ಐಬಿಪಿಎಸ್ ಪರೀಕ್ಷೆ 2021 ದಿನಾಂಕ ಪ್ರಕಟ: ವೇಳಾಪಟ್ಟಿ
ನವದೆಹಲಿ, ನವೆಂಬರ್ 4: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) 2021ರ ಐಬಿಪಿಎಸ್ ಪರೀಕ್ಷೆಯ ಸಾಮಾನ್ಯ ನೇಮಕಾತಿ ಪ್ರಕ್ರಿಯೆಯ (ಸಿಆರ್‌ಪಿ) ಆನ್‌ಲೈನ್ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ.
ಆರ್‌ಆರ್‌ಬಿ, ಪಿಒ ಮತ್ತು ಕ್ಲರ್ಕ್ ಪರೀಕ್ಷೆಗಳಿಗೆ ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಜನವರಿ 30ರಂದು ಪರೀಕ್ಷೆಗಳು ಶುರುವಾಗಲಿದ್ದು, ಫೆಬ್ರವರಿ 28ರಂದು ಮುಕ್ತಾಯವಾಗಲಿದೆ. ಸಿಆರ್‌ಪಿ ಆರ್‌ಆರ್‌ಬಿ IX ಅಡಿಯಲ್ಲಿ ಒಂದನೇ ಮಟ್ಟದ ಅಧಿಕಾರಿ ಮತ್ತು ಕಚೇರಿ ಸಹಾಯಕ (ಬಹುಉದ್ದೇಶ) ಹುದ್ದೆಗಳು ಹಾಗೂ ಸಿಆರ್‌ಪಿ ಪಿಒ/ಎಂಟಿ X ಅಡಿಯಲ್ಲಿ ಪ್ರೊಬೇಷನರಿ ಅಧಿಕಾರಿಗಳು/ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆ ಮತ್ತು ಸಿಆರ್‌ಪಿ ಕ್ಲರ್ಕ್ಸ್ ಅಡಿಯಲ್ಲಿ ಕ್ಲರ್ಕ್ ಹುದ್ದೆಗಳಿಗೆ ಪರೀಕ್ಷೆಗಳು ನಡೆಯಲಿದೆ.
ಪರೀಕ್ಷೆಯ ದಿನಾಂಕಗಳು ಹೀಗಿವೆ;
* ಸಿಆರ್‌ಪಿ ಆರ್‌ಆರ್‌ಬಿ IX
ಆಫೀಸರ್ ಸ್ಕೇಲ್-1 : ಜನವರಿ 30, 2021
ಕಚೇರಿ ಸಹಾಯಕರು (ಬಹು ಉದ್ದೇಶ): ಫೆಬ್ರವರಿ 20, 2021

* ಸಿಆರ್‌ಪಿ ಪಿಒ/ಎಂಟಿ X
ಪ್ರೊಬೇಷನರಿ ಆಫೀಸರ್‌ಗಳು/ಮ್ಯಾನೇಜ್ಮೆಂಟ್ ಟ್ರೇನಿಗಳು: ಫೆಬ್ರವರಿ 4, 2021
* ಸಿಆರ್‌ಪಿ ಕ್ಲರ್ಕ್ಸ್ X
ಕ್ಲರ್ಕ್ಸ್: ಫೆಬ್ರವರಿ 28, 2021
ಆರೋಗ್ಯ ಸಚಿವಾಲಯವು ಜಾರಿಗೆ ತಂದಿರುವ ಕೋವಿಡ್ 19 ಶಿಷ್ಟಾಚಾರಗಳಿಗೆ ಅನುಗುಣವಾಗಿ ಪರೀಕ್ಷೆಗಳು ನಡೆಯಲಿವೆ. ಸಾಮಾಜಿಕ ಅಂತರ, ಮಾಸ್ಕ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಮುಂತಾದ ನಿಯಮಗಳ ಪಾಲನೆ ಕಡ್ಡಾಯ. ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಪರೀಕ್ಷೆ ಅವಧಿ ಮುಕ್ತಾಯಗೊಂಡ ಬಳಿಕ ಪರೀಕ್ಷಾ ಕೇಂದ್ರದಿಂದ ತೆರಳಲು ಅವಕಾಶ ನೀಡಲಾಗುತ್ತದೆ.
ಐಬಿಪಿಎಸ್ ಆರ್‌ಆರ್‌ಬಿ ಪಿಒ ಮತ್ತು ಕ್ಲರ್ಕ್ ಪರೀಕ್ಷೆಗಳು 2020ಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಐಬಿಪಿಎಸ್ ಪುನಃ ಆರಂಭಿಸಿತ್ತು. ಇದಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 9 ಕೊನೆಯ ದಿನ. ಜುಲೈನಲ್ಲಿ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಐಬಿಪಿಎಸ್ ಸ್ಪೆಷಲಿಸ್ಟ್ ಅಧಿಕಾರಿಗಳಿಗೆ ಅಧಿಸೂಚನೆ ಹೊರಡಿಸಿದೆ. ನವೆಂಬರ್ 2ರಂದು ಈ ಪ್ರಕ್ರಿಯೆ ಶುರುವಾಗಿದ್ದು, ನವೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರಾಥಮಿಕ ಪರೀಕ್ಷೆಯು ಡಿಸೆಂಬರ್ 26 ಮತ್ತು 27ರಂದು ನಡೆಯಲಿದೆ.












Click it and Unblock the Notifications