ಸಹಜ ಸ್ಥಿತಿಗೆ ಮರಳುತ್ತಿರುವ ಆಂಧ್ರಪ್ರದೇಶ

ವಿಶಾಖಪಟ್ಟಣ, ಅ. 15 : ಹುಡ್ ಹುಡ್ ಚಂಡಮಾರುತದ ಪ್ರತಾಪಕ್ಕೆ ವಿಶಾಖಪಟ್ಟಣ, ಗಂಗಾವರಂ ಮತ್ತು ಆಂಧ್ರ ಪ್ರದೇಶದ ಕರಾವಳಿ ತೀರಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಮಂಗಳವಾರ ಆಂಧ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸಾವಿರ ಕೋಟಿ ರೂಪಾಯಿ ತುರ್ತು ಪರಿಹಾರವನ್ನು ಘೋಷಿಸಿ ತೆರಳಿದ್ದಾರೆ.

ಮಂಗಳವಾರ ಮಧ್ಯಾಹ್ನ ವಿಶಾಖಪಟ್ಟಣಂಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿಶಾಖಪಟ್ಟಣಂ, ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿಯೊಂದಿಗಿದ್ದರು.[ಆಂಧ್ರಕ್ಕೆ 1000 ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ]

ಆಂಧ್ರದಲ್ಲಿ ಅಬ್ಬರಿಸುತ್ತಿದ್ದ ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದು ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಮುರಿದು ಬಿದ್ದಿರುವ ಮರಗಳು, ಕಡಿತಗೊಂಡಿರುವ ವಿದ್ಯುತ್ ಸಂಪರ್ಕ, ಕಿತ್ತಿರುವ ರಸ್ತೆ ದುರಸ್ತಿ, ಜನರಿಗೆ ಆಹಾರ ಮತ್ತು ವಸತಿ ಕಲ್ಪಿಸುವ ಕೆಲಸ ಚಾಲ್ತಿಯಲ್ಲಿದೆ.

ಪ್ರಧಾನಿ ವೈಮಾನಿಕ ಸಮೀಕ್ಷೆ, ಹುಡ್ ಹುಡ್ ಚಂಡಮಾರುತಕ್ಕೆ ನಲುಗಿದ ಆಂಧ್ರ ಪ್ರದೇಶದ ಕರಾವಳಿ ಮತ್ತು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಚಿತ್ರಗಳು.

ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ

ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ

ಹುಡ್ ಹುಡ್ ಚಂಡಮಾರುತಕ್ಕೆ ತುತ್ತಾದ ವಿಶಾಖಪಟ್ಟಣ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ.

ಜನ ಜೀವನ ಸಹಜ ಸ್ಥಿತಿಗೆ

ಜನ ಜೀವನ ಸಹಜ ಸ್ಥಿತಿಗೆ

ಚಂಡಮಾರುತ ಭೀತಿಗೆ ಹೆದರಿದ್ದ ನಾಗರಿಕರಿಂದ ತಮ್ಮ ಮನೆಗಳತ್ತ ತೆರಳುವ ಪ್ರಯತ್ನ.

ಭದ್ರತೆಗೆ ಒತ್ತು

ಭದ್ರತೆಗೆ ಒತ್ತು

ನಾಗರಿಕರ ರಕ್ಷಣೆಗೆ ಯಾವ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರ ಸಮಾಲೋಚನೆ.

ಸಮುದ್ರ ತೀರದ ದೃಶ್ಯ

ಸಮುದ್ರ ತೀರದ ದೃಶ್ಯ

ಚಂಡಮಾರುತ ಅಬ್ಬರಕ್ಕೆ ಸಿಲುಕಿ ದೋಣಿ, ಬೋಟ್ ಗಳು ಸಮುದ್ರ ತೀರಕ್ಕೆ ಬಂದು ನಿಂತಿವೆ.

ವಿಮಾನ ಸೇವೆ ಆರಂಭ

ವಿಮಾನ ಸೇವೆ ಆರಂಭ

ವಾತಾವರಣ ಹತೋಟಿಗೆ ಬಂದಿದ್ದು ವಿಮಾನಯಾನ ಆರಂಭವಾಗಿದೆ.

ತರಕಾರಿ ಬಂತು

ತರಕಾರಿ ಬಂತು

ಬಸ್‌ ತಂಗುದಾಣದ ಪಕ್ಕದಲ್ಲೇ ತರಕಾರಿ ವ್ಯಾಪಾರ ಆರಂಭ.

ಆಹಾರ ಪೂರೈಕೆ

ಆಹಾರ ಪೂರೈಕೆ

ವಿವಿಧ ಕಡೆಗಳಿಂದ ಹರಿದು ಬಂದ ಆಹಾರ ತಿಂದು ಹೊಟ್ಟೆತುಂಬಿಸಿಕೊಂಡ ಸಂತ್ರಸ್ತರು.

ಹಾಲಿನ ವಾಃನಕ್ಕೆ ಮುಗಿಬಿದ್ದ ಜನ

ಹಾಲಿನ ವಾಃನಕ್ಕೆ ಮುಗಿಬಿದ್ದ ಜನ

ಹಾಲು ಪೂರೈಕೆ ವಾಹನಕ್ಕೆ ಮುಗಿಬಿದ್ದ ಸಾರ್ವಜನಿಕರು.

ವಿದ್ಯುತ್ ಲೈನ್ ದುರಸ್ತಿ

ವಿದ್ಯುತ್ ಲೈನ್ ದುರಸ್ತಿ

ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ದುರಸ್ತಿಗೆ ಮುಂದಾದ ಇಲಾಖೆ ಸಿಬ್ಬಂದಿ.

ಬೃಹತ್ ಮರ ತೆರವು

ಬೃಹತ್ ಮರ ತೆರವು

ಸಾರ್ವಜನಿಕರೇ ಮುಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವು ಮಾಡಿದರು.

ವಾಹನ ಸಂಚಾರ ಆರಂಭ

ವಾಹನ ಸಂಚಾರ ಆರಂಭ

ವಿಶಾಖಪಟ್ಟಣದಲ್ಲಿ ವಾಹನ ಸಂಚಾರ ಆರಂಭ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+