ಪತ್ನಿಯಿಂದ ವಿಚ್ಛೇದನ ಸಿಕ್ಕ ಖುಷಿಗೆ ಪತಿ ಮಾಡಿದ್ದೇನು ಗೊತ್ತಾ?; ದೇಶಾದ್ಯಂತ ವಿಚಿತ್ರ ವಿಡಿಯೋ ಭಾರೀ ವೈರಲ್‌

ಇತ್ತೀಚಿನ ದಿನಗಳಲ್ಲಿ ವಿವಾಹವಾದ ಕೆಲವೇ ದಿನಗಳಲ್ಲಿ ವಿಚ್ಛೇದನದ ಕಡೆ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಅದರಲ್ಲೂ ಸೆಲೆಬ್ರೆಟಿಗಳು, ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಈ ನಿರ್ಧಾರ ತೆಗೆದುಕೊಂಡರೆ ಸಾಕು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿಬಿಡುತ್ತದೆ. ಇದೀಗ ಈ ನಡುವೆಯೂ ಪತ್ನಿಯಿಂದ ವಿಚ್ಛೇದನ ಪಡೆದಿದ್ದಕ್ಕೆ ಪತಿ ಮಾಡಿದ ವಿಚಿತ್ರ ಘಟನೆಯೊಂದು ಅಷ್ಟೇ ಸದ್ದು ಮಾಡುತ್ತಿದೆ. ಹಾಗಾದ್ರೆ ಆತ ಮಾಡಿದ್ದಾದ್ರೂ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪತ್ನಿಯಿಂದ ವಿಚ್ಛೇದನ ಪಡೆದ ಪತಿ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್‌ನಲ್ಲಿ ನಡೆದಿದೆ. ಮಾಣಿಕ್ ಅಲಿ ಹಾಲಿನಿಂದ ಸ್ನಾನ ಮಾಡಿದ ವ್ಯಕ್ತಿಯಾಗಿದ್ದಾರೆ.

Husband Bathes in 40 Liters Milk After Divorce from Wife video viral

ಸ್ನಾನದ ವಿಡಿಯೋ ಮಾಡಿಕೊಳ್ಳುತ್ತಾ, ನಾನು ಈಗ ಸ್ವತಂತ್ರ ಎಂದು ಹೇಳಿಕೊಂಡಿದ್ದಾನೆ. ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿದ್ದೇನೆ. ನಾನು ಇಂದಿನಿಂದ ಸ್ವತಂತ್ರವಾಗಿದ್ದೇನೆ. ಶುದ್ಧೀಕರಣ ಮತ್ತು ಬಿಡುಗಡೆಯ ಸಾಂಕೇತಿಕವಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದು, ಈ ವಿಡಿಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಪತ್ನಿ ತನ್ನ ಪ್ರಿಯಕರನೊಂದಿಗೆ ಆಗಾಗ ಓಡಿಹೋಗುತ್ತಲಿದ್ದಳು. ನಾನು ನಮ್ಮ ಕುಟುಂಬದ ಗೌರವ ಹಾಗೂ ಶಾಂತಿಗಾಗಿ ಮೌನ ಆಗಿದ್ದೆ. ಬಳಿಕ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೆವು. ನನ್ನ ವಕೀಲರು ಕರೆ ಮಾಡಿ ವಿಚ್ಛೇದನ ಸಿಕ್ಕ ಮಾಹಿತಿ ನೀಡಿದರು ಎಂದು ಮಾಣಿಕ್‌ ಅಲಿ ಹೇಳಿಕೊಂಡಿದ್ದಾನೆ. ಅಲ್ಲದೆ, ಈತ ಹಾಲಿನಲ್ಲೇ ಸ್ನಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಎನ್ನುವುದು ಸಾಮಾನ್ಯ ಆಗಿಬಿಟ್ಟಿದೆ. ಅದರಲ್ಲೂ ಮಾಹಿತಿ ಪ್ರಕಾರ, ಪ್ರೀತಿಸಿ ಮದುವೆಯಾಗಿರುವವರೇ ಹೆಚ್ಚಾಗಿ ದುಡುಕಿ ಈ ನಿರ್ಧಾರಕ್ಕೆ ಇಳಿಯುತ್ತಿದ್ದಾರೆ. ಬಳಿಕ ಪಡಬಾರದ ಕಷ್ಟ ಪಟ್ಟಿರುವ ಉದಾಹರಣೆಗಳು ಸಹ ಇವೆ. ಮನೆಯಲ್ಲೇ ಕುಳಿತುಕೊಂಡು ಬರೆಹರಿಸಿಕೊಳ್ಳುವ ಚಿಕ್ಕ ಚಿಕ್ಕ ವಿಚಾರವನ್ನು ದೊಡ್ಡ ಮಟ್ಟದ ಜಗಳಕ್ಕೆ ತೆಗೆದುಕೊಂಡು ಹೋಗಿಬಿಡುತ್ತಾರೆ. ಕೊನೆಗೆ ಕೋರ್ಟ್‌ ಮೆಟ್ಟಿಲೇರಿ ವಿಚ್ಚೇದನಕ್ಕೆ ಮುಂದಾಗುತ್ತಿದ್ದಾರೆ.

ಇನ್ನೂ ಕೆಲ ದಂಪತಿಗಳು ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಡಿಕೊಂಡು ಕೊಲೆ ಹಂತಕ್ಕೂ ಹೋಗಿರುವ ಉದಾಹರಣೆಗಳಿವೆ. ಆದರೆ, ಇದೀಗ ಅಸ್ಸಾಂನಲ್ಲಿ ನಡೆದಿರುವ ವಿಚ್ಚೇದನ ಪ್ರಕರಣ ತುಸು ವಿಚಿತ್ರವಾಗಿದೆ. ಒಟ್ಟಿನಲ್ಲಿ, ಹೇಳೋದಾದ್ರೆ ದಂಪತಿಗಳಿಬ್ಬರಲ್ಲೂ ಹೊಂದಾಣಿಕೆ ಮನೋಭಾವ ಇದ್ದರೆ ಇಲ್ಲಿಯವರೆಗೂ ವಿಷಯ ಇಲ್ಲಿಯವರೆಗೂ ಹೋಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+