ಸಮೀಕ್ಷೆ: ಪಂಜಾಬಿನಲ್ಲಿ ಆಮ್ ಆದ್ಮಿ ರಾಜ್ಯಭಾರ, ಗೋವಾ ಅತಂತ್ರ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02: ದೆಹಲಿ ನಂತರ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಪಂಜಾಬ್ ರಾಜ್ಯದಲ್ಲಿ ತನ್ನ ರಾಜ್ಯಭಾರ ನಡೆಸಲಿದೆ. ಆಮ್ ಆದ್ಮಿ ಪಕ್ಷ ಅಧಿಕಾರ ಸ್ಥಾಪಿಸುವ ಸಾಧ್ಯತೆ ಹೆಚ್ಚಿದೆ.

ಗೋವಾದಲ್ಲಿ ಅತಂತ್ರ ವಿಧಾನಸಭೆ ಪರಿಸ್ಥಿತಿ ಎದುರಾಗಲಿದೆ ಎಂದು ಹಫಿಂಗ್ಟನ್ ಪೋಸ್ಟ್ -ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

HuffPost-CVoter Pre-Poll Survey: Aam Aadmi Party Set To Win Punjab, Hung Assembly In Goa

ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ (ಫೆಬ್ರವರಿ 04) ದಂದು ನಡೆಯಲಿದ್ದು, ಮಾರ್ಚ್ 11ರಂದು ಫಲಿತಾಂಶ ಹೊರಬರಲಿದೆ. ಹಫಿಂಗ್ಟನ್ ಹಾಗೂ ಸಿವೋಟರ್ಸ್ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎಎಪಿ 117 ಸ್ಥಾನಗಳ ಪೈಕಿ 63 ಸ್ಥಾನಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ.

ಪಂಜಾಬ್(117 ಸ್ಥಾನಗಳು)

2012ರಲ್ಲಿ ಶಿರೋಮಣಿ ಅಕಾಲಿದಳ 68 ಸ್ಥಾನಗಳಿಸಿತ್ತು.

ಎಎಪಿ: 63
ಕಾಂಗ್ರೆಸ್ + : 43
ಶಿರೋಮಣಿ ಅಕಾಲಿದಳ + ಬಿಜೆಪಿ : 11

ಗೋವಾ (40 ಸ್ಥಾನಗಳು)
ಬಿಜೆಪಿ : 15
ಕಾಂಗ್ರೆಸ್: 14
ಎಎಪಿ: 2
ಇತರೆ : 9

2012ರಲ್ಲಿ ಬಿಜೆಪಿ 24, ಕಾಂಗ್ರೆಸ್ 9, ಇತರೆ 7
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Aam Aadmi Party is poised to win its second state, Punjab, while making little impact in Goa which is headed for a hung assembly in elections for which voting is on Saturday, a HuffPost-CVoter pre-poll survey has found.
Please Wait while comments are loading...