ಆಸಿಡ್ ದಾಳಿಗೆ ಸಿಕ್ಕವರ ಯಶೋಗಾಥೆ "ಶೀರೋಸ್"

Subscribe to Oneindia Kannada

ಬೆಂಗಳೂರು, ಮಾರ್ಚ್ ,08: ಅವಳ ಮುಖ ಚಂದ್ರನಂತಿತ್ತು. ಅದ್ಯಾವುದೋ ದುರುಳನ ಅಟ್ಟಹಾಸಕ್ಕೆ ಸಿಕ್ಕು ಆಕೆ ಜೀವನಲ್ಲಿ ಮತ್ತೆಂದು ಮೇಲೇಳಲಾರದ ಹಿಂಸೆಗೆ ಸಿಕ್ಕಳು..ಆಕೆಯ ಮುಖಕ್ಕೆ ಎರಚಿದ್ದು ಆಸಿಡ್....!

ಹೌದು ಇಂಥ ಅದೆಷ್ಟೋ ದುರಂತಗಳು ಮಹಿಳೆಯರ ಜೀವನದಲ್ಲಿ ಕ್ಷುಲ್ಲಕ ಕಾರಣಕ್ಕೆ ಘಟಿಸಿಹೋಗುತ್ತವೆ. ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಕೇಂದ್ರವಾದ ಶೀರೋಸ್ ತನ್ನ ಘಟಕವನ್ನು ಲಕ್ನೋದಲ್ಲಿ ತೆರೆಯುತ್ತಿದೆ. ಆಸಿಡ್ ದಾಳಿಗೆ ತುತ್ತಾದ ಮಹಿಳೆಯರು ನಡೆಸುತ್ತಿರುವ ಶೀರೋಸ್ ಹ್ಯಾಂಗ್ ಔಟ್ ಕೆಫೆ ಉತ್ತರ ಪ್ರದೇಶದ ಲಕ್ನೋ ದಲ್ಲಿ ತನ್ನ ಎರಡನೇ ಶಾಖೆ ತೆರೆಯಲಿದೆ.[ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು]

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:

ಆಸಿಡ್ ದಾಳಿಗೆ ತುತ್ತಾಗಿದ್ದ ಐವರು ಮಹಿಳೆಯರು ಜೀವನದ ಕಷ್ಟ-ನಷ್ಟಗಳನ್ನು ಮೆಟ್ಟಿ ನಿಂತ ಕತೆಯನ್ನು ಇದು ಹೇಳುತ್ತದೆ. ಶೀರೋಸ್ ಹ್ಯಾಂಗ್ ಔಟ್ ಕೆಫೆಯ ಮೊದಲ ಘಟಕವನ್ನು ಆಗ್ರಾದಲ್ಲಿ ಆರಂಭ ಮಾಡಿದ್ದು 2014 ರಲ್ಲಿ...ಸಾಹಸ ಮತ್ತು ಸಾಧನೆಯ ಕತೆ ಮುಂದಕ್ಕೆ ಓದಿ...ಮಹಿಳಾ ದಿನಾಚರಣೆ ದಿನ ಮಹಿಳೆಯರಿಗೊಂದು ಸಲಾಂ...

ಇಂದು ಉದ್ಘಾಟನೆ

ಇಂದು ಉದ್ಘಾಟನೆ

ಶಾಖೆಯನ್ನು ಮಾರ್ಚ್ 8 ಸಂಜೆ 5 ಗಂಟೆಗೆ ಉದ್ಘಾಟನೆ ಮಾಡಲಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಆಸಿಡ್ ದಾಳಿಗೆ ತುತ್ತಾಗಿ ಹಿಂಸೆ ಅನುಭವಿಸಿ ಪುಟಿದುನಿಂತ ಮಹಿಳೆಯರ ಕುರಿತಾದ ಕ್ಯಾಲೆಂಡರ್ ವೊಂದನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.

ಶಾಖೆ ಎಲ್ಲಿ ಆರಂಭ

ಶಾಖೆ ಎಲ್ಲಿ ಆರಂಭ

ಲಕ್ನೋ ಗೊಮ್ಟಿನಗರ ಮೆಟ್ರೋ ಕಚೇರಿಯ ಸಮೀಪ ಶಾಖೆ ಆರಂಭವಾಗಲಿದೆ. ಉತ್ತರ ಪ್ರದೇಶ ಸರ್ಕಾರದ ನೆರವಿನಲ್ಲಿ ಶಾಖೆ ಶುರುವಾಗುತ್ತಿದೆ.

ನಿಜ ಸಾಂತ್ವನ ಕೇಂದ್ರ

ನಿಜ ಸಾಂತ್ವನ ಕೇಂದ್ರ

ನಿಮಗೆ ಬಗೆ ಬಗೆಯ ಆಹಾರಗಳನ್ನು ನೀಡುವುದು ಕೆಫೆಯ ಒಂದು ಮುಖ. ದುರಂತಕ್ಕೆ ತುತ್ತಾದ ಮಹಿಳೆಯರಿಗೆ ಇದೊಂದು ಸಾಂತ್ವನ ಕೇಂದ್ರವಾಗಿಯೂ ಕೆಲಸ ಮಾಡುತ್ತಿದೆ. ಸಮಾಜ ಮತ್ತು ಸರ್ಕಾರದ ಸಹಾಯ ನೇರವಾಗಿ ದೊರೆಯಲಿದೆ ಎಂದು ಈ ಬಗೆಯ ಆಲೋಚನೆಯನ್ನು ಮೊದಲು ಮಾಡಿದ ಸಾಮಾಜಿಕ ಚಿಂತಕಿ ಲಕ್ಷ್ಮೀ ಅಗರ್ ವಾಲ್ ಒನ್ ಇಂಡಿಯಾಕ್ಕೆ ತಿಳಿಸಿದರು.

ಜಾಗೃತಿ ಜಾಥಾ

ಜಾಗೃತಿ ಜಾಥಾ

ಎನ್ ಜಿಒ ಚನ್ವ ಫೌಂಡೇಶನ್ ಮತ್ತು ಸ್ಟಾಪ್ ಆಸಿಟ್ ಅಟಾಕ್ಸ್ ನೆರವಿನಲ್ಲಿ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶ 2014 ರಲ್ಲಿ 186 ಆಸಿಡ್ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಎಂದು ಲಕ್ಷ್ಮೀ ತಿಳಿಸಿದರು. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲೂ ಅಭಿಯಾನ ನಡೆಯುತ್ತಿದೆ ಎಂದರು.

ದಾಳಿಗೆ ತುತ್ತಾಗುವವರು ಮಹಿಳೆಯರೆ

ದಾಳಿಗೆ ತುತ್ತಾಗುವವರು ಮಹಿಳೆಯರೆ

ಹೆಚ್ಚಿನ ಸಂದರ್ಭ ಆಸಿಡ್ ದಾಳಿಗೆ ತುತ್ತಾಗುವವರು ಮಹಿಳೆಯರೇ. ಆಸಿಡ್ ದಾಳಿಗೆ ತುತ್ತಾದವರಿಗೆ ಸಾಂತ್ವನ ಮತ್ತು ಇನ್ನು ಮುಂದೆ ಅದು ನಡೆಯದಂತೆ ನೋಡಿಕೊಳ್ಳುವುದು ನಮ್ಮ ಕೆಫೆಯ ಉದ್ದೇಶ.

 ಶೀ-ಹೀರೋಸ್

ಶೀ-ಹೀರೋಸ್

ಇಂಥ ಸಂದರ್ಭದಲ್ಲಿ ಮಹಿಳೆಯರನ್ನು ನಾಯಕರು ಎಂದು ಕರೆಯುವುದೇ ಉತ್ತಮ. ನಿಜವಾದ ಹೋರಾಟಗಾರರಿಗೆ ಸಂಘಟನೆ ಇಟ್ಟುಕೊಂಡ ಹೆಸರೆ ಶೀ-ಹೀರೋಸ್.

 ಅತಿಥಿ ಸತ್ಕಾರ

ಅತಿಥಿ ಸತ್ಕಾರ

ಆಗಮಿಸುವ ಎಲ್ಲರಿಗೆ ಸತ್ಕಾರ ಮಾಡುತ್ತೇವೆ. ಅದು ನಮ್ಮ ಪರಂಪರೆ. ಊಟ ಮತ್ತು ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಲಕ್ಷ್ಮೀ ಹೇಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To mark the occasion of the International Women's Day, acid attack survivors are all set to open the second branch of Sheroes Hangout café in Lucknow on March 8 (Tuesday). The eatery will be run by five acid attack survivors. The café will also provide legal, medical and employment assistance to survivors of acid attack in Uttar Pradesh.
Please Wait while comments are loading...