ಉಗ್ರಗಾಮಿಗಳ ಸಂಬಳ, ಪೆನ್ಷನ್ ಇತರ ಬೆನಿಫಿಟ್ ಗಳು..

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ಒಬ್ಬ ಉಗ್ರನ ಸಂಪಾದನೆ ಎಷ್ಟಿರಬಹುದು? ಕಳೆದ ಕೆಲ ತಿಂಗಳಿಂದ ಜಮ್ಮು -ಕಾಶ್ಮೀರದ ಕಣಿವೆಯಲ್ಲಿ ಉಗ್ರರ ಉಪಟಳ ವಿಪರೀತ ಹೆಚ್ಚಾಯಿತು. ಜುಲೈ 8ರಂದು ಬುಹ್ರಾನ್ ವನಿ ಎನ್ ಕೌಂಟರ್ ಆದ ನಂತರ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಇ ತೋಯ್ಬಾ ಉಗ್ರರಿಂದ ದಾಳಿಗಳಾಯಿತು.

ಈ ಉಗ್ರರಿಗೆ ನೀಡುವ ಹಣದಲ್ಲೂ ಎರಡು ಮಾನದಂಡ. ಒಂದು ವಿದೇಶಿ ಉಗ್ರರು ಮತ್ತು ಸ್ಥಳೀಯ ಉಗ್ರರು ಎಂಬ ವರ್ಗೀಕರಣ ಮಾಡಲಾಗುತ್ತದೆ. ವಿದೇಶಿ ಉಗ್ರರು ಅಂದರೆ ಪಾಕಿಸ್ತಾನದಿಂದ ಬಂದವರು ಮತ್ತು ಇಲ್ಲಿ ದಾಳಿ ನಡೆಸುವವರು. ಅವರಿಗೆ ಸ್ಥಳೀಯ ಉಗ್ರರಿಗಿಂತ ಹೆಚ್ಚಿನ ಹಣ ನೀಡಲಾಗುತ್ತದೆ.['ನೋಟು ನಿಷೇಧದಿಂದ ಉಗ್ರರಿಗೇನೂ ಹಣಕಾಸು ತೊಂದರೆ ಆಗಿಲ್ಲ']

ಉಗ್ರರಿಗೆ ಎಷ್ಟು ಹಣ ಸಂದಾಯವಾಗುತ್ತದೆ ಎಂಬ ಬಗ್ಗೆ ಸೇನಾ ಅಧಿಕಾರಿಗಳು, ಗುಪ್ತಚರ ದಳದವರು ಸೇರಿ ಒಂದು ಅಂದಾಜು ಪಟ್ಟಿ ತಯಾರಿಸಿದ್ದಾರೆ. ಈ ಸಂಖ್ಯೆಯೂ ಸುಮ್ಮನೆ ಊಹೆಯಲ್ಲ. ವಿದೇಶಿ ಹಾಗೂ ಸ್ಥಳೀಯ ಉಗ್ರರನ್ನು ವಿಚಾರಣೆ ನಡೆಸಿದ ನಂತರ ಕಲೆ ಹಾಕಿದ ಮಾಹಿತಿ ಅನ್ವಯ ಸಿಕ್ಕಿರುವ ವಿವರಗಳಿವು.

How much a terrorist earned? Here is the breakdown

ನೇಮಕಾತಿ ಸಂದರ್ಭದಲ್ಲಿ
ವಿದೇಶಿ ಉಗ್ರಗಾಮಿಗಳಿಗೆ 50,000
ಸ್ಥಳೀಯ ಉಗ್ರರಿಗೆ 10ರಿಂದ 25 ಸಾವಿರ

ತಿಂಗಳ ಸಂಬಳ
ವಿದೇಶಿ ಉಗ್ರಗಾಮಿಗಳಿಗೆ 15,000
ಸ್ಥಳೀಯ ಉಗ್ರರಿಗೆ 10,000

ನಿವೃತ್ತರಾಗುವ ವೇಳೆ ನೀಡುವ ಒಂದು ಸಲದ ಮೊತ್ತ
ವಿದೇಶಿ ಉಗ್ರಗಾಮಿಗಳಿಗೆ 2,00,000
ಸ್ಥಳೀಯ ಉಗ್ರರಿಗೆ 2,00,000

ಉತ್ತಮ ಕಾರ್ಯಕ್ಷಮತೆ ತೋರಿಸಿದರೆ
ವಿದೇಶಿ ಉಗ್ರಗಾಮಿಗಳಿಗೆ 10,00,000
ಸ್ಥಳೀಯ ಉಗ್ರರಿಗೆ 10,00,000

ತಂಡದ ಮುಖ್ಯಸ್ಥ ಅಥವಾ ಕಮ್ಯಾಂಡರ್ ಸಂಬಳ
ವಿದೇಶಿ ಉಗ್ರಗಾಮಿಗಳಿಗೆ 50,000
ಸ್ಥಳೀಯ ಉಗ್ರರಿಗೆ 50,000

ಮೃತ ಉಗ್ರರ ಕುಟುಂಬಕ್ಕೆ ನೀಡುವ ಪರಿಹಾರ
ವಿದೇಶಿ ಉಗ್ರಗಾಮಿಗಳಿಗೆ 50,000 ಒಂದು ಸಲದ ಮೊತ್ತ ಮತ್ತು ತಿಂಗಳಿಗೆ 5 ಸಾವಿರ
ಸ್ಥಳೀಯ ಉಗ್ರರಿಗೆ 25,000 ಒಂದು ಸಲದ ಮೊತ್ತ ಮತ್ತು ತಿಂಗಳಿಗೆ 3 ಸಾವಿರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ever wondered how much a terrorist earned? The payments are divided into two scales- foreign and local militants. The foreign militants are those who come in from Pakistan and carry out the attack and they are often paid more than the locals.
Please Wait while comments are loading...