ಎರಡನೇ ಮದುವೆಯಾಗಬೇಕೇ; ಹಾಗಿದ್ದರೆ ಇದೊಂದು ನಿಯಮ ಪಾಲನೆ ಕಡ್ಡಾಯ!
ಅಲಹಾಬಾದ್, ಅಕ್ಟೋಬರ್ 11: ಮೊದಲನೇ ಹಂಡತಿ ಮತ್ತು ಮಕ್ಕಳನ್ನು ಸಾಕುವುದಕ್ಕೆ ಅಸಮರ್ಥನಾದ ಯಾವುದೇ ವ್ಯಕ್ತಿಯು ಎರಡನೇ ಮದುವೆಯಾಗುವುದಕ್ಕೆ ಯೋಗ್ಯನಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಮುಸ್ಲಿಮರ ಪವಿತ್ರ ಕುರಾನ್ ಗ್ರಂಥದಲ್ಲಿರುವ ಅಂಶವನ್ನು ಉಲ್ಲೇಖಿಸಿ ಈ ತೀರ್ಪು ನೀಡಿದೆ. ಎರಡನೇ ಮದುವೆ ಆಗುವುದಕ್ಕೆ ಸಂಬಂಧಿಸಿದಂತೆ ಕೋರ್ಟ್, ಕೆಲವು ಷರತ್ತುಗಳನ್ನು ವಿಧಿಸಿದೆ.
ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ, 1984ರ ಸೆಕ್ಷನ್ 19ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರ್ಯ ಪ್ರಕಾಶ್ ಕೇಸರವಾಣಿ ಮತ್ತು ರಾಜೇಂದ್ರ ಕುಮಾರ್ ಪೀಠವು ವಿಚಾರಣೆ ನಡೆಸಿತು. ಈ ಹಿಂದೆ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅನ್ನು ಪೀಠವು ವಜಾಗೊಳಿಸಿತು. ಮುಸ್ಲಿಮರ ಮೊದಲ ಮದುವೆ ಮತ್ತು ಎರಡನೇ ಮದುವೆಯ ಬಗ್ಗೆ ಖುರಾನ್ ಗ್ರಂಥದಲ್ಲಿ ಉಲ್ಲೇಖಿಸಿರುವುದು ಏನು? ಎರಡನೇ ಮದುವೆಯ ಬಗ್ಗೆ ಅಲಹಾಬಾದ್ ಕೋರ್ಟ್ ನೀಡಿದ ಆದೇಶದಲ್ಲಿ ಏನಿದೆ ಎಂಬುದನ್ನು ಮುಂದೆ ಓದಿ.

ಮೊದಲ ಮದುವೆ ಬಗ್ಗೆ ಮುಚ್ಚಿಟ್ಟು ಎರಡನೇ ಮದುವೆ
ಈ ಪ್ರಕರಣದಲ್ಲಿ ಮಹಿಳೆಯ ತಂದೆಯು ಪ್ರತಿವಾದಿಯಾಗಿದ್ದಾರೆ. ತಂದೆಯು ಮದುವೆಯಾದ ತನ್ನ ಮಗಳಿಗೆ ತನ್ನ ಸಂಪೂರ್ಣ ಸ್ಥಿರ ಆಸ್ತಿಯನ್ನು ಬರೆದು ಕೊಟ್ಟಿದ್ದಾರೆ. 93 ವರ್ಷದ ತಂದೆ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಆತನ ಆರೈಕೆಗಾಗಿ ಮಗಳು ತಂದೆಯ ಜೊತೆಗಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿಯು ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು ಎರಡನೇ ವಿವಾಹವಾಗಿದ್ದಾನೆ ಎಂದು ದೂಷಿಸಲಾಗಿದೆ. ಅಲ್ಲದೇ ಎರಡನೇ ಮದುವೆಯ ನಂತರದಲ್ಲಿ ಆ ಪತ್ನಿಗೂ ಮಕ್ಕಳು ಆಗಿರುವುದರ ಬಗ್ಗೆ ಮೇಲ್ಮನವಿದಾರರ ಸಾಕ್ಷಿದಾರರು ಒಪ್ಪಿಕೊಂಡಿದ್ದಾರೆ.

ಗುಪ್ತ್ ಗುಪ್ತ್ ಆಗಿ ಎರಡನೇ ಪತ್ನಿಯ ಕೈ ಹಿಡಿದ ಭೂಪ
ಈ ಮೊದಲೇ ಒಬ್ಬ ಮಹಿಳೆಯೊಂದಿಗೆ ವಿವಾಹವಾಗಿದ್ದ ವ್ಯಕ್ತಿಯು ಮೊದಲ ಪತ್ನಿಗೆ ಯಾವುದೇ ರೀತಿ ಮಾಹಿತಿಯನ್ನು ನೀಡದೇ ಎರಡನೇ ವಿವಾಹವಾಗಿದ್ದಾನೆ. ಎರಡನೇ ಮದುವೆಯಾಗುವ ಉದ್ದೇಶದ ಬಗ್ಗೆ ಹೆಂಡತಿಗೆ ಹೇಳಿಲ್ಲ. ಅಥವಾ ಇಬ್ಬರು ಹೆಂಡತಿಯರಿಗೆ ಸಮಾನವಾದ ಪ್ರೀತಿ, ವಾತ್ಸಲ್ಯದೊಂದಿಗೆ ಬದುಕುವುದಾಗಿಯೂ ತಿಳಿಸಿಲ್ಲ ಎಂದು ದೂಷಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯವು ಗಮನಿಸಿದ ಅಂಶ
ಸರ್ವೋಚ್ಛ ನ್ಯಾಯಾಲಯವು ಗಮನಿಸಿದಂತೆ ಎ.ಕೆ. ಗೋಪಾಲನ್ ಪೀಠವು ಈ ಅಂಶವನ್ನು ಉಲ್ಲೇಖಿಸಿದೆ. "ಭಾರತದಲ್ಲಿ ಜನರು ತಮ್ಮ ಸಾರ್ವಭೌಮ ಇಚ್ಛೆಯನ್ನು ಪೀಠಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. ನಾಗರಿಕರು ವ್ಯಯಕ್ತಿಕ ಘನತೆ ಮತ್ತು ಇತರೆ ಮಾನವ ಮೌಲ್ಯಗಳನ್ನು ಪಾಲಿಸುವುದರ ಜೊತೆಗೆ ಪ್ರಜಾಪ್ರಭುತ್ವದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅವರ ವ್ಯಕ್ತಿತ್ವದ ಸಂಪೂರ್ಣ ವಿಕಸನ ಮತ್ತು ಅಭಿವ್ಯಕ್ತಿಗೆ ಒಂದು ಸಾಧನವಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸಂವಿಧಾನದಲ್ಲಿ ಆಯಾ ಅಧಿಕಾರಗಳನ್ನು ನೀಡಲಾಗಿದ್ದು, ಕೆಲವು ಮೂಲಭೂತ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದೆ. ಭಾರತೀಯ ಸಂವಿಧಾನದ ಭಾಗ IIIರಲ್ಲಿ ಸಕಾರಾತ್ಮಕ ಕಾನೂನಾಗಿ ಭಾಷಾಂತರಿಸಲಾದ ನಿಯೋಜಿತ ಅಧಿಕಾರಗಳು ಅತ್ಯುನ್ನತವಾಗಿವೆ. ಗಣರಾಜ್ಯದ ಅಡಿಪಾಯವು ನ್ಯಾಯದ ತಳಹದಿಯ ಮೇಲೆ ನಡೆಸಲ್ಪಟ್ಟಿದೆ," ಎಂದು ಉಲ್ಲೇಖಿಸಿದೆ.

ನ್ಯಾಯಯುತವಾಗಿ ವ್ಯವಹರಿಸಲು ಕೋರ್ಟ್ ಸಲಹೆ
ಪವಿತ್ರ ಕುರಾನ್‌ನ ಪ್ರಕಾರ, "ಎಲ್ಲ ಮುಸ್ಲಿಂ ಪುರುಷರು ಅನಾಥರಾಗುವ ಮೊದಲ ಪತ್ನಿ ಅಥವಾ ಮಕ್ಕಳೊಂದಿಗೆ ನ್ಯಾಯಯುತವಾಗಿ ವ್ಯವಹರಿಸಬೇಕು ಎಂದು ಹೈಕೋರ್ಟ್ ಹೇಳಿದೆ. ವಿವಾಹಿತ ಮುಸ್ಲಿಂ ಪುರುಷನು ತನ್ನ ಹೆಂಡತಿಯನ್ನು ಜೀವಂತವಾಗಿಟ್ಟುಕೊಂಡು ಅವರೊಂದಿಗೆ ನ್ಯಾಯಯುತವಾಗಿ ವ್ಯವಹರಿಸಲು ಸಾಧ್ಯವಾಗದಿದ್ದರೆ, ಇನ್ನೊಬ್ಬ ಮುಸ್ಲಿಂ ಮಹಿಳೆಯೊಂದಿಗೆ ಮದುವೆಯಾಗಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಮುಸ್ಲಿಂ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
"ಸುರಾ 4 ಆಯತ್ 3ರ ಧಾರ್ಮಿಕ ಆದೇಶವು ಎಲ್ಲಾ ಮುಸ್ಲಿಂ ಪುರುಷರಿಗೆ ಬದ್ಧವಾಗಿದೆ ಎಂದು ಪೀಠವು ಹೇಳಿದೆ. ಇದು ನಿರ್ದಿಷ್ಟವಾಗಿ ಎಲ್ಲಾ ಮುಸ್ಲಿಂ ಪುರುಷರು ಮೊದಲ ಪತ್ನಿ ಹಾಗೂ ಅನಾಥರಾಗುವ ತಮ್ಮ ಮಕ್ಕಳೊಂದಿಗೆ ನ್ಯಾಯಯುತವಾಗಿ ವ್ಯವಹರಿಸಬೇಕು. ನಂತರ ಅವರು ತಮ್ಮ ಆಯ್ಕೆಯ ಎರಡು ಅಥವಾ ಮೂರು ಅಥವಾ ನಾಲ್ಕು ಮಹಿಳೆಯರನ್ನು ಮದುವೆಯಾಗಬಹುದು. ಆದರೆ ಮೊದಲ ಪತ್ನಿಯೊಂದಿಗೆ ನ್ಯಾಯಯುತವಾಗಿ ವ್ಯವಹರಿಸಲು ಸಾಧ್ಯವಾಗದು, ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಭಯಪಡುವ ವ್ಯಕ್ತಿಯು ಇತರೆ ಮಹಿಳೆಯನ್ನು ಮದುವೆಯಾಗಲು ಸಾಧ್ಯವಿಲ್ಲ," ಎಂದು ಹೇಳಿದೆ.

ಮೊದಲ ಪತ್ನಿ ಹಾಗೂ ಎರಡನೇ ಮದುವೆ ನಡುವಿನ ಲಿಂಕ್ ಹೇಗೆ?
ಮೊದಲ ಮದುವೆಯು ಉಳಿದಿರುವಾಗಲೂ ಮುಸ್ಲಿಂ ಪತಿಗೆ ಎರಡನೇ ಮದುವೆಯಾಗುವ ಕಾನೂನುಬದ್ಧ ಹಕ್ಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಅವನು ಹಾಗೆ ಮಾಡಿದರೆ, ನಂತರದಲ್ಲಿ ಮೊದಲ ಪತ್ನಿಯು ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ವಾಸಿಸುತ್ತಿದ್ದಾಳೆ ಎಂಬುದರ ಬಗ್ಗೆ ಸಿವಿಲ್ ಕೋರ್ಟ್ ಅನುಮತಿಯನ್ನು ಪಡೆದುಕೊಳ್ಳಬೇಕು. ಮೊದಲ ಪತ್ನಿಯಿಂದ ತೀವ್ರವಾದ ನೋವು ಮತ್ತು ಅನ್ಯಾಯವನ್ನು ಎದುರಿಸುತ್ತಿರುವ ಬಗ್ಗೆ ಸಾಬೀತುಪಡಿಸಬೇಕು. ಇಂಥ ಸಂದರ್ಭದಲ್ಲಿ ಪತಿಯ ಆರೋಪವನ್ನು ಪ್ರಶ್ನಿಸುವ ಹಕ್ಕು ಮೊದಲ ಪತ್ನಿಗೆ ಇರುತ್ತದೆ.
ಆದರೆ ಈ ಪ್ರಕರಣದಲ್ಲಿ ಮೇಲ್ಮನವಿದಾರನು ತನ್ನ ಮೊದಲ ಹೆಂಡತಿಯಿಂದ ಈ ಸತ್ಯವನ್ನು ಮುಚ್ಚಿಟ್ಟು ಎರಡನೇ ಮದುವೆಯನ್ನು ಮಾಡಿಕೊಂಡಿದ್ದಾನೆ. ಹೀಗಾಗಿ ಅಪೀಲುದಾರನ ನಡವಳಿಕೆಯು ಅವನ ಮೊದಲ ಹೆಂಡತಿಯ ಮೇಲಿನ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಪೀಠ ಹೇಳಿದೆ. ಈ ಪರಿಸ್ಥಿತಿಯಲ್ಲಿ ಮೊದಲ ಹೆಂಡತಿಯು ತನ್ನ ಪತಿಯೊಂದಿಗೆ ವಾಸಿಸಲು ಬಯಸದಿದ್ದರೆ, ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಮೊಕದ್ದಮೆಯನ್ನು ದಾಖಲಿಸಬೇಕಿತ್ತು. ಹೀಗೆ ಸಲ್ಲಿಸಿದ ಮೊಕದ್ದಮೆಯಲ್ಲಿ ಅವನೊಂದಿಗೆ ಹೋಗಲು ಪತ್ನಿಗೆ ಒತ್ತಾಯಿಸಲು ಸಾಧ್ಯವಾಗುವುದಿಲ್ಲ.
ಈ ವೈವಾಹಿಕ ಹಕ್ಕುಗಳ ತೀರ್ಪನ್ನು ನೀಡುವುದಕ್ಕಾಗಿ ಗಂಡನ ವಾದವನ್ನು ಅಂಗೀಕರಿಸಿದರೆ, ಹೆಂಡತಿಯ ದೃಷ್ಟಿಕೋನದಲ್ಲಿ ಅದು ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.












Click it and Unblock the Notifications