ಮೂರೂವರೆ ವರ್ಷದ ನನ್ನ ಮಗನ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಿ

Posted By:
Subscribe to Oneindia Kannada

ಯಾವಾಗೆಲ್ಲ ವೈದ್ಯರು ಮೂರೂವರೆ ವರ್ಷದ ನನ್ನ ಮಗ ಶ್ರೀ ಹತ್ತಿರ ಬರುತ್ತಾರೋ ಆಗೆಲ್ಲ ಅವನು ತನ್ನ ಹೊದಿಕೆಯೊಳಗೆ ಜಾರಿಕೊಳ್ಳುತ್ತಾನೆ ಮತ್ತು ಅವರ ಕಣ್ಣಿಗೆ ಕಾಣಿಸದಂತೆ ಅಡಗಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ನರ್ಸ್ ಹಾಗೂ ವೈದ್ಯರ ಚಿತ್ರಗಳನ್ನು ತನ್ನ ಡ್ರಾಯಿಂಗ್ ಪುಸ್ತಕದಲ್ಲಿ ಬರೆದಿರುತ್ತಾನೆ. ಅದರಲ್ಲಿ ಅವರನ್ನು ರಾಕ್ಷಸರಂತೆ ಚಿತ್ರಿಸಿ, ತಲೆಯ ಮೇಲೆ ಕೊಂಬು ಬರೆದಿರುತ್ತಾನೆ.

ಅವನಿಗೆ ಸಿರಿಂಜ್ ಗಳು ಅಂದರೆ ಭಯ. ಅದರೆ ಎರಡು ವಾರದಿಂದ ಧೈರ್ಯ ತೋರಿಸುತ್ತಿದ್ದಾನೆ. ಶ್ರೀಗೆ ಬ್ಲಡ್ ಕ್ಯಾನ್ಸರ್ ಅಂತ ವೈದ್ಯರು ಈ ತಿಂಗಳು ನನಗೆ ಹೇಳಿದಾಗ ಜಗತ್ತೇ ಛಿದ್ರವಾದಂತೆ ನಡುಗಿಹೋದೆ. ಆ ನಂತರ ಈ ಎರಡು ಪದಗಳನ್ನು ಪ್ರತಿ ದಿನ ಕೇಳುತ್ತಾ ಇದ್ದೀನಿ. ನನ್ನ ಮಗ ಪ್ರಪಾತದ ಅಂಚಿನಲ್ಲಿರುವಂತೆ ಪ್ರತಿ ದಿನ ಭಾಸವಾಗುತ್ತದೆ.

ವೈದ್ಯಕೀಯ ಬಿಲ್ ಕಟ್ಟಲು ಸಹ ಆಗದ ನನ್ನ ಅಸಹಾಯಕತೆಯಿಂದ ಅವನನ್ನು ಅದರಾಚೆಗೆ ನೂಕಿ ನನ್ನಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತೇನೋ ಎಂಬ ಆತಂಕ ನನ್ನದು. ಶ್ರೀ ಇನ್ನೂ ಪುಟ್ಟ ಹುಡುಗ. ಆದ್ದರಿಂದ ಕಿಮೋಥೆರಪಿ ಮೂಲಕ ಕನಿಷ್ಠ ಆರು ತಿಂಗಳಲ್ಲಿ ಅವನ ಕಾಯಿಲೆ ವಾಸಿ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ.

I’m Struggling To Pay For My 3.5-Year-Old Son’s Cancer Treatment

ಆದರೆ, ಅದರ ಖರ್ಚು ಕೇಳಿದಾಗಿನಿಂದ ನನಗೆ ನಿದ್ದೆಯೇ ಬರ್ತಿಲ್ಲ. ಆ ಚಿಕಿತ್ಸೆಗೆ 12 ಲಕ್ಷ ರುಪಾಯಿ ಆಗಬಹುದಂತೆ. ಕೇವಲ 2 ವರದ ಹಿಂದಿನವರೆಗೆ ನಮ್ಮ ಜೀವನ ಚೆನ್ನಾಗಿತ್ತು. ಕ್ಯಾನ್ಸರ್ ಎಂಬ ಮಹಾಮಾರಿ ನಮ್ಮ ಮನೆಯ ಬಾಗಿಲು ತಟ್ಟಿ, ಜೀವನವನ್ನೇ ಛಿದ್ರ ಮಾಡಿಹಾಕಿತು. ಚಿಕಿತ್ಸೆ ದೊರೆತು, ಕ್ಯಾನ್ಸರ್ ಅನ್ನು ನನ್ನ ಮಗ ಸೋಲಿಸಬೇಕು ಅಂದರೆ ಅನಿವಾರ್ಯವಾಗಿ ಸಹಾಯದ ಅಗತ್ಯವಿದೆ.

ನನ್ನ ಹೆಸರು ಸಂದೇಶ್ ಕದಂ. ನಾನೊಬ್ಬ ಸೇಲ್ಸ್ ಮನ್. ಪ್ರತಿ ತಿಂಗಳು 8 ಸಾವಿರ ದುಡಿಯುತ್ತೇನೆ. ವೈಯಕ್ತಿಕ ಕಾರಣಗಳಿಗಾಗಿ ಒಂದು ವರ್ಷದ ಹಿಂದೆ ಮನೆಯಿಂದ ಆಚೆ ಬಂದು ಬಿಟ್ಟೆವು. ಆದ್ದರಿಂದ ಮನೆ ಬಾಡಿಗೆ ಖರ್ಚು 4 ಸಾವಿರ ಹೆಚ್ಚಾಗಿದೆ. ಈ ವರೆಗೆ ಚಿಕಿತ್ಸೆಗಾಗಿ 90 ಸಾವಿರ ರುಪಾಯಿ ಖರ್ಚು ಮಾಡಿದ್ದೀನಿ. ನನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ಖರ್ಚು ಮಾಡಿದ್ದೇನೆ.

ನನ್ನ ಮಗನನ್ನು ಉಳಿಸಿಕೊಳ್ಳಲು ಒಟ್ಟು ಮಾಡಬೇಕಾದ ಮೊತ್ತ ತುಂಬ ದೊಡ್ಡದಿದೆ. ಕಿಮೋಥೆರಪಿಯ ಮೊದಲ ಸೆಷನ್ ಗೆ ಬೇಕಾದಷ್ಟು ಹಣ ಕೂಡ ನನ್ನಲಿಲ್ಲ. ಮನೆಯ ಬಾಡಿಗೆ ಕಟ್ಟಿದ ನಂತರ ಉಳಿಯುವ ನನ್ನ ಸಂಬಳದ ಹಣದಲ್ಲಿ ಔಷಧಿಗಳು ಹಾಗೂ ಟೆಸ್ಟ್ ಗಳನ್ನು ಮಾಡಿಸಬಹುದು.

I’m Struggling To Pay For My 3.5-Year-Old Son’s Cancer Treatment

ಇದೆಲ್ಲ ಹೇಗೆ ಶುರುವಾಯಿತು ಎಂಬುದು ಇನ್ನೂ ನೆನಪಿದೆ. ಒಂದು ದಿನ ಸಂಜೆ ಮಾಮೂಲಿನಂತೆ ನಾನು ಹಾಗೂ ಶ್ರೀ ಮನೆ ಹತ್ತಿರದ ಉದ್ಯಾನವನಕ್ಕೆ ಹೋಗಿದ್ದಿವಿ. ಅಂದು ಒಂದೊಂದು ಹೆಜ್ಜೆ ಇಡುವುದಕ್ಕೂ ಅವನಿಗೆ ಕಷ್ಟವಾಗುತ್ತಿತ್ತು. ಶಕ್ತಿ ಕುಂದಿದಂತಾಯಿತು. ಸಂಜೆ ಕಳೆಯುತ್ತಿದ್ದಂತೆ ಅವನ ಕೈ ಹಾಗೂ ತುಟಿ ಬಿಳಚಿಕೊಳ್ಳಲಾರಂಭಿಸಿದವು.

ಅವನ ದೇಹದ ರಕ್ತ ಬಸಿದುಹೋದಂತೆ ಕಾಣಿಸುತ್ತಿದ್ದ. ತಕ್ಷಣವೇ ಆಸ್ಪತ್ರೆಗೆ ಹೋದೆವು. ಅವನ ಶ್ವಾಸಕೋಶದಲ್ಲಿ ಸಮಸ್ಯೆ ಇರುವಂತಿದೆ ಎಂದು ವೈದ್ಯರು ಹೇಳಿದರು. ಆದರೆ ಅವನ ಅಸ್ಥಿ ಮಜ್ಜೆಯ ಪರೀಕ್ಷೆ ಮಾಡಿದ ನಂತರ ಗೊತ್ತಾಗಿದ್ದು, ಪರಿಸ್ಥಿತಿ ಅಂದುಕೊಂಡಿದ್ದಕ್ಕಿಂತ ಗಂಭೀರವಾಗಿದೆ ಎಂಬ ಅಂಶ. ನನ್ನ ಮಗನಿಗೆ ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೆಮಿಯಾ.

ಈ ಬಗ್ಗೆ ಒಂದು ರಾಶಿ ಪ್ರಶ್ನೆ ಕೇಳಿದ ನಂತರ ವೈದ್ಯರು ಹೇಳಿದರು: ಇದು ರಕ್ತ ಮತ್ತು ಅಸ್ಥಿ ಮಜ್ಜೆ ಕ್ಯಾನ್ಸರಿನ ಒಂದು ಬಗ್ಗೆ ಅಂತ. 'ಅಕ್ಯುಟ್' ಅಂದರೆ ಈ ಕಾಯಿಲೆ ಬಹಳ ಬೇಗ ಹಬ್ಬುತ್ತದೆ ಮತ್ತು ರಕ್ತಕಣಗಳು ಬೆಳೆಯಲು ಬಿಡಲಾರದು. ದೇಹದಲ್ಲಿ ತುಂಬ ಬೇಗ ಹಬ್ಬುವ ಈ ಕಾಯಿಲೆಗೆ ತಕ್ಷಣದಿಂದಲೇ ಚಿಕಿತ್ಸೆ ಆರಂಭಿಸಬೇಕಿತ್ತು. ಪ್ರತಿ ದಿನ 1 ಸಾವಿರ ರುಪಾಯಿಯ ಇಂಜೆಕ್ಷನ್ ಕೊಡಿಸಬೇಕು.

ಅದಕ್ಕಾಗಿ ನಾನು ಕೆಲಸ ಮಾಡುವ ಸ್ಥಳದಲ್ಲಿ 50 ಸಾವಿರ ರುಪಾಯಿ ಸಾಲ ಪಡೆದೆ ಮತ್ತು ಆವರೆಗೆ ನಾನು ಉಳಿತಾಯ ಮಾಡಿದ್ದೆಲ್ಲ ಚಿಕಿತ್ಸೆಗೆ ಖರ್ಚಾಯಿತು.

I’m Struggling To Pay For My 3.5-Year-Old Son’s Cancer Treatment

ಆ ಕುಟುಂಬದ ಪಾಲಿನ ಏಕೈಕ ಆಧಾರ ಸ್ಥಂಭ ಸಂದೇಶ್. ಅವರ ಮಗನ ಕ್ಯಾನ್ಸರ್ ಚಿಕಿತ್ಸೆಗೆ ಹಣ ಒಗ್ಗೂಡಿಸಲು ಪರದಾಡುತ್ತಿದ್ದಾರೆ. ನೀವು ಅವರಿಗೆ ಇಲ್ಲಿ ಸಹಾಯ ಮಾಡಬಹುದು.

ನನ್ನ ಮಗನಿಗೆ ಮನೆಯ ಸುತ್ತಾ ಓಡುವುದು ಮತ್ತು ಉದ್ಯಾನದಲ್ಲಿ ನನ್ನ ಜತೆ ಲಾಕ್ ಅಂಡ್ ಕೀ ಆಡುವುದು ಬಹಳ ಇಷ್ಟ. ಆದರೆ ಈ ಕಾಯಿಲೆ ಅವನನ್ನು ಆಸ್ಪತ್ರೆಯ ಬೆಡ್ ಗೆ ಸೀಮಿತ ಮಾಡಿದೆ. ಅವನಿಗೆ ತುಂಬ ಇಷ್ಟವಾದ ಕಾರ್ಟೂನ್ ನೆಟ್ ವರ್ಕ್ ನೋಡಲು ಸಹ ಆಗುತ್ತಿಲ್ಲ. ಏಕೆಂದರೆ ಆಸ್ಪತ್ರೆಯ ವಾರ್ಡ್ ನಲ್ಲಿ ಟಿವಿ ಇಲ್ಲ.

ಸುಮ್ಮನೆ ತಿನ್ನಬೇಕಲ್ಲ ಅಂತ ತಿನ್ನುತ್ತಾನೆ. ಕಿಮೋಥೆರಪಿ ಚಿಕಿತ್ಸೆ ನಡೆಯುತ್ತಿರುವುದರಿಂದ ಯಾವ ರುಚಿಯೂ ಗೊತ್ತಾಗಲ್ಲ. ಎಲ್ಲವೂ ಒಂದೇ ರುಚಿಯಿದೆ ಎನ್ನುತ್ತಾನೆ. ನಾನು ಅವನಿಗೆ ಬಹಳ ಪ್ರಶ್ನೆಗಳನ್ನು ಕೇಳುತ್ತೀನಿ, ಈ ಸಿರಿಂಜ್ ಗಳಿಂದ ತುಂಬ ನೋವಾಗುತ್ತಾ? ಉಸಿರಾಡುವುದಕ್ಕೆ ಸಮಸ್ಯೆಯಾಗುತ್ತಾ?, ಏನಾದರೂ ತಿನ್ನೋದಿಕ್ಕೆ ಇಷ್ಟಪಡ್ತೀಯಾ?.

ಈ ಯಾವುದೇ ಪ್ರಶ್ನೆಗಳಿಗೆ ಅವನ ಉತ್ತರ ಮೌನವೇ ಆಗಿರುತ್ತದೆ. ಈ ಎಲ್ಲ ಚಿಕಿತ್ಸೆ ಮಾಡಿಸುತ್ತಿರುವುದಕ್ಕೆ ಅವನಿಗೆ ನಮ್ಮ ಮೇಲೆ ಸಿಟ್ಟು. ಎಲ್ಲವನ್ನೂ ತನ್ನ ಸ್ನೇಹಿತನ ಬಳಿ ಹೇಳಿಕೊಳ್ಳುತ್ತಾನೆ- ಅದು ಒಂದು ಪ್ಲಾಸ್ಟಿಕ್ ಬಾತುಕೋಳಿ. ಅದನ್ನು ಆಸ್ಪತ್ರೆಯಲ್ಲೇ ಇಟ್ಟುಕೊಂಡಿದ್ದಾನೆ. ಅದರ ಜತೆಗೆ ರಾತ್ರಿ ಹೊತ್ತು ಮಾತನಾಡು ಅಂತ ನಾನೇ ಹೇಳಿದ್ದೀನಿ.

ಆಸ್ಪತ್ರೆ ಇಷ್ಟವಿಲ್ಲ, ಮನೆಗೆ ವಾಪಸ್ ಹೋಗಬೇಕು, ಪ್ರತಿ ಸಂಜೆ ಅಪ್ಪನ ಜತೆ ಸುತ್ತಾಡಬೇಕು ಅಂತೆಲ್ಲ ಆ ಬಾತುಕೋಳಿ ಹತ್ತಿರ ಹೇಳಿಕೊಳ್ಳುತ್ತಾನೆ.

ಸಿರಿಂಜ್ ಗಳಿಂದ ಮತ್ತು ಕಿಮೋಥೆರಪಿಯ ನೋವಿನಿಂದ ಅವನನ್ನು ರಕ್ಷಿಸಬೇಕಿದೆ. ಆದರೆ ನನ್ನ ಕೈ ಕಟ್ಟಿಹಾಕಿದೆ. ಹಣದಿಂದ ಮಾತ್ರ ಈ ಆಸ್ಪತ್ರೆಯಿಂದ ಅವನನ್ನು ಹೊರ ಕರೆತರಲು ಸಾಧ್ಯ. ನಾನು ನಿನಗೋಸ್ಕರ ಇದ್ದೀನಿ ಮಗನೇ ಎಂದು ಅವನನ್ನು ನಂಬಿಸಿದ್ದೀನಿ. ಅವನಿಗೇನೂ ಆಗಲಾರದು ಎಂಬ ನಂಬಿಕೆ ಕೊಟ್ಟಿದ್ದೀನಿ. ಅವನು ಈ ರೀತಿ ಕಷ್ಟ ಪಡುವುದು ನನ್ನಿಂದ ನೋಡುವುದಕ್ಕೆ ಆಗಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ.

ನೀವು ಸಂದೇಶ್ ಗೆ ಸಹಾಯ ಮಾಡಬಹುದು. ಅವರಿಗೆ ಹಣ ಒಟ್ಟುಗೂಡಿಸುತ್ತಿರುವ ಕೆಟ್ಟೋಗೆ ಇಲ್ಲಿ ದೇಣಿಗೆ ನೀಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
My name is Sandesh Kadam. I’m a salesman, I make Rs. 8,000 every month. So far, I’ve spent Rs. 90,000 for the treatment. I’ve put everything I owned into saving my son’s life and still it’s far away from the amount I need to move past the first chemotherapy session that he’s received. So, 12 lakh rupee need for treatment. Please help us.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ