'ಪತ್ನಿ ದಪ್ಪಗಿದ್ದರೆ ಪತಿಗೆ ಮಧುಮೇಹ ಸಾಧ್ಯತೆ ಹೆಚ್ಚು'

Posted By:
Subscribe to Oneindia Kannada

ಈ ಅಧ್ಯಯನದ ಬಗ್ಗೆ ಓದಿದರೆ ಆತಂಕ, ಆಶ್ಚರ್ಯ ಎರಡೂ ಒಟ್ಟೊಟ್ಟಿಗೆ ಆಗುವಂತಿದೆ. ಹೆಂಡತಿ ದಪ್ಪಗಿದ್ದರೆ ಆಕೆಯಿಂದ ಗಂಡನಿಗೆ ಟೈಪ್-2 ಮಾದರಿ ಮಧುಮೇಹ ಬರುವಂಥ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನವೊಂದರಿಂದ ಗೊತ್ತಾಗಿದೆ. ಡೆನ್ಮಾರ್ಕ್ ನ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಧ್ಯಯನವಿದು.

ಶೀಘ್ರವೇ ದಿನನಿತ್ಯ 'ಇನ್ಸುಲಿನ್' ಇಂಜೆಕ್ಷನ್ ಗೆ ಗುಡ್ ಬೈ

ಹಾಗಂತ ಗಂಡ ದಪ್ಪಗಿದ್ದರೆ ಹೆಂಡತಿಗೂ ಮಧುಮೇಹ ಬರುತ್ತಾ ಎಂದು ಪ್ರಶ್ನೆ ಕೇಳಿದರೆ, 'ನೋ ಚಾನ್ಸ್' ಎಂದಿದ್ದಾರೆ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರು. ಇದೇನು ವಿಚಿತ್ರವಾಗಿದೆ. ಹಾಗೆ ಆಗುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಬರುತ್ತದೆ ಅಂತಲೇ ಕಾರಣವನ್ನೂ ಬಯಲು ಮಾಡಿದ್ದಾರೆ.

How Your wife’s Weight Could Be Impacting Your Type 2 Diabetes Risk

ಪತಿಯ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಮೇಲೆ ಮಹಿಳೆಯರ ಪ್ರಭಾವ ಇರುತ್ತದೆ. ಆದರೆ ಮಹಿಳೆಯರ ಆರೋಗ್ಯ ವಿಚಾರಗಳ ಮೇಲೆ ಹೆಚ್ಚಿನ ಪ್ರಭಾವವೇನೂ ಬೀರುವುದಿಲ್ಲ. ಆದ್ದರಿಂದ ಮಹಿಳೆಯು ದಪ್ಪವಿದ್ದರೆ ಅವರ ಆಹಾರ-ದೈಹಿಕ ಚಟುವಟಿಕೆಗಳ ವಿಚಾರವು ಪತಿಯ ಮೇಲೆ ಆಗುತ್ತದೆ ಎಂಬುದು ಅಧ್ಯಯನವು ಬಯಲು ಮಾಡಿದ ಅಂಶ.

ಪ್ರಾಣ ಕಳೆಯುವ ಕಾಯಿಲೆ ಪಟ್ಟಿಯಲ್ಲಿ ಮಧುಮೇಹಕ್ಕೆ ಏಳನೇ ಸ್ಥಾನ!

ಇನ್ನೊಂದು ವಿಚಾರ ಏನೆಂದರೆ ಗಂಡು-ಹೆಣ್ಣು ಎಂಬ ಲಿಂಗಾಧಾರಿತವಾಗಿ ಮಧುಮೇಹದ ಬಗ್ಗೆ ಅಧ್ಯಯನ ಮಾಡಿರುವುದು ಇದೇ ಮೊದಲ ಬಾರಿಗೆ ಎಂದು ಈ ಅಧ್ಯಯನ ತಂಡದ ಮುಖ್ಯಸ್ಥರು ಹೇಳಿದ್ದಾರೆ. ಈಚೆಗೆ ಪೋರ್ಚುಗಲ್ ನಲ್ಲಿ ನಡೆದ ಮಧುಮೇಹಕ್ಕೆ ಸಬಂಧಿಸಿದ ಸಭೆಯಲ್ಲಿ ಈ ವರದಿ ಮಂಡನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you’re a man married to a woman who’s obese, it may “substantially increase” your risk of developing Type 2 diabetes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ