ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HP Result 2022; 'ಮಂಡಿ'ಯಲ್ಲಿ ಮೋಡಿ ಮಾಡಲಿಲ್ಲ ಕಾಂಗ್ರೆಸ್!

|
Google Oneindia Kannada News

ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಪ್ರಯತ್ನ ಆರಂಭಿಸಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ 'ಮಂಡಿ'ಯಲ್ಲಿ ಮೋಡಿ ಮಾಡುವಲ್ಲಿ ವಿಫಲವಾಗಿದೆ.

ಹಿಮಾಚಲ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಮಧ್ಯಾಹ್ನ 3.30ರ ಮಾಹಿತಿಯಂತೆ ಬಿಜೆಪಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ, 13 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

HP Election Result 2022 ; ಕಾಂಗ್ರೆಸ್ 'ಕೈ' ಹಿಡಿದ 5 ಪ್ರಮುಖ ಅಂಶಗಳು HP Election Result 2022 ; ಕಾಂಗ್ರೆಸ್ 'ಕೈ' ಹಿಡಿದ 5 ಪ್ರಮುಖ ಅಂಶಗಳು

ಕಾಂಗ್ರೆಸ್ ಪಕ್ಷ 16 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ. 23 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. 3 ಜನ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ಜನ ಬೆಂಬಲ ಸಿಕ್ಕಿದೆ.

HP Election Result 2022; ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು? HP Election Result 2022; ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?

HP Assembly Election Results 2022 BJP Ahead Of Congress In Mandi District

ಮಂಡಿಯಲ್ಲಿ ಮೋಡಿ ಮಾಡಲಿಲ್ಲ; ಹಿಮಾಚಲ ಪ್ರದೇಶದಲ್ಲಿ ಮಂಡಿ ಅತಿ ಮುಖ್ಯವಾದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ 10 ವಿಧಾನಸಭಾ ಕ್ಷೇತ್ರಗಳಿವೆ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೂ ಸಹ ಮಂಡಿಯಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ.

HP CM Jai Ram Thakur : ಮತ್ತೆ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪರಿಚಯHP CM Jai Ram Thakur : ಮತ್ತೆ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪರಿಚಯ

2017ರ ಚುನಾವಣೆಯಲ್ಲಿ ಮಂಡಿಯಲ್ಲಿ 10 ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ ಜಯಗಳಿಸಿತ್ತು. ಬಿಜೆಪಿ ನಾಯಕ, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಹ ಮಂಡಿ ಜಿಲ್ಲೆಯ ಸೆರಾಜ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ಅವರು 20,425 ಮತಗಳ ಅಂತರದಿಂದ ಗೆದ್ದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿಯೂ ಜೈರಾಮ್ ಠಾಕೂರ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಆಡಳಿತ ವಿರೋಧಿ ಅಲೆ ಸೇರಿದಂತೆ ಇತರ ಅಂಶಗಳು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿವೆ ಎಂದು ಅಂದಾಜಿಸಲಾಗುತ್ತಿದೆ.

HP Assembly Election Results 2022 BJP Ahead Of Congress In Mandi District

ಮಂಡಿ ಹಿಮಾಚಲ ಪ್ರದೇಶದ 2ನೇ ಅತಿ ದೊಡ್ಡ ಜಿಲ್ಲೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ 10 ಕ್ಷೇತ್ರಗಳ ಪೈಕಿ 3ರಲ್ಲಿ ಗೆಲುವು ಕಂಡಿದೆ. ಜೈರಾಮ್ ಠಾಕೂರ್‌, ರಾಕೇಶ್ ಜಾಮ್‌ವಾಲ್ ಈಗಾಗಲೇ ಜಯಗಳಿಸಿದ್ದಾರೆ. ಇನ್ನೂ 6 ಕ್ಷೇತ್ರಗಳಲ್ಲಿ ಪಕ್ಷ ಮುನ್ನಡೆಯಲ್ಲಿದೆ.

ಜೈರಾಮ್ ಠಾಕೂರ್‌ ಮಂಡಿ ಜಿಲ್ಲೆಗೆ ಘೋಷಣೆ ಮಾಡಿರುವ ಅಟಲ್ ವೈದ್ಯಕೀಯ ಮತ್ತು ಸಂಶೋಧನಾ ವಿಶ್ವವಿದ್ಯಾಲಯ, ಧಾರ್ಮಿಕ ಮತ್ತು ಪ್ರವಾಸಿ ತಾಣ ಶಿವಧಾಮ ಇನ್ನೂ ಪೂರ್ಣಗೊಂಡಿಲ್ಲ.

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. ರಸ್ತೆಗಳ ಸಂಪರ್ಕ ಸಹ ಸರಿಯಾಗಿಲ್ಲ. ನಾಲ್ಕು ಪಥದ ರಸ್ತೆ ನಿರ್ಮಾಣಕ್ಕಾಗಿ ಹಲವು ಜನರನ್ನು ಸ್ಥಳಾಂತರ ಮಾಡಲಾಗಿದೆ.

ಇಂತಹ ಹಲವಾರು ಸಮಸ್ಯೆಗಳ ನಡುವೆಯೂ ಜಿಲ್ಲೆಯ ಜನರು ಬಿಜೆಪಿ ಜೊತೆಗೆ ನಿಂತಿದ್ದಾರೆ. ಜೈರಾಮ್ ಠಾಕೂರ್‌ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ.

English summary
Himachal Pradesh assembly elections Results 2022; Mandi district has 10 assembly constituencies. In the key district BJP ahead of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X