Hyderabad Cobra Viral Video: ನಾಗರಹಾವಿಗೆ ಚುಮ್ಮಾ ದೇ ಚುಮ್ಮಾ ಎಂದು ಚುಂಬಿಸಿ ಪ್ರಾಣ ಕಳೆದುಕೊಂಡ ಯುವಕ- ವಿಡಿಯೋ
ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆಯಲು ಜನರು ಏನೆಲ್ಲಾ ಮಾಡುತ್ತಾರೆಂದು ಕಲ್ಪಿಸಿಕೊಳ್ಳಲು ಆಗದು. ಕೆಲವೊಮ್ಮೆ ಕೆಲವರು ಚಲಿಸುವ ರೈಲುಗಳಿಂದ, ಕೆಲವೊಮ್ಮೆ ಎತ್ತರದ ಬೆಟ್ಟಗಳಿಂದ ಜಿಗಿಯುತ್ತಾರೆ. ಖ್ಯಾತಿಯ ಆಸೆಯಲ್ಲಿ ಯುವಕರಂತೂ ತಮ್ಮ ಜೀವನದ ಬಗ್ಗೆ ಕಾಳಜಿ ವಹಿಸುವುದೇ ಇಲ್ಲ.
ಹೈದರಾಬಾದಿನ ವಾರಂಗಲ್ ಜಿಲ್ಲೆಯಲ್ಲಿ ಈಗ ಅಂತಹ ಒಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋ ನೋಡಿದರೆ ನೀವು ಶಾಕ್ ಆಗೋದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ರೀಲ್ ಮಾಡುವಾಗ 20 ವರ್ಷದ ಯುವಕನೊಬ್ಬ ನಾಗರ ಹಾವನ್ನು ಬಾಯಲ್ಲಿ ಇಟ್ಟುಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಯುವಕ ನಾಗರ ಹಾವನ್ನು ಬಹಳ ಹೊತ್ತು ಬಾಯಲ್ಲಿ ಇಟ್ಟುಕೊಳ್ಳುತ್ತಾನೆ. ಈ ವೇಳೆ ಏಕಾಏಕಿ ನಾಗರಹಾವು ಕಚ್ಚಿದೆ. ಇದರ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೆಲಂಗಾಣದ ವಾರಂಗಲ್ ಜಿಲ್ಲೆಯ ದೇಸಾಯಿಪೇಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ 20 ವರ್ಷದ ಶಿವರಾಜ್ ತನ್ನ ತಂದೆ ಗಂಗಾರಾಮ್ ಅವರಿಂದ ಹಾವು ಹಿಡಿಯುವ ಕೌಶಲ್ಯವನ್ನು ಕಲಿತ್ತಿದ್ದರು. ನಾಗರಹಾವು ಹಿಡಿಯಲು ಗ್ರಾಮಸ್ಥರು ಗಂಗಾರಾಮ್‌ಗೆ ಕರೆ ಮಾಡುತ್ತಿದ್ದರು. ಶಿವರಾಜ್ ತಂದೆಯೊಂದಿಗೆ ಹಾವುಗಳನ್ನು ಹಿಡಿಯಲು ತೆರಳಿ ತಂದೆಯಂತೆ ಆತನೂ ಕೂಡ ಹಾವುಗಳನ್ನು ಹಿಡಿಯುವುದನ್ನು ಕಲಿತಿದ್ದನು.
ಶಿವರಾಜ್ 06 ಅಡಿ ಉದ್ದದ ನಾಗರಹಾವನ್ನು ಹಿಡಿದಿದ್ದರು. ನಾಗರಹಾವು ಹಿಡಿದ ನಂತರ ಶಿವರಾಜ್ ಫೋಟೋ ಶೂಟ್ ಮಾಡಿ ಹಾವಿನೊಂದಿಗೆ ರೀಲ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ನಾಗರ ಹಾವನ್ನು ಬಾಯಿಯೊಳಗೆ ಇಟ್ಟು ಕೈಮುಗಿದು ನಿಂತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
रील बनाने के चक्कर में कोबरा को मुंह में ही डाल लिया! देखें वीडियो@TelanganaCMO pic.twitter.com/DLoe1qe1RU
— Chirag Gothi (@AajGothi) September 7, 2024
ಇದೀಗ ಬಂದಿರುವ ವಿಡಿಯೋದಲ್ಲಿ ಶಿವರಾಜ್ ನಾಗರ ಹಾವನ್ನು ಹೇಗೆ ಬಾಯಿಗೆ ಹಾಕಿಕೊಂಡಿದ್ದಾರೆ ಎಂಬುದು ಕಂಡು ಬಂದಿದೆ. ಆತ ಹಾವನ್ನು ತನ್ನ ಬಾಯಿಗೆ ನೇತುಹಾಕಿರುವುದನ್ನು ವಿಡಿಐಒದಲ್ಲಿ ಕಾಣಬಹುದು. ನಂತರ ಅವನು ತನ್ನ ಕೈಗಳನ್ನು ಜೋಡಿಸಿ ಕೈಮುಗಿದು ನಿಂತಿದ್ದಾನೆ. ಕೆಲ ಹೊತ್ತು ಯುವಕ ಹಾವಿನ ಮುಖವನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ನಿಂತಿದ್ದಾನೆ. ಥಂಬ್ಸ್ ಅಪ್ ಚಿಹ್ನೆಯನ್ನು ತೋರಿಸುತ್ತಾನೆ.
ಈ ವೇಳೆ ಆತನ ಸಹಚರ ಮೊಬೈಲ್ ನಿಂದ ವಿಡಿಯೋ ಶೂಟ್ ಮಾಡುತ್ತಿರುವುದನ್ನು ಕಾಣಬಹುದು. ಆಗ ನಾಗರ ಹಾವು ಏಕಾಏಕಿ ಶಿವರಾಜ್‌ಗೆ ಕಚ್ಚಿದೆ. ಕಚ್ಚಿದ ಸ್ವಲ್ಪ ಹೊತ್ತಿನಲ್ಲೇ ಶಿವರಾಜ್ ಪ್ರಜ್ಞಾಹೀನವಾಗಿದ್ದಾನೆ. ಅವನ ದೇಹದಲ್ಲಿ ವಿಷ ತಕ್ಷಣದಲ್ಲಿ ಹರಡಿದೆ. ಇದರಿಮದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರೀಲ್ ಮಾಡುವಾಗ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಇಂತಹ ಹಲವು ಘಟನೆಗಳು ನಡೆದಿದ್ದು, ಜನರು ಸಾವನ್ನಪ್ಪಿದ್ದಾರೆ. ಇಷ್ಟಾದರೂ ಜನರು ಎಚ್ಚೆತ್ತುಕೊಂಡಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನ ಪ್ರಾಣವನ್ನೇ ಪಣಕ್ಕಿಟ್ಟು ವಿಚಿತ್ರ ವಿಡಿಯೋ ಮಾಡುತ್ತಾರೆ. ಇದರಿಂದ ಹೆಚ್ಚು ಹೆಚ್ಚು ಜನರು ತಮ್ಮನ್ನು ನೋಡಿ ಮೆಚ್ಚಿಕೊಳ್ಳುತ್ತಾರೆ ಎನ್ನುವ ಆಸೆ. ಅದರಿಂದ ಖ್ಯಾತಿ ಗಳಿಸಬಹುದು ಎನ್ನುವ ಆಸೆ ಯುವ ಜನತೆಯಲ್ಲಿ ಹುಟ್ಟಿಕೊಂಡುಬಿಟ್ಟಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಯನ್ನು ಪಡೆಯುವ ಆಸೆಯಿಂದ ಅವರು ಅನೇಕ ಬಾರಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದೆನ್ನುವುದನ್ನು ಮರೆತುಬಿಡುತ್ತಾರೆ. ಇಂತಹ ವಿಡಿಯೋಗಳನ್ನು ನೋಡಿಯಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ.












Click it and Unblock the Notifications