ಐಎಎಸ್ ಟಾಪರ್ ಟೀನಾ ವರಿಸಿದ ನಂಬರ್ 2 ರ‍್ಯಾಂಕರ್ ಅಮೀರ್

Subscribe to Oneindia Kannada

ನವದೆಹಲಿ, ಏಪ್ರಿಲ್ 10: ಅವರಿಬ್ಬರೂ ಅಪರಿಚಿತರು. ಒಂದೇ ವರ್ಷ ಒಟ್ಟಾಗಿ ತರಬೇತಿ ಪಡೆದು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದಿದ್ದರು. ಹಾಗೆ ಪರೀಕ್ಷೆ ಬರೆದಾಗ ಆಕೆಗೆ ಮೊದಲ ರ‍್ಯಾಂಕ್ ಬರುತ್ತದೆ. ಆತ ಎರಡನೇ ರ‍್ಯಾಂಕ್ ಪಡೆಯುತ್ತಾನೆ.

ಅದಾಗಿ ಅವರಿಬ್ಬರೂ ತರಬೇತಿಗೆ ತೆರಳುತ್ತಾರೆ. ಅದು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಫಾರ್ ಅಡ್ಮಿನಿಸ್ಟ್ರೇಷನ್. ತರಬೇತಿಗೆ ತೆರಳಿದ ನಂಬರ್ 1 ಮತ್ತು ನಂಬರ್ 2 ರ‍್ಯಾಂಕ್ ಪಡೆದ ಯುವ ಜೋಡಿಗಳ ನಡುವೆ ಪ್ರೇಮ ಅಂಕುರಿಸುತ್ತದೆ.

ಫಸ್ಟ್ Rank ರಾಣಿಗೆ ಒಲಿದ ಸೆಕೆಂಡ್ Rank ರಾಜು!

ಅಂತರ್ ಧರ್ಮೀಯರಾದರೂ ಅವರಿಬ್ಬರು 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರಕ್ಕೆ ಬರುತ್ತಾರೆ. ಹಾಗೆ ನಿಶ್ಚಿತಾರ್ಥವೂ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಇದು ವಿವಾದ ಸೃಷ್ಟಿಸುತ್ತದೆ. ಇದೊಂದು ಲವ್ ಜಿಹಾದ್ ಎಂದು ಹಿಂದೂ ಮಹಾಸಭಾ ಹೇಳಿಕೆಯನ್ನೂ ನೀಡುತ್ತದೆ,

IAS topper Tina Dabi marries Kashmiri batchmate Khan

ಆದರೆ ಈ ಎಲ್ಲಾ ವಿವಾದ, ಧರ್ಮದ ಎಲ್ಲೆಗಳನ್ನು ಮೀರಿ ಈ ಯುವ ಜೋಡಿ ಭಾನುವಾರ ಅನಂತನಾಗ್ ಜಿಲ್ಲೆಯ ಸುಂದರ ಪಹಲ್ಗಾಮ್ ನಗರದಲ್ಲಿ ಸತಿಪತಿಗಳಾಗಿ ಬದಲಾಗಿದ್ದಾರೆ.

ಅಂದ ಹಾಗೆ ಹೀಗೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು 2015 ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಟೀನಾ ದಬಿ ಮತ್ತು ಇದೇ ವರ್ಷದ ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರದ ಅಮೀರ್ ಅಥರ್ ಅಮಿರುಲ್ ಶಾಫಿ ಖಾನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IAS officer Tina Dabi, who topped the UPSC's civil services examination in 2015 has tied the knot to her Kashmiri batch-mate Amir Athar Amirul Shafi Khan, who secured the second rank in the prestigious examination the same year

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ