ರಾಯಭಾರಿ ಸೇರಿ 120 ಭಾರತೀಯ ಅಧಿಕಾರಿಗಳು ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ವಾಪಾಸ್
ನವದೆಹಲಿ, ಆ.17: ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಿ, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ಮತ್ತು 120 ಸಿಬ್ಬಂದಿಯನ್ನು ಕಾಬೂಲ್‌ನಿಂದ ಮಂಗಳವಾರ ಭಾರತಕ್ಕೆ ವಾಪಸ್ ಕರೆತರಲಾಗಿದೆ. ತುರ್ತು ಸ್ಥಳಾಂತರಿಸುವಿಕೆಯ ಭಾಗವಾಗಿ ಐಎಎಫ್‌ನ ಸಿ -17 ಹೆವಿ-ಲಿಫ್ಟ್ ವಿಮಾನದಿಂದ ಜನರನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ ಎಂದು ಈ ಅಭಿವೃದ್ದಿಯ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದರು.
ಭಾರತೀಯ ವಾಯುಪಡೆಯ ಸಿ -17 ಹೆವಿ-ಲಿಫ್ಟ್ ವಿಮಾನವು ಎರಡನೇ ತಂಡದ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಪತ್ರಕರ್ತರನ್ನು ಕಾಬೂಲ್ ನಿಂದ ಹೊತ್ತುಕೊಂಡು ಗುಜರಾತ್ ನ ಜಾಮ್ ನಗರಕ್ಕೆ ಬಂದಿಳಿಯಿತು. ಐಎಎಫ್ ವಿಮಾನವು ಹಮೀದ್ ಕರ್ಜೈ ಇಂಟರ್‌ನ್ಯಾಷನಲ್ (ಎಚ್‌ಕೆಐ) ಏರ್‌ಪೋರ್ಟ್‌ನಿಂದ ಕಾಬೂಲ್ ಸಮಯಕ್ಕೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಎಟಿಸಿ ನಿರ್ವಹಿಸುತ್ತಿರುವ ಯುಎಸ್ ಪಡೆಗಳ ನೆರವಿನಿಂದ ವಿಮಾನ ಕಾಬೂಲ್‌ನಿಂದ ಹಾರಿದೆ. ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ 120 ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ವಿಮಾನದಲ್ಲಿದ್ದರು.
ಈಎಎಫ್ ವಿಮಾನವು ಮಧ್ಯಾಹ್ನ 1 ಗಂಟೆಗೆ ದೆಹಲಿ ತಲುಪುವ ನಿರೀಕ್ಷೆಯಿದೆ. ಹೆಚ್ಚಿನ ಸ್ಥಳಾಂತರಕ್ಕಾಗಿ ಕಾಬೂಲ್‌ಗೆ ನಾಗರಿಕ ವಿಮಾನಗಳನ್ನು ಅನುಮತಿಸಲು ಯುಎಸ್ ಪಡೆಗಳಿಗಾಗಿ ಭಾರತ ಈಗ ಕಾಯುತ್ತಿದೆ. ಭಾರತೀಯರ ಮೊದಲ ಬ್ಯಾಚ್ ಭಾನುವಾರ ಏರ್ ಇಂಡಿಯಾ ವಿಮಾನದ ಮೂಲಕ ಬಂದಿದೆ.

ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ''ರಾಯಭಾರಿ ಮತ್ತು ಭಾರತೀಯ ಸಿಬ್ಬಂದಿಗಳು ಭಾರತಕ್ಕೆ ತೆರಳಲು ನಿರ್ಧರಿಸಿದ್ದಾರೆ," ಎಂದು ಹೇಳಿದ್ದರು. "ಪ್ರಸ್ತುತ ಅಫ್ಘಾನ್‌ನಲ್ಲಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಕಾಬೂಲ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಭಾರತೀಯ ಸಿಬ್ಬಂದಿ ತಕ್ಷಣವೇ ಭಾರತಕ್ಕೆ ತೆರಳಲು ನಿರ್ಧರಿಸಲಾಗಿದೆ," ಎಂದು ಬಾಗ್ಚಿ ಟ್ವೀಟ್ ಮಾಡಿದ್ದರು.
ಭಾರತೀಯ ವಾಯುಪಡೆಯ (ಐಎಎಫ್) ಸಿ -17 ಹೆವಿ-ಲಿಫ್ಟ್ ಸಾರಿಗೆ ವಿಮಾನವು ಸೋಮವಾರ ಅಫ್ಘಾನಿಸ್ತಾನದಿಂದ ಕೆಲವು ಸಿಬ್ಬಂದಿಯನ್ನು ಮರಳಿ ಕರೆತಂದಿತು ಮತ್ತು ಮಂಗಳವಾರವು ಕಾಬೂಲ್‌ನಿಂದ ಭಾರತೀಯರನ್ನು ಕರೆತರುವ ಎರಡನೇ ವಿಮಾನ ಇದಾಗಿದೆ. ''ಮೇಲೆ ಉಲ್ಲೇಖಿಸಿದ ಜನರು ರಾಯಭಾರ ಕಚೇರಿಯಲ್ಲಿರುವ ಭಾರತೀಯ ಸಿಬ್ಬಂದಿಯನ್ನು ಎರಡನೇ ಸ್ಥಳಾಂತರಿಸುವ ವಿಮಾನದಲ್ಲಿ ಮರಳಿ ಕರೆತರಲಾಗುತ್ತಿದೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.
9/11 ದಾಳಿಯ ನಂತರ ಯುಎಸ್ ನೇತೃತ್ವದ ಮಿಲಿಟರಿ ಅಫ್ಘಾನಿಸ್ತಾನದಲ್ಲಿ ತನ್ನ ಸೇನೆಯನ್ನು ನಿಯೋಜನೆ ಮಾಡಿದೆ. ಆದರೆ ಎರಡು ದಶಕದ ನಂತರ ವಾಷಿಂಗ್ಟನ್ ತನ್ನ ಪಡೆಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಬೆನ್ನಲ್ಲೇ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ದಾಳಿ ಆರಂಭ ಮಾಡಿದ್ದು ಭಾನುವಾರ ಸಂಜೆ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಬೆನ್ನಲ್ಲೇ ತಾಲಿಬಾನ್ ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ "ಭಾರತವು ಕಾಬೂಲ್‌ನ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ," ಎಂದು ಹೇಳಿದ್ದಾರೆ. "ಕಾಬೂಲ್‌ನಲ್ಲಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಭಾರತಕ್ಕೆ ಮರಳಲು ಬಯಸುವವರ ಆತಂಕವನ್ನು ಅರ್ಥಮಾಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಈ ಸಂದರ್ಭದಲ್ಲಿ ಮುಖ್ಯ ಸವಾಲಾಗಿದೆ. ಆ ನಿಟ್ಟಿನಲ್ಲಿ ಪಾಲುದಾರರೊಂದಿಗೆ ಚರ್ಚೆಗಳು ನಡೆಯುತ್ತಿದೆ," ಎಂದು ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದರು.
ನಾಲ್ಕು ದಿನಗಳ ಭೇಟಿಗಾಗಿ ನ್ಯೂಯಾರ್ಕ್‌ನಲ್ಲಿರುವ ಜೈಶಂಕರ್, ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಜೊತೆಯಲ್ಲಿ ಚರ್ಚಿಸಿದ್ದಾರೆ. "ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಜೊತೆಗೆ ಚರ್ಚಿಸಲಾಗಿದೆ. ಕಾಬೂಲ್‌ನಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಮರುಸ್ಥಾಪಿಸುವ ತುರ್ತುಸ್ಥಿತಿಯನ್ನು ಗಣನೆಗೆ ತೆಗೆದು ಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದ ಪ್ರಯತ್ನಗಳನ್ನು ಆಳವಾಗಿ ಪ್ರಶಂಸಿಸುತ್ತೇವೆ," ಎಂದು ಜೈಶಂಕರ್ ಹೇಳಿದ್ದಾರೆ.
"ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಕುರಿತು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಹತ್ವದ ಚರ್ಚೆಗಳು ನಡೆದಿದೆ. ಅಂತರಾಷ್ಟ್ರೀಯ ಸಮುದಾಯದ ಕಳವಳವನ್ನು ವಿಶ್ವಸಂಸ್ಥೆಯಲ್ಲಿ ವ್ಯಕ್ತಪಡಿಸಲಾಗಿದೆ. ವಿಶ್ವಸಂಸ್ಥೆಯಲ್ಲಿ ನನ್ನ ಮಾತುಕತೆಯ ಸಮಯದಲ್ಲಿ ಇವುಗಳನ್ನು ಚರ್ಚಿಸಲು ನಿರೀಕ್ಷಿಸಲಾಗಿದೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು.
ಮತ್ತೊಂದು ಟ್ವೀಟ್‌ನಲ್ಲಿ, "ಸರ್ಕಾರವು ಕಾಬುಲ್‌ನಲ್ಲಿರುವ ಸಿಖ್ ಮತ್ತು ಹಿಂದೂ ಸಮುದಾಯದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆ ಜನರ ಕಲ್ಯಾಣಕ್ಕೆ ಆದ್ಯತೆ ನೀಡಲಾಗುವುದು," ಎಂದು ಹೇಳಿದರು. "ಕಾಬೂಲ್ ಸನ್ನಿವೇಶವನ್ನು ಗಮನಿಸಿದರೆ, ಅಲ್ಲಿನ ಭಾರತೀಯರ ಬಗ್ಗೆ ನಮಗೆ ನಿಖರವಾದ ಮಾಹಿತಿ ಇದೆ. ಇದನ್ನು ಎಂಇಎ ವಿಶೇಷ ಅಫ್ಘಾನಿಸ್ತಾನ ಸೆಲ್‌ಗೆ ಸಂಬಂಧಪಟ್ಟವರೆಲ್ಲರೂ ಒದಗಿಸುವಂತೆ ಒತ್ತಾಯಿಸಲಾಗಿದೆ," ಎಂದರು.
ಇದರ ಸಂಪರ್ಕ ವಿವರಗಳು: ದೂರವಾಣಿ ಸಂಖ್ಯೆ: +919717785379, ಇಮೇಲ್: [email protected], ಜೈಶಂಕರ್ ಹೇಳಿದರು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications