ಜನ್ ಧನ್ ಅಕೌಂಟಿಗೆ ಬಿತ್ತು ಕೋಟಿ ಕೋಟಿ, ರಾಜ್ಯಕ್ಕೆ 2ನೇ ಸ್ಥಾನ!

Written By:
Subscribe to Oneindia Kannada

ನವದೆಹಲಿ, ನ 23: ನವೆಂಬರ್ ಎಂಟರಂದು ಪ್ರಧಾನಿ ಮೋದಿ ದೊಡ್ಡ ಮುಖಬೆಲೆಯ ನೋಟನ್ನು ನಿಷೇಧಿಸಿದ ನಂತರ ಜನ್ ಧನ್ ಅಕೌಂಟಿನಲ್ಲಿ ಭಾರೀ ಪ್ರಮಾಣದ ವ್ಯವಹಾರ ನಡೆಯುತ್ತಿದ್ದು, ಕೋಟಿ ಕೋಟಿ ರೂಪಾಯಿ ಜಮಾಗೊಳ್ಳುತ್ತಿದೆ.

ಕಳೆದ ಹದಿಮೂರು ದಿನಗಳಲ್ಲಿ ವಿವಿಧ ಜನ್ ಧನ್ ಅಕೌಂಟಿಗೆ 21ಸಾವಿರ ಕೋಟಿ ರೂಪಾಯಿ ಮೊತ್ತ ಜಮೆಗೊಂಡಿದೆ. ಇದರಲ್ಲಿ ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಸಿದ್ದರಾಮಯ್ಯ ಸಿಎಂ ಆಗಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. (ಸಭೆಯಲ್ಲಿ ಪ್ರಧಾನಿಯನ್ನು ಹೊಗಳಿದ್ದಕ್ಕೆ ಹೀಗಾ ಮಾಡೋದು)

ಪ್ರತೀ ಭಾರತೀಯರು ಬ್ಯಾಂಕ್ ಖಾತೆ ಹೊಂದಿರಬೇಕೆಂದು 28.08.14ರಲ್ಲಿ ಪ್ರಧಾನಿ ಮೋದಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ 'ಪ್ರಧಾನಮಂತ್ರಿ ಜನ್ ಧನ್ ಯೋಜನೆ' ಯನ್ವಯ ಖಾತೆದಾರರು ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಜಮೆ ಮಾಡುವಂತಿಲ್ಲ.

Huge amount deposited in Jan Dhan accounts following demonetisation announcement

ಜೀರೋ ಬ್ಯಾಲನ್ಸ್ ಅಡಿಯಲ್ಲಿ ಅಕೌಂಟ್ ನಿರ್ವವಹಿಸಬಹುದಾದ ಇಂತಹ ಖಾತೆಗಳಲ್ಲಿ ನವೆಂಬರ್ ಎಂಟರ ನಂತರ ಭಾರೀ ಪ್ರಮಾಣದ ಹಣದ ವ್ಯವಹಾರಗಳು ನಡೆಯಲಾರಂಭಿಸಿದೆ.

ಇದನ್ನರಿತ ಕೇಂದ್ರ ಹಣಕಾಸು ಸಚಿವಾಲಯ, ಐಟಿ ಇಲಾಖೆ ಮತ್ತು ರಿಸರ್ವ್ ಬ್ಯಾಂಕ್ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿತ್ತು. ಹಾಗಿದ್ದಾಗ್ಯೂ, 21ಸಾವಿರ ಕೋಟಿ ರೂಪಾಯಿ ವ್ಯವಹಾರ ವಿವಿಧ ಅಕೌಂಟಿನಲ್ಲಿ ಇದುವರೆಗೆ ನಡೆದಿದೆ.

ನವೆಂಬರ್ 9ರಂದು ಬೆಳಗ್ಗೆಗೆ ಅನ್ವಯವಾಗುವಂತೆ ಸುಮಾರು 25.5 ಕೋಟಿ ಜನ್ ಧನ್ ಅಕೌಂಟಿನಲ್ಲಿದ್ದ 45,636.61 ಕೋಟಿ ಮೊತ್ತ, ನ 23ಕ್ಕೆ 66,638 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಜನ್ ಧನ್ ಅಕೌಂಟಿನಲ್ಲಿ ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಜಮೆಯಾದರೆ, ಅಂತಹ ಅಕೌಂಟುಗಳನ್ನು ಬ್ಯಾಂಕುಗಳು 'ಉಳಿತಾಯ ಖಾತೆ' ಎಂದು ಪರಿಗಣಿಸುತ್ತವೆ.

ಜನ್ ಧನ್ ಖಾತೆಯನ್ನು ಅವ್ಯವಹಾರ ನಡೆಸಲು ಅಥವಾ ಕಪ್ಪುಹಣವನ್ನು ವೈಟ್ ಮಾಡಿಕೊಳ್ಳಲು ಬಳಸಿಕೊಳ್ಳಬೇಡಿ ಎಂದು ಈಗಾಗಲೇ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Huge amount deposited in Jan Dhan accounts following demonetisation announcement: Rs.21,000 Crore Deposited in Jan Dhan Accounts, most from West Bengal and Karnataka.
Please Wait while comments are loading...