ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ವಂಚಕರ ಪ್ಯಾನ್, ಎಲ್ ಪಿಜಿ ಸಬ್ಸಿಡಿ ಕಡಿತ

By Mahesh
|
Google Oneindia Kannada News

ನವದೆಹಲಿ, ಜೂನ್ 21: ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ವಂಚಕರು ಎಂದು ಗುರುತಿಸಲ್ಪಟ್ಟ ವ್ಯಕ್ತಿಗಳ ಪ್ಯಾನ್, ಎಲ್ ಪಿಜಿ ಸಬ್ಸಿಡಿಗಳನ್ನು ರದ್ದುಗೊಳಿಸಲು ಕೇಂದ್ರ ತೆರಿಗೆ ಇಲಾಖೆ ಮುಂದಾಗಿದೆ.

ವಾರ್ಷಿಕ ಆದಾಯ ತೆರಿಗೆ ಸರಿಯಾಗಿ ಪಾವತಿಸದಿದ್ದಲ್ಲಿ ಪಾನ್ ಕಾರ್ಡ್ ಹಾಗೂ ಅಡುಗೆ ಅನಿಲ ಸಿಲಿಂಡರ್ ಮೇಲೆ ಸಿಗುವ ಸಬ್ಸಿಡಿ ಕಳೆದುಕೊಳ್ಳಬೇಕಾಗುತ್ತದೆ. ಈ ಮೂಲಕ ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮಕ್ಕೆಇಲಾಖೆ ಮುಂದಾಗಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಈ ನೀತಿ ಜಾರಿಗೆ ಬರುವ ಸಾಧ್ಯತೆಯಿದೆ.[ಪಿಎಫ್ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಕಟ್ಟಬೇಕಾಗಿಲ್ಲ!]

ಆದಾಯ ತೆರಿಗೆ ವಿಭಾಗದ ಸಿದ್ಧಪಡಿಸಿರುವ ಕಾಗದಪತ್ರಗಳ ಅನ್ವಯ ತೆರಿಗೆ ಕಟ್ಟದೆ ವಂಚಿಸುವವರಿಗೆ ಸಾರ್ವಜನಿಕ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಸಾಲ ಸೌಲಭ್ಯ ಕೂಡ ದೊರೆಯುವುದಿಲ್ಲ ಎಂದಿದೆ.

I-T department to block PAN, LPG subsidy of tax defaulters

ತೆರಿಗೆ ವಂಚಿಸುವವರ ಎಲ್​ಪಿಜಿ ಸಬ್ಸಿಡಿ ಹಣ ನೇರವಾಗಿ ಖಾತೆಗೆ ಜಮಾ ಆಗದಂತೆ ತಡೆಗಟ್ಟಲು ಸೂಚಿಸಲಾಗಿದೆ. ಚರಾಸ್ತಿ, ಸ್ಥಿರಾಸ್ತಿ ಖರೀದಿ ಅಥವಾ ವ್ಯವಹಾರದಲ್ಲಿ ಪಾನ್ ಕಾರ್ಡ್ ಸಂಖ್ಯೆ ನಮೂದಿಸುವುದು ಕಡ್ಡಾಯ, ತೆರಿಗೆ ಕಟ್ಟದಿದ್ದರೆ ಪಾನ್ ಕಾರ್ಡ್ ಕೂಡ ರದ್ದುಗೊಳಿಸುವ ನಿರ್ಧಾರಕ್ಕೆ ತೆರಿಗೆ ಇಲಾಖೆ ಮುಂದಾಗಿದೆ.[ಆದಾಯ ತೆರಿಗೆದಾರರ ಗಮನಕ್ಕೆ ಈ 2 ಸುದ್ದಿಗಳು]

ಕ್ರೆಡಿಟ್ ಕಾರ್ಡ್ ಹಾಗೂ ಸಾಲ ಪಡೆಯಲು ಸಿಬಿಲ್ Credit Information Bureau Limited ರೇಟಿಂಗ್ ಅತ್ಯವಶ್ಯ. ಒಂದು ವೇಳೆ ಸಾಲ ಪಡೆದು, ತೆರಿಗೆ ವಂಚಿಸಲು ಯತ್ನಿಸಿದರೆ ಸಿಬಿಲ್ ನಿಂದ ಮಾಹಿತಿ ಪಡೆದು ಐಟಿ ಇಲಾಖೆ ನಿಮ್ಮ ಸಂಪೂರ್ಣ ಆರ್ಥಿಕ ವ್ಯವಹಾರ, ಎಷ್ಟು ತೆರಿಗೆ ಕಟ್ಟಬೇಕು ಎಂಬ ವಿವರವನ್ನು ಪ್ರಕಟಿಸಬಹುದು.[ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]

20ಕೋಟಿ ರು ಗೂ ಅಧಿಕ ಮೊತ್ತದ ಸಾಲ ಬಾಕಿ ಇರಿಸಿಕೊಂಡವರ ಹೆಸರು ಹಾಗೂ ವಿವರಗಳನ್ನು ದೇಶದ ಪ್ರಮುಖ ದಿನಪತ್ರಿಕೆ ಹಾಗೂ ವೆಬ್ ಸೈಟ್ ಗಳನ್ನು ಪ್ರಕಟಿಸಿ ಛೀಮಾರಿ ಹಾಕುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಸದ್ಯಕ್ಕೆ 67ಕ್ಕೂ ಅಧಿಕ ಮಂದಿಯ ಹೆಸರು ಪ್ರಕಟಿಸಲಾಗಿದೆ (ಪಿಟಿಐ)

English summary
In order to cripple and check the activities of wilful tax defaulters, the Income Tax department has decided to "block" Permanent Account Number (PAN) of such entities, get their LPG subsidy cancelled and take measures to ensure that they are not sanctioned loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X