 ಪ್ರಕರಣಗಳು ದಾಖಲಾಗಿವೆ.

      ಈ ಪ್ರಕರಣಗಳಿಂದ ಇದುವರೆಗೂ 30,11,400ರೂ ದಂಡ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.ಓಲಾ, ಊಬರ್ ಹಾಗೂ ಆಟೋರಿಕ್ಷಾಗಳು, ಮಕ್ಕಳು, ವಯಸ್ಕರ ಹಾಗೂ ಮಹಿಳೆಯರಿಗೆ ಸೇವೆ ಒದಗಿಸುವ ಬದಲು ಅಪರಾಧದಲ್ಲಿ ತೊಡಗಿದ್ದರೇ, ಕೂಡಲೇ ಅಂತಹ ಚಾಲಕರು ವೃತ್ತಿಯಿಂದ ಹೊರಹೋಗಬೇಕು ಎಂದು ಅವರು ಪೊಲೀಸ್ ಆಯುಕ್ತರು ಖಡಕ್ ಎಚ್ಚರಿಕೆ ನೀಡಿದರು.

      ವಾಹನ ಪಾರ್ಕ್ ಮಾಡಿಕೊಳ್ಳಲು ತಮ್ಮ ಮನೆಗಳಲ್ಲಿ ನಾಗರಿಕರು ಮೊದಲು ಸ್ಥಳಾವಕಾಶ ಮಾಡಿಕೊಳ್ಳಬೇಕು. ರಿಂಗ್ ರೋಡ್ ರಸ್ತೆಯಲ್ಲಿ ವಾಹನಗಳು ಹೆಚ್ಚು ವೇಗವಾಗಿ ಬರುತ್ತವೆ. ಅಪಘಾತವಾಗಿ ಪಾದಚಾರಿಗಳು ಮೃತಪಟ್ಟರೇ, 304 ಎ ಅಡಿ ದೂರು ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಇದೀಗ 304ಎ ಜೊತೆಗೆ 307 (ಕೊಲೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ.

      17ಸಾವಿರ ರೂ ದಂಡ

      17ಸಾವಿರ ರೂ ದಂಡ

      ಬೆಂಗಳೂರಿನಲ್ಲಿ ದೊಡ್ಡ ಮೊತ್ತದ ದಂಡ ಕಟ್ಟಿದ ಪ್ರಕರಣವೊಂದು ನಡೆದಿದೆ. ಕುಡಿದು ವಾಹನ ಚಾಲನೆ, ಪರವಾನಗಿ ಇಲ್ಲದೆ ಚಾಲನೆ, ಹೆಲ್ಮೆಟ್ ರಹಿತ ಚಾಲನೆ ಮಾಡುವುದು, ಹಿಂಬದಿ ಸವಾರ ಹೆಲ್ಮೆಟ್ ಹಾಕದೇ ಇರುವುದು ಸೇರಿ ಒಟ್ಟು 17 ಸಾವಿರ ರೂ ಗಳನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ದಂಡ ವಿಧಿಸಿದ್ದಾರೆ.

      ಟ್ರ್ಯಾಕ್ಟರ್ ಚಾಲಕನಿಗೆ 59 ಸಾವಿರ ರೂ ದಂಡ

      ಟ್ರ್ಯಾಕ್ಟರ್ ಚಾಲಕನಿಗೆ 59 ಸಾವಿರ ರೂ ದಂಡ

      ಪರವಾನಗಿ ಇಲ್ಲದೆ ಚಾಲನೆ, ನೋಂದಣಿಯಾಗದ ವಾಹನ ಚಾಲನೆ ಸೇರಿದಂತೆ ಒಟ್ಟು 10 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಗುರುಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನೊಬ್ಬನಿಗೆ ಸಂಚಾರಿ ಪೊಲೀಸರು ಬರೋಬ್ಬರಿ 59 ಸಾವಿರ ರೂ ದಂಡ ವಿಧಿಸಿದ್ದಾರೆ.

      ಪೊಲೀಸರಿಗೆ ದುಪ್ಪಟ್ಟು ದಂಡ

      ಪೊಲೀಸರಿಗೆ ದುಪ್ಪಟ್ಟು ದಂಡ

      ಇದುವರೆಗೂ ದಂಡ ಹಾಕುತ್ತಿದ್ದ ಪೊಲೀಸರಿಗೂ ದಂಡ ಕಟ್ಟುವ ದಿನಗಳು ಮುಂದೆ ಬರಲಿವೆ.ದೆಹಲಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ದುಪ್ಪಟ್ಟು ಹೆಚ್ಚು ದಂಡ ಕಟ್ಟಬೇಕಾದೀತು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಜಂಟಿ ಆಯುಕ್ತರಾದ ಮೀನು ಚೌಧರಿ ಅವರು, ಸಂಚಾರಿ ನಿಯಮದ ಶಿಸ್ತು ಪಾಲಿಸಬೇಕಾದ ಯಾವುದೇ ಅಧಿಕಾರಿಗಳು, ಸಂಚಾರಿ ನಿಯಮ ಮುರಿದಲ್ಲಿ ಎರಡು ಪಟ್ಟು ದಂಡಕಟ್ಟಬೇಕೆಂದು ಅಧಿಸೂಚನೆ ಹೊರಡಿಸಿದ್ದಾರೆ.

      ದಂಡ ಬೇಡ ಎಂದಾದರೆ ನಿಯಮ ಪಾಲಿಸಿ

      ದಂಡ ಬೇಡ ಎಂದಾದರೆ ನಿಯಮ ಪಾಲಿಸಿ

      ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಹೆಚ್ಚುವರಿ ದಂಡ ವಿಧಿಸಿದ್ದು ಸಮಂಜಸವಾಗಿದೆ. ಕೇವಲ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಹೆಚ್ಚುವರಿ ದಂಡ ಕಟ್ಟುವುದನ್ನು ತಪ್ಪಿಸಬಹುದಾಗಿದೆ ಎಂದು ಟೀಕಾಕಾರರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಕಟ್ಟುನಿಟ್ಟಾದ ಸಂಚಾರಿ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ಮಾಡುವುದೇ ಕೇಂದ್ರದ ಲಕ್ಷ್ಯವಾಗಿದೆ. ಯಾರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತಹ ದಿನಗಳನ್ನು ನಾವು ಕಾಣಬೇಕು ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+