ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HP Result 2022; ಸಿಎಂ ರೇಸ್‌ನಲ್ಲಿದ್ದ ಕಾಂಗ್ರೆಸ್‌ ನಾಯಕಿಗೆ ಸೋಲು!

|
Google Oneindia Kannada News

ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಪಕ್ಷದ 6 ಬಾರಿಯ ಶಾಸಕಿ, ಸಿಎಂ ರೇಸ್‌ನಲ್ಲಿದ್ದ ನಾಯಕಿ ಸೋಲು ಕಂಡಿದ್ದಾರೆ.

ಗುರುವಾರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್‌ ನಂಬರ್ 35. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

HP Result 2022; 'ಮಂಡಿ'ಯಲ್ಲಿ ಮೋಡಿ ಮಾಡಲಿಲ್ಲ ಕಾಂಗ್ರೆಸ್! HP Result 2022; 'ಮಂಡಿ'ಯಲ್ಲಿ ಮೋಡಿ ಮಾಡಲಿಲ್ಲ ಕಾಂಗ್ರೆಸ್!

ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾದರೂ ಡಾಲ್ ಹೌಸೀ ಕ್ಷೇತ್ರದಲ್ಲಿ ಪಕ್ಷದ ನಾಯಕಿ, 6 ಬಾರಿ ಶಾಸಕಿಯಾಗಿದ್ದ ಆಶಾ ಕುಮಾರಿ ಸೋಲು ಕಂಡಿದ್ದಾರೆ. ಆಶಾ ರಾಣಿ ಎಂದೇ ಪ್ರಸಿದ್ಧಿ ಪಡೆದಿರುವ ನಾಯಕಿ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದರು.

HP Election Result 2022 ; ಕಾಂಗ್ರೆಸ್ 'ಕೈ' ಹಿಡಿದ 5 ಪ್ರಮುಖ ಅಂಶಗಳು HP Election Result 2022 ; ಕಾಂಗ್ರೆಸ್ 'ಕೈ' ಹಿಡಿದ 5 ಪ್ರಮುಖ ಅಂಶಗಳು

HP Assembly Election Results 2022 Six Time MLA Asha Kumari Defeated

ಬಿಜೆಪಿ ಅಭ್ಯರ್ಥಿ ಡಿ. ಎಸ್. ಠಾಕೂರ್ ಆಶಾ ಕುಮಾರಿ ಸೋಲಿಸಿದ್ದಾರೆ. ಸುಮಾರು 9,918 ಮತಗಳ ಅಂತರದಿಂದ ಡಿ. ಎಸ್. ಠಾಕೂರ್ ಜಯಗಳಿಸಿದ್ದಾರೆ. ಚಂಬಾ ಜಿಲ್ಲೆಯಲ್ಲಿ ಬರುವ ಡಾಲ್ ಹೌಸೀ ಕ್ಷೇತ್ರ ಮಾಜಿ ಸಿಎಂ ವೀರಭದ್ರ ಸಿಂಗ್ ಆಪ್ತ ಹರ್ಷ ಮಹಾಜನ್ ಬಿಜೆಪಿ ಸೇರಿದ ಬಳಿಕ ಗಮನಸೆಳೆದಿತ್ತು.

HP Election Result 2022; ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು? HP Election Result 2022; ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?

ಆಶಾ ಕುಮಾರಿ ಚಂಬಾದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು. ಮೊದಲ ಬಾರಿಗೆ 1985ರಲ್ಲಿ ಅವರು ಶಾಸಕಿಯಾಗಿ ಆಯ್ಕೆಯಾದರು. ಬಳಿಕ 1993, 1998, 2003, 2012 ಮತ್ತು 2017ರಲ್ಲಿ ಗೆಲುವು ಸಾಧಿಸಿದರು.

2012ರಲ್ಲಿ ಬಿಜೆಪಿಯ ಅಭ್ಯರ್ಥಿ ರೇಣು ಚಡ್ಡಾರನ್ನು 7,365 ಮತಗಳ ಅಂತರದಿಂದ ಆಶಾ ಕುಮಾರಿ ಸೋಲಿಸಿದ್ದರು. 2017ರ ಚುನಾವಣೆಯಲ್ಲಿ ಠಾಕೂರ್ ವಿರುದ್ಧ 556 ಮತಗಳ ಅಂತರದಿಂದ ಗೆದ್ದಿದ್ದರು.

ಪಂಜಾಬ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿರುವ ಆಶಾ ಕುಮಾರಿ ರಾಜ್ಯದ ಪ್ರಭಾವಿ ನಾಯಕಿ. ಛತ್ತೀಸ್‌ಗಢದ ಸಚಿವ ಟಿ. ಎಸ್. ಸಿಂಗ್ ಅವರ ಸಹೋದರಿ.

English summary
Himachal Pradesh assembly elections Results 2022; Six-time Congress MLA Asha Kumari defeated in elections aganist BJP candidate D. S. Thakur in Dalhousie assembly seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X