ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ರೋಗಿಗಳಿಗೆ ಆಮ್ಲಜನಕವೇ ಸಿಗುತ್ತಿಲ್ಲವೇ?

|
Google Oneindia Kannada News

ನವದೆಹಲಿ, ಮೇ 23: ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ತೀರಾ ಅಗತ್ಯವಾಗಿರುವ ಆಮ್ಲಜನಕ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವೈದ್ಯಕೀಯ ಆಮ್ಲಜನಕ ಬಿಕ್ಕಟ್ಟು ನಿವಾರಣೆಗಾಗಿ ದ್ರವರೂಪದ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ.

ಕಳೆದ 72 ಗಂಟೆಗಳಲ್ಲಿ ದ್ರವ ಆಮ್ಲಜನಕ ಸರಬರಾಜು ಮಾಡುತ್ತಿರುವುದರಿಂದ ವೈದ್ಯಕೀಯ ಆಮ್ಲಜನಕ ಕೊರತೆ ನಿವಾರಣೆ ಲಕ್ಷಣಗಳು ಗೋಚರಿಸುತ್ತಿವೆ. ಅಸಲಿಗೆ ಪ್ರತಿನಿತ್ಯ ಅಗತ್ಯವಿರುವ ಆಮ್ಲಜನಕದ ಪ್ರಮಾಣವು 8,900 ಮೆಟ್ರಿಕ್ ಟನ್ ನಿಂದ 8,000 ಮೆಟ್ರಿಕ್ ಟನ್ ಗೆ ಇಳಿಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್ 19 ಪಾಸಿಟಿವಿಟಿ ದರ ಕುಸಿತ, ಎಷ್ಟು?ದೇಶದಲ್ಲಿ ಕೋವಿಡ್ 19 ಪಾಸಿಟಿವಿಟಿ ದರ ಕುಸಿತ, ಎಷ್ಟು?

ಕಳೆದ ವರ್ಷ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆಯ ಸಂದರ್ಭದಲ್ಲಿ ಸರಬರಾಜು ಮಾಡಿರುವ ಆಮ್ಲಜನಕ ಪ್ರಮಾಣಕ್ಕಿಂತ ಈ ಬಾರಿ ಅತಿಹೆಚ್ಚು ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಸನ್ನಿವೇಶಕ್ಕೆ ಸರಬರಾಜು ಆಗುತ್ತಿರುವ ವೈದ್ಯಕೀಯ ಆಮ್ಲಜನಕವೂ ಸಾಕಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ದೇಶದಲ್ಲಿ ಆಮ್ಲಜನಕ ಸರಬರಾಜು ಪ್ರಮಾಣ ಇಳಿಕೆ

ದೇಶದಲ್ಲಿ ಆಮ್ಲಜನಕ ಸರಬರಾಜು ಪ್ರಮಾಣ ಇಳಿಕೆ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿತ್ತು. ಕಳೆದ 10 ದಿನಗಳಲ್ಲಿ ಇದೇ ಆಮ್ಲಜನಕ ಪೂರೈಕೆ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿದೆ. ಮೇ 9ರಂದು 8,944 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಗಿದ್ದು, ಮೇ 18 ಅಥವಾ 19ರ ವೇಳೆಯಲ್ಲಿ 8,100 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಲಾಗಿದೆ. ಅದೇ ಮೇ 20ರಂದು 8,334 ಮೆಟ್ರಿಕ್ ಟನ್ ಆಮ್ಲಜನಕವನ್ನು ಸರಬರಾಜು ನೀಡಲಾಗಿದೆ.

ಕೊರೊನಾವೈರಸ್ ಪ್ರಕರಣ ಮತ್ತು ಆಮ್ಲಜನಕ ಪ್ರಮಾಣ

ಕೊರೊನಾವೈರಸ್ ಪ್ರಕರಣ ಮತ್ತು ಆಮ್ಲಜನಕ ಪ್ರಮಾಣ

ಭಾರತದಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕಗಳ ಪೂರೈಕೆ ಪ್ರಮಾಣವೂ ಹೆಚ್ಚಾಗಿತ್ತು. ಕೊವಿಡ್-19 ಪ್ರಕರಣ ಇಳಿಮುಖ ಆಗುತ್ತಿದ್ದಂತೆ ಆಮ್ಲಜನಕ ಸರಬರಾಜು ಪ್ರಮಾಣದಲ್ಲೂ ವ್ಯತ್ಯಾಸ ಕಂಡು ಬಂದಿದೆ. ಈ ಕುರಿತು ಪಟ್ಟಿಯನ್ನು ಗಮನಿಸಿ.

ದಿನಾಂಕ ಕೊವಿಡ್-19 ಪ್ರಕರಣ ಆಮ್ಲಜನಕ ಪ್ರಮಾಣ ವಿಶೇಷತೆ
ಮೇ 1 3,92,576 7,603 ಮೆಟ್ರಿಕ್ ಟನ್ ತಿಂಗಳಿನಲ್ಲಿ ಅತಿ ಕಡಿಮೆ ಆಮ್ಲಜನಕ ಪೂರೈಕೆ
ಮೇ 6 4,14,280 8920 ಮೆಟ್ರಿಕ್ ಟನ್ ತಿಂಗಳಿನಲ್ಲಿ ಅತಿಹೆಚ್ಚು ಕೊರೊನಾವೈರಸ್ ಪ್ರಕರಣ
ಮೇ 9 3,66,455 8944 ಮೆಟ್ರಿಕ್ ಟನ್ ಒಂದು ತಿಂಗಳಿನಲ್ಲಿ ಅತಿಹೆಚ್ಚು ಆಮ್ಲಜನಕ ಸರಬರಾಜು
ಮೇ 20 2,59,242 8,344 ಮೆಟ್ರಿಕ್ ಟನ್ ಮೇ ತಿಂಗಳಿನಲ್ಲಿ ಅತಿ ಕಡಿಮೆ ಕೊವಿಡ್-19 ಪ್ರಕರಣ

ಕೊರೊನಾ ಮೊದಲ ಅಲೆ ಮತ್ತು ಆಮ್ಲಜನಕ ಬಳಕೆ

ಕೊರೊನಾ ಮೊದಲ ಅಲೆ ಮತ್ತು ಆಮ್ಲಜನಕ ಬಳಕೆ

ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆ ಸಂದರ್ಭದಲ್ಲಿ ಸಪ್ಟೆಂಬರ್ 29, 2020ರ ಅವಧಿಯಲ್ಲಿ ದಿನಕ್ಕೆ ಗರಿಷ್ಠ 3,095 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಸರಬರಾಜು ಮಾಡಲಾಗುತ್ತಿತ್ತು. 2021ರ ಮಾರ್ಚ್ 31ರ ಸಂದರ್ಭದಲ್ಲಿ ಒಂದು ದಿನಕ್ಕೆ ಅತಿಹೆಚ್ಚು ಎಂದರೆ 1,559 ಮೆಟ್ರಿಕ್ ಟನ್ ಆಮ್ಲಜನಕ ಬಳಕೆ ಮಾಡಲಾಗಿದೆ. ಏಪ್ರಿಲ್ 30 ರಿಂದ ಈಚೆಗೆ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗಿದ್ದು, 8,000 ಮೆಡಿಕಲ್ ಆಕ್ಸಿಜನ್ ಬೇಕಾಗಿದೆ. ಮೇ ಮೊದಲ ವಾರದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಹೊಸ ದಾಖಲೆಯಾಯಿತು. ಮೇ 6ರ ಒಂದೇ ದಿನ 4,14,280 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.

50,000 ಕೊರೊನಾವೈರಸ್ ರೋಗಿಗಳಿಗೆ ಐಸಿಯು ಚಿಕಿತ್ಸೆ

50,000 ಕೊರೊನಾವೈರಸ್ ರೋಗಿಗಳಿಗೆ ಐಸಿಯು ಚಿಕಿತ್ಸೆ

ಕೇಂದ್ರ ಸರ್ಕಾರ ನೀಡಿರುವ ಮೇ 8ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 50,000 ಕೊರೊನಾವೈರಸ್ ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 14,500 ರೋಗಿಗಳಿಗೆ ವೆಂಟಿಲೇಟರ್ ಅಡಿ ಚಿಕಿತ್ಸೆ ನೀಡಲಾಗುತ್ತಿದ್ದು, 1.37 ಕೊವಿಡ್-19 ಸೋಂಕಿತರಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಅಂಕಿ-ಅಂಶಗಳು ಮೊದಲ ಅಲೆಯ ಸಪ್ಟೆಂಬರ್ ಅವಧಿಯಲ್ಲೇ ಅತಿಹೆಚ್ಚು ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ ಅಂಕಿ-ಅಂಶಗಳನ್ನು ಮೀರಿಸುತ್ತಿವೆ. ಸಪ್ಟೆಂಬರ್ ತಿಂಗಳಿನಲ್ಲಿ 23,000 ರೋಗಿಗಳಿಗೆ ಐಸಿಯು, 4,000 ರೋಗಿಗಳಿಗೆ ವೆಂಟಿಲೇಟರ್ ಹಾಗೂ 40,000 ಸೋಂಕಿತರಿಗೆ ಆಮ್ಲಜನಕ ವ್ಯವಸ್ಥೆಯಡಿ ಚಿಕಿತ್ಸೆ ನೀಡಲಾಗಿತ್ತು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತರ ಅಂಕಿ-ಅಂಶಗಳು

ದೇಶದಲ್ಲಿ ಕೊವಿಡ್-19 ಸೋಂಕಿತರ ಅಂಕಿ-ಅಂಶಗಳು

ಕಳೆದ 24 ಗಂಟೆಗಳಲ್ಲಿ 2,40,842 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,55,102 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,741 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 2,65,30,132 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ2,34,25,467 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,99,266 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 28,05,399 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
India: How Medical Oxygen Crisis Is Waning Amid Demand Across Nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X