ಬಿಜೆಪಿ ಸರಕಾರದಲ್ಲೂ ಮುಗಿಯದ ಗೋಳು, ಅಶೋಕ್ ಖೇಮ್ಕಾ 51ನೇ ಬಾರಿ ವರ್ಗ!

Subscribe to Oneindia Kannada

ಚಂಡೀಗಢ, ನವೆಂಬರ್ 13: ಹರ್ಯಾಣದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ 51ನೇ ಬಾರಿ ವರ್ಗವಾಗಿದ್ದಾರೆ. ಒಟ್ಟು 13 ಐಎಎಸ್ ಅಧಿಕಾರಿಗಳನ್ನು ಹರ್ಯಾಣದ ಮನೋಹರ್ ಲಾಲ್ ಖಟ್ಟರ್ ಸರಕಾರ ವರ್ಗ ಮಾಡಿದ್ದು ಇವರಲ್ಲಿ ಅಶೋಕ್ ಖೇಮ್ಕಾ ಕೂಡಾ ಸೇರಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಶೋಕ್ ಖೇಮ್ಕಾರನ್ನು, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗ ಮಾಡಲಾಗಿದೆ.

IAS Ashok Khemka once again transfer within three month

ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಸೇರಿದ ಕಂಪನಿ ಮತ್ತು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ಎಫ್ ಜತೆಗಿನ ಭೂ ವ್ಯವಹಾರವನ್ನು ರದ್ದುಗೊಳಿಸುವ ಮೂಲಕ 2012ರಲ್ಲಿ ಅಶೋಕ್ ಖೇಮ್ಕಾ ಹೆಸರು ದೇಶದಾದ್ಯಂತ ಸದ್ದು ಮಾಡಿತ್ತು.

ಅದಕ್ಕೂ ಮೊದಲು ಹಾಗೂ ಅಲ್ಲಿಂದ ನಂತರ ಖೇಮ್ಕಾರನ್ನು ನಿರಂತರ ವರ್ಗಾವಣೆ ಮಾಡುವುದು ಆರಂಭವಾಯಿತು. ಹೀಗೆ 1991ರ ಬ್ಯಾಚ್ ನ ಐಎಎಸ್ ಅಧಿಕಾರಿ ಖೇಮ್ಕಾ ವೃತ್ತಿಯ 26 ವರ್ಷಗಳಲ್ಲಿ 51 ಬಾರಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ವರ್ಗವಣೆಗಳಿಂದ ಬೇಸತ್ತು ಟ್ವೀಟ್ ಮಾಡಿರುವ ಖೆಮ್ಕಾ, "ಕೆಲಸ ಮಾಡಲು ತುಂಬಾ ಪ್ಲಾನ್ ಹಾಕಿಕೊಂಡಿದ್ದೆ. ಮತ್ತೊಂದು ವರ್ಗಾವಣೆಯ ಸುದ್ದಿ ಬಂದಿದೆ. ಮತ್ತೆ ಕ್ರ್ಯಾಶ್ ಲ್ಯಾಂಡಿಂಗ್ ಆಗಿದೆ. ಹಿತಾಸಕ್ತಿಗಳು ಗೆದ್ದಿವೆ. ಆದರೆ ಇದು ತಾತ್ಕಾಲಿಕ. ಹೊಸ ಶಕ್ತಿಯೊಂದಿಗೆ ಚಟುವಟಿಕೆ ಮುಂದುವರಿಯುತ್ತದೆ " ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IAS Ashok Khemka once again transfer within three month tweets that vested interest win. He has been transferred 51 times.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ