ಹೃತಿಕ್ ಅವರ ಮಾಜಿ ಪತ್ನಿ ವಿರುದ್ಧ ಎಫ್ಐಆರ್

Posted By:
Subscribe to Oneindia Kannada

ಪಣಜಿ, ಜೂನ್ 20: ಹಿಂದಿ ಚಿತ್ರರಂಗದ ಜನಪ್ರಿಯ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ, ಉದ್ಯಮಿ ,ಇಂಟೀರಿಯರ್ ಡಿಸೈನರ್ ಸುಸ್ಸಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಗೋವಾ ಪೊಲೀಸರು ಸುಸ್ಸಾನ್ ವಿರುದ್ಧ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪ ಮೇಲೆ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

37ವರ್ಷ ವಯಸ್ಸಿನ ಸುಸ್ಸಾನ್ ಅವರು 1.87 ಕೋಟಿ ರು ವಂಚನೆ ಮಾಡಿದ ಆರೋಪ ಹೊರೆಸಿ ಪಣಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಸ್ಸಾನ್ ವಿರುದ್ಧ ಐಪಿಸಿ ಸೆಕ್ಷನ್ 420 ಅನ್ವಯ ಪ್ರಕರಣ ದಾಖಲಾಗಿದೆ.[ಕ್ರೈಸ್ತರ ಕೆಂಗಣ್ಣಿಗೆ ಗುರಿಯಾದ ಹೃತಿಕ್ ಮಾಡಿದ ಟ್ವೀಟ್!]

Hrithik Roshan's ex-wife Sussanne booked by Goa police, here's why

ಜೂನ್ 9ರಂದು ಸುಸ್ಸಾನ್ ವಿರುದ್ಧ ರಿಯಲ್ ಎಸ್ಟೇಟ್ ಕಂಪನಿಯೊಂದು ದೂರು ದಾಖಲಿಸಿತ್ತು. 'ದಿ ಚಾರ್ ಕೋಲ್' ಪ್ರಾಜೆಕ್ಟ್ ಕಂಪನಿಯ ಮುಖ್ಯ ವಿನ್ಯಾಸಗಾರ್ತಿ ಹಾಗೂ ಒಡತಿ ಎಂದು ಹೇಳಿಕೊಂಡು ಡೀಲ್ ಪಡೆದುಕೊಂಡಿದ್ದ ಸುಸ್ಸಾನ್ ಯಾವುದೇ ಕಾರ್ಯ ಕೈಗೊಂಡಿಲ್ಲ ಎಂದು ದೂರಿನಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸಿದ್ಧಾಂತ್ ಶಿರೋಡ್ಕರ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಸ್ಸಾನ್, ನಾನು ಮಾಡಿಕೊಂಡ ಒಪ್ಪಂದದಂತೆ ಉತ್ತಮ ಗುಣಮಟ್ಟದ ಸೇವೆಯನ್ನೇ ನೀಡಿದ್ದೇನೆ. ಮೊದಲು ನನಗಾದ ಹಾನಿಯನ್ನು ತುಂಬಿಕೊಡಲಿ ಎಂದಿದ್ದಾರೆ. ಸುಸ್ಸಾನ್ ಅವರ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮುದಿತ್ ಗುಪ್ತಾ ಅವರ ಹೆಸರು ಕೂಡಾ ದೂರಿನಲ್ಲಿ ದಾಖಲಾಗಿದೆ.

ಉತ್ತರ ಗೋವಾದ ತಿಸ್ವಾಡಿಯಲ್ಲಿರುವ ನೈರಾ ಕಾಂಪ್ಲೆಕ್ಸ್​ನ ಆರ್ಕಿಟೆಕ್ಟ್ ಹಾಗೂ ಇಂಟೀರಿಯರ್ ಡಿಸೈನ್ ಮಾಡಲು ಸುಸ್ಸಾನ್ ಅವರ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ನಿಗದಿತ ಅವಧಿಯೊಳಗೆ ಕೆಲಸ ಮುಗಿಸಿರಲಿಲ್ಲ. ಹೀಗಾಗಿ ಎಮ್ಗಿ ಎಂಟರ್ ಪ್ರೈಸಸ್ ಸಂಸ್ಥೆ ದೂರು ನೀಡಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Hrithik Roshan, now his ex-wife Sussanne Khan is in the news for wrong reasons. Reportedly the Goa Police has registered a FIR against her.
Please Wait while comments are loading...