ಅವಧಿಗೂ ಮುಂಚೆ ಹುಟ್ಟಿದ ನನ್ನ ಮಗಳ ಜೀವ ಉಳಿಸಲು ನೆರವಾಗಿ

Posted By:
Subscribe to Oneindia Kannada

ಅವಧಿಗೂ ತೀರಾ ಮುಂಚೆ ಹುಟ್ಟಿದ ಹೆಣ್ಣು ಮಗುವೊಂದರ ತಂದೆ ನಾನು. ಮೊದಲ ಹಾಗೂ ಏಕೈಕ ಮಗು ನನ್ನ ಜೀವನದಲ್ಲಿ ಪ್ರವೇಶಿಸಿ 45 ದಿನವಾಯಿತು. ಈ ವರೆಗೆ ಅದನ್ನು ಎತ್ತಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿಲ್ಲ. ಮುಟ್ಟುವುದಕ್ಕೆ ಅಥವಾ ಅದರ ಹತ್ತಿರ ನಿಲ್ಲುವುದಕ್ಕೆ ಕೂಡ ಅವಕಾಶ ಸಿಕ್ಕಿಲ್ಲ.

ನ್ಯಾಷನಲ್ ಇಂಟೆನ್ಸಿವ್ ಕೇರ್ ಯೂನಿಟ್ ನ ಗಾಜಿನ ಗೋಡೆ ಮೂಲಕ ನನ್ನ ಮಗಳನ್ನು ನೋಡ್ತೀನಿ. ತುಂಬ ಸೂಕ್ಷ್ಮವಾದ ಅವಳ ದೇಹಕ್ಕೆ ಉಸಿರಾಟದ ಪೈಪ್, ಸೂಜಿಗಳನ್ನು ಹಾಕಿದ್ದಾರೆ. ನನ್ನ ಹತ್ತಿರವಾಗಲಿ, ತಾಯಿ ಹತ್ತಿರವಾಗಲಿ ಮಗುವನ್ನು ತೆಗೆದುಕೊಂಡು ಬಂದಿಲ್ಲ.

ನನ್ನ ಹೆಸರು ನಜೀರ್ ಅಹ್ಮದ್ ಶೇಖ್. ಅಕ್ಟೋಬರ್ 2013ರಲ್ಲಿ ಸೀಮಾಳನ್ನು ಮದುವೆಯಾದೆ. ಮದುವೆ ಆಗುವ ಮುಂಚೆಯೇ ನಾವಿಬ್ಬರೂ ಪೋಷಕರನ್ನು ಕಳೆದುಕೊಂಡಿದ್ದರಿಂದ ನಮ್ಮ ಸಂಸಾರಕ್ಕೆ ಯಾವ-ಯಾರ ನೆರವೂ ಸಿಗಲಿಲ್ಲ. ಕೆಲವೇ ತಿಂಗಳಲ್ಲಿ ಇಡೀ ಸಂಸಾರದ ಜವಾಬ್ದಾರಿ ನಮ್ಮ ಮೇಲೆ ಬಿತ್ತು.

I’m Struggling To Save My 45-Day-Old Baby Girl

ನನ್ನ ಪಾಲಿನ ಅತಿ ಮುಖ್ಯವಾದ ಸಂದರ್ಭ ಅದು. ಆಕೆಗೂ ನನ್ನ ರೀತಿಯ ಭಾವನೆ ಇತ್ತು ಅಂತ ತಿಳಿದು ತುಂಬ ನಿರಾಳವಾಯಿತು. ಮಕ್ಕಳು ಪಡೆಯುವುದಕ್ಕೆ ಬಹಳ ಪ್ರಯತ್ನಪಟ್ಟರೂ ನಾವು ಯಶಸ್ವಿ ಆಗದಿದ್ದಾಗ ವೈದ್ಯರನ್ನು ಭೇಟಿ ಮಾಡುವುದಕ್ಕೆ ನಿರ್ಧಾರ ಮಾಡಿದಿವಿ. ನನ್ನ ಪತ್ನಿ ಸೀಮಾಗೆ ಹೊಟ್ಟೆಯಲ್ಲಿ ಫೈಭ್ರಾಯಿಡ್ ಇದೆ. ಮಕ್ಕಳು ಆಗುವ ಸಾಧ್ಯತೆ ಶೇ ಎಪ್ಪತ್ತರಷ್ಟು ಕಡಿಮೆ ಅಂತ ಗೊತ್ತಾಯಿತು.

ನಮ್ಮ ಹೃದಯ ಕುಗ್ಗಿಹೋಯಿತು. ಆ ನಂತರದ ಕೆಲ ವಾರಗಳು ನಮ್ಮ ಪಾಲಿಗೆ ಭಾವನಾತ್ಮಕವಾಗಿದ್ದವು. ಆದರೆ ಸಮಯ ಕಳೆದ ಹಾಗೆ ನೆಮ್ಮದಿ ಕಂಡುಕೊಳ್ಳುವುದಕ್ಕೆ ಪ್ರಯತ್ನ ಪಟ್ಟೆವು. ನಮ್ಮ ಮದುವೆ ಆದ ನಾಲ್ಕು ವರ್ಷದ ನಂತರ ಸೀಮಾ ಗರ್ಭಿಣಿಯಾದಳು. ತುಂಬ ಅಚ್ಚರಿಯ ರೀತಿಯಲ್ಲಿ ನಮಗೆ ಮಗು ಆಗಲಿದೆ. ನಾನು ತಂದೆ ಆಗ್ತೀನಿ ಎಂಬ ಸಂತೋಷ.

ಪೋಷಕರು ಹೇಗಿರಬೇಕು ಎಂಬ ಬಗ್ಗೆ ಪುಸ್ತಕಗಳನ್ನು ಓದುವುದಕ್ಕೆ ಶುರು ಮಾಡಿದೆ. ಜೂನ್ ಇಪ್ಪತ್ತೆರಡರ, ರಂಜಾನ್ ಮಾಸದ ಒಂದು ಮಧ್ಯಾಹ್ನ ಸೀಮಾಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು. ನಾನು ಎಷ್ಟೇ ಸಮಾಧಾನವಾಗಿ ಇರಬೇಕು ಅಂದುಕೊಂಡರೂ ಎಲ್ಲ ಪ್ರಯತ್ನಗಳೂ ವಿಫಲವಾದವು.

ಆಕೆಯ ಹೆರಿಗೆಗೆ ಇನ್ನೂ ಎರಡು ತಿಂಗಳು ಸಮಯವಿತ್ತು. ಆಕೆಯನ್ನು ಕರೆದುಕೊಂಡು ಕುರ್ಲಾದಲ್ಲಿರುವ ಹಬೀಬ್ ಆಸ್ಪತ್ರೆಗೆ ತೆರಳಿದೆ. ಆಗ ಎಲ್ಲ ಸಮಸ್ಯೆಗಳು ಗೊತ್ತಾದವು. ಸೀಮಾಳನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಏಕೆಂದರೆ ಅಲ್ಲಿ ಅಗತ್ಯವಾದ ವ್ಯವಸ್ಥೆಗಳಿರಲಿಲ್ಲ. ಆ ನಂತರ ವೈದ್ಯರು ಸೀಮಾಳ ಪರಿಸ್ಥಿತಿಯನ್ನು ಸರಳವಾದ ಪದಗಳಲ್ಲಿ ವಿವರಿಸಿದರು.

ನನ್ನ ಮಗುವಿನ ಸುತ್ತ ಇರುವ ದ್ರವದ ಸೋರಿಕೆ ಆರಂಭವಾಗಿದೆ. ಮುಂದಿನ ಕೆಲ ಗಂಟೆಗಳಲ್ಲಿ ಆಪರೇಷನ್ ಆಗಲಿಲ್ಲ ಅಂದರೆ ಹೆಂಡತಿ ಹಾಗೂ ಮಗು ಎರಡನ್ನೂ ಕಳೆದುಕೊಳ್ತೀನಿ. ನನಗೆ ದಾರಿಯೇ ತೋಚಲಿಲ್ಲ. ನನ್ನ ಕುಟುಂಬಕ್ಕೆ ಹೀಗಾಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಏನು ಮಾಡಬೇಕು ಅಂತ ಗೊತ್ತಾಗದೆ ಮೂಕನಾಗಿಬಿಟ್ಟೆ.

ನನ್ನ ಜೀವನದ ಇಬ್ಬರು ಅತಿ ಮುಖ್ಯ ವ್ಯಕ್ತಿಗಳು ದೂರವಾಗುವುದರಲ್ಲಿದ್ದರು. ಕಳೆದ ಏಳು ತಿಂಗಳಿಂದ ನಾನು- ನನ್ನ ಹೆಂಡತಿಯು ಆ ಮಗುವಿಗಾಗಿ ಕಾಯುತ್ತಿದ್ದೆವು. ಕೆಲವು ಸ್ನೇಹಿತರ ಸಹಾಯದಿಂದ ನನ್ನ ಹೆಂಡತಿಯನ್ನು ಸಮಯಕ್ಕೆ ಸರಿಯಾಗಿ ಹೋಲಿ ಸ್ಪಿರಿಟ್ ಆಸ್ಪತ್ರೆಗೆ ಕರೆದುಕೊಂಡು ಬಂದೆ.

ಸೀಮಾಳನ್ನು ಆಸ್ಪತ್ರೆಯ ಆಪರೇಷನ್ ವಾರ್ಡ್ ಗೆ ಕರೆದೊಯ್ದರೆ ನನ್ನ ತಲೆಯಲ್ಲಿ ನೂರಾರು ಯೋಚನೆ. ಆ ಪೈಕಿ ಹಲವು ಭಯಂಕರವಾಗಿದ್ದವು. ನನ್ನ ಜೀವನದಲ್ಲಿ ಮಾಡಿದ್ದ ಒಳ್ಳೆ ಕೆಲಸಗಳನ್ನೆಲ್ಲ ಒಂದು ಸಲ ನೆನಪಿಸಿಕೊಂಡೆ. ಅವುಗಳನ್ನೆಲ್ಲ ಪರಿಗಣಿಸಿ, ಆ ದೇವರು ನನ್ನ ಸಂತೋಷವನ್ನು ಕಿತ್ತುಕೊಳ್ಳದೆ ಇರಲಿ ಎಂಬುದು ನನ್ನ ಪ್ರಾರ್ಥನೆಯಾಗಿತ್ತು.

ಆಗ ಮತ್ತೊಂದು ಅಚ್ಚರಿ ನಡೆಯಿತು. ಅದಕ್ಕಾಗಿ ಪ್ರತಿ ದಿನವೂ ಆ ದೇವರಿಗೆ ಧನ್ಯವಾದ ಹೇಳ್ತೀನಿ. ನನ್ನ ಹೆಂಡತಿ ಬದುಕಿಕೊಂಡಿದ್ದಳು. ಆ ವರೆಗೂ ವೈದ್ಯರೇ ನೋಡದಂಥ ಸಣ್ಣಗಿನ ಮಗುವಿಗೆ ಜನ್ಮ ಕೊಟ್ಟಿದ್ದಳು. ನಾನು ಆ ಮಗುವನ್ನು ನೋಡುವ ಮೊದಲೇ ನೇರವಾಗಿ ತುರ್ತು ನಿಗಾ ಘಟಕಕ್ಕೆ ತೆಗೆದುಕೊಂಡು ಹೋದರು.

ನನ್ನ ಮಗಳಿಗೆ ಸೆಪ್ಸಿಸ್. ಇದು ತೀರಾ ಗಂಭೀರವಾದ ಸ್ಥಿತಿ. ಮಗುವಿನ ಅಂಗಾಂಶಗಳು ಸೋಂಕಿನ ಜತೆ ಹೋರಾಡಲಾಗದೆ ಹಾನಿಗೆ ಒಳಗಾಗುತ್ತವೆ. ಅವಧಿಗೆ ಮುನ್ನ ಹುಟ್ಟಿದ ಮಗು ಆದ್ದರಿಂದ ಅದರ ರೋಗನಿರೋಧಕ ಶಕ್ತಿ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಇನ್ನೂ ಭಯಂಕರ ಸ್ಥಿತಿ ನೋಡಿದೆ.

ಆ ಮಗುವಿಗೆ ತನ್ನಷ್ಟಕ್ಕೆ ಉಸಿರಾಡುವುದು ಸಾಧ್ಯವಾಗುತ್ತಿರಲಿಲ್ಲ. ಅಗತ್ಯವಿರುವಷ್ಟು ಆಮ್ಲಜನಕ ಅವಳ ಮೆದುಳಿನವರೆಗೆ ತಲುಪುತ್ತಲೇ ಇರಲಿಲ್ಲ. ಶ್ವಾಸಕೋಶಕ್ಕೆ ವೈದ್ಯರು ಪೈಪ್ ಗಳನ್ನು ಹಾಕಿದರು. ಅವಳ ಎದೆ ಬಡಿತ ಹೆಚ್ಚಾದಂತೆಲ್ಲ ನನ್ನ ರಕ್ತ ತಣ್ಣಗಾಗುತ್ತಿತ್ತು. ಅವಳ ದೇಹಕ್ಕೆ ಮಾಡುತ್ತಿದ್ದ ಚಿಕಿತ್ಸೆ ನನ್ನ ಹಾಗೂ ಸೀಮಾಳ ನೋವನ್ನು ಮತ್ತೂ ಹೆಚ್ಚು ಮಾಡಿದವು.

ತುಂಬ ಬೆಚ್ಚಗಿನ, ಸಂತಸದಾಯಕ ತಾಯಿ ಗರ್ಭದಿಂದ ಅವಳು ಈ ನರಕಕ್ಕೆ ಬಂದಿದ್ದಳು. ಆದರೆ ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ತುರ್ತು ನಿಗಾ ಘಟಕದಿಂದ ಆಕೆಯನ್ನು ಆಚೆ ತಂದರೆ ನಾನೇ ಅವಳನ್ನು ಕೊಂದ ಹಾಗೆ- ಇದು ವಾಸ್ತವ. ಇದೆಲ್ಲದರ ಜತೆಗೆ ಆಸ್ಪತ್ರೆಯ ಬಿಲ್ ಗಳು ರಾತ್ರಿಯ ನಿದ್ದೆಯನ್ನು ಕಸಿದಿದ್ದವು.

ಬಿಲ್ ಕಟ್ಟಲು ಸಾಧ್ಯವಿಲ್ಲ ಅಂದರೆ ಮಗಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಬೇಕು. ನನ್ನ ಮಗಳನ್ನು ಉಳಿಸಿಕೊಳ್ಳಲು ನನಗೆ ಸಹಾಯ ಮಾಡಿ. ನಿಮ್ಮ ದೇಣಿಗೆ-ನನ್ನ ಪಾಲಿಗೆ ಎಲ್ಲವೂ ಆಗಿರುತ್ತದೆ.

ನನ್ನ ತಿಂಗಳ ಸಂಬಳ 8 ಸಾವಿರ ರುಪಾಯಿ. ಸೀಮಾ ಮನೆಯಲ್ಲೇ ಇರುವ ಗೃಹಿಣಿ. ಚಿಕಿತ್ಸೆ ವೆಚ್ಚ 2,55,000 ರುಪಾಯಿ ಆಗುತ್ತದೆ. ಪರೀಕ್ಷೆಗಳು ಮತ್ತು ಔಷಧಿ ಇವೆಲ್ಲ ಸೇರಿ ಈಗಾಗಲೇ 1,50,000 ರುಪಾಯಿ ದಾಟಿದೆ. ಇನ್ನೂ ಸಾಕಷ್ಟು ಹಣ ಬೇಕಾಗುತ್ತದೆ. ಅಷ್ಟು ಹಣ ಒಟ್ಟುಗೂಡಿಸುವುದು ನನ್ನ ತಾಕತ್ತಿನದಲ್ಲ.

ನನ್ನ ಹಿತೈಷಿಗಳ ಸಹಾಯದಿಂದ ಸ್ವಲ್ಪ ಮಟ್ಟಿಗೆ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವಾಗಿದೆ. ನನ್ನ ಹೆಂಡತಿ ಗರ್ಭಿಣಿ ಅಂತ ಹೇಳಿದಾಗ, ಏನಾದರೂ ಸಹಾಯ ಬೇಕೆಂದರೆ ನಾವು ಜೊತೆಗಿದ್ದೇವೆ ಎಂದು ಸಂಬಂಧಿಕರು ಹೇಳಿದ್ದರು. ಆದರೆ ಈಗ ಸಹಾಯಕ್ಕಾಗಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ.

ಸೀಮಾಳನ್ನು ನೋಡಿಕೊಳ್ಳಬೇಕು, ಆಸ್ಪತ್ರೆ ಬಿಲ್ ಪಾವತಿಸಬೇಕು, ಹಣ ಹೊಂದಿಸಲು ಅಲ್ಲಿ ಇಲ್ಲಿ ಸುತ್ತಾಡಬೇಕು.. ಈ ಎಲ್ಲದರಿಂದ ನಾನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಬರಿದಾಗಿ ಬಿಟ್ಟಿದ್ದೀನಿ.

ಇಂಥ ಸನ್ನಿವೇಶದಲ್ಲಿ ಕೆಲವರಿಗೆ ಮಾತ್ರ ನಾನು ಕೇಳಿಕೊಳ್ಳುವುದಕ್ಕೆ ಸಾಧ್ಯ. ನನ್ನ ಮಗಳನ್ನು ಉಳಿಸಿಕೊಳ್ಳಬೇಕು ಅಂದರೆ Ketto.orgಗೆ ದೇಣಿಗೆ ನೀಡಿ. ಕೊನೆ ಅದ್ಭುತವೊಂದು ಸಂಭವಿಸಲು ಸಹಾಯ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I’m a father of an extremely premature born baby girl. It’s been 45 days 4 hours since my first and only child came into my life and I still haven’t been allowed to hold, touch or even stand near her. My only view of her has been through the glass walls of the Neonatal Intensive Care Unit, that contains her tiny body. Please help me to save my child.