ಹೆಂಡತಿ ನೋಡಲು ಬಂದು ಬಲಿಯಾದ ಉಗ್ರ ಅಬು ದುಜಾನ!

Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 1: ಲಷ್ಕರ್ ಇ ತಯ್ಯಬಾದ ಚೀಫ್ ಕಮಾಂಡರ್ ಅಬು ದುಜಾನ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ವಿಧ್ವಂಸಕ ಕೃತ್ಯಗಳನ್ನು ಮಾಡುವುದರಲ್ಲಿ ದುಜಾನ ಎತ್ತಿದ ಕೈ. ಇಂಥಹ ಕ್ರೂರ ಕಿರಾತಕ ಉಗ್ರನನ್ನು ಸೇನೆ ತನ್ನ ಬಲೆಯೊಳಕ್ಕೆ ಕೆಡವಿದ್ದೇ ಒಂದು ಕುತೂಹಲಕಾರಿ ಕತೆ.

ಕೊನೆಗೂ ಕಾಶ್ಮೀರದ ವಿಧ್ವಂಸಕ ಉಗ್ರ ಅಬು ದುಜಾನ ಹತ್ಯೆ

ವರದಿಗಳ ಪ್ರಕಾರ ದುಜಾನ ತನ್ನ ಹೆಂಡತಿಯನ್ನು ಭೇಟಿಯಾಗಲು ಪುಲ್ವಾಮದ ಮನೆಯೊಂದಕ್ಕೆ ಬಂದಿದ್ದ. ಹಾಗೆ ನೋಡಿದರೆ ಆತ ತನ್ನ ಹೆಂಡತಿಯನ್ನು ಭೇಟಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಆಗಾಗ ಆತ ತನ್ನ ಹೆಂಡತಿಯನ್ನು ಸಂಧಿಸಲು ಬರುತ್ತಿದ್ದ ವಿಷಯ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗೊತ್ತಿತ್ತು.

 Abu Dujana

ಈ ಹಿಂದೆ ಆತ ಎರಡು ಬಾರಿ ಈ ರೀತಿ ಬಂದಾಗ ಆತನ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆತ ಬರುವ ಸಮಯ, ಮೊದಲಿಗೆ ಬಂದು ಇರುತ್ತಿದ್ದ ಜಾಗ, ಅಲ್ಲಿನ ವಾತವರಣ ಈ ಎಲ್ಲದರ ಮೇಲೆಯೂ ನಿಗಾ ಇಡಲಾಗಿತ್ತು.

ಇದೇ ಸಂದರ್ಭದಲ್ಲಿ ಸೋಮವಾರ ದುಜಾನ ಹಕ್ರಿಪೋರಾದ ವಸತಿ ಸಂಕೀರ್ಣಕ್ಕೆ ಬಂದಿದ್ದ. ಈ ವಾಸನೆ ಪೊಲೀಸರ ಮೂಗಿಗಿಗೆ ಬಡಿದಿತ್ತು. ಮನೆಯನ್ನು ಸುತ್ತುವರಿದ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮರೆಯಲ್ಲಿ ನಿಂತು ಸುಮಾರು ಎರಡು ಗಂಟೆಗಳ ಕಾಲ ಎಲ್ಲವನ್ನೂ ಗಮನಿಸುತ್ತಾ ಹೆಚ್ಚಿನ ಪಡೆಗಳಿಗಾಗಿ ಕಾಯುತ್ತಾ ನಿಂತಿದ್ದರು.

ಯಾವಾಗ ಸ್ಥಳಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳ ಪ್ರವೇಶವಾಯಿತೋ ಇಡೀ ಪ್ರದೇಶವನ್ನು ಸುತ್ತುವರಿಯಲಾಯಿತು. ಇವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ, 55 ರಾಷ್ಟ್ರೀಯ ರೈಫಲ್ಸ್ ನ ಪಡೆಗಳು ಸಾಥ್ ನೀಡಿದವು. ಎಲ್ಲಾ ಆಗಗುವಷ್ಟರಲ್ಲಿ ಮುಂಜಾನೆ ಗಂಟೆ 4.30.

 Abu Dujana

ಅಷ್ಟೊತ್ತಿಗೆ ಗುಪ್ತಚರ ಇಲಾಖೆಯಿಂದ ಸ್ಥಳದಲ್ಲಿ ದುಜಾನ ಮತ್ತು ಆತನ ಸಹಚರರು ಇರುವ ಮಾಹಿತಿ ಬಂದು ಖಚಿತಪಟ್ಟಿತು. ಅಲ್ಲಿಂದ ನೇರ ಕಾರ್ಯಾಚರಣೆ ಆರಂಭವಾಯಿತು.

ಉಗ್ರರು ವಸತಿ ಸಂಕೀರ್ಣವೊಂದರಲ್ಲಿ ಅಡಗಿ ಕುಳಿತಿದ್ದರಿಂದ ಭದ್ರತಾ ಪಡೆಗಳು ಒಳಗೆ ನುಗ್ಗಲೇ ಬೇಕಾಗಿತ್ತು. ಬೇರೆ ಆಯ್ಕೆ ಇರಲಿಲ್ಲ. ಕೊನೆಗೆ ಒಳ ನುಗ್ಗಿ ಉಗ್ರರನ್ನು ಸೈನಿಕರು ಹೊಡೆದು ಹಾಕಿದರು.

RSS Starts One Nation One Campaign | Oneindia Kannada

ಅಂತಿಮವಾಗಿ ಅಬು ದುಜಾನ ಮತ್ತು ಆತನ ಸಹಚರರು ಸಾವನ್ನಪ್ಪಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್.ಪಿ ವಾಯಿದ್ ಖಚಿತಪಡಿಸಿದರು. ಹೀಗೆ ಸ್ಥುರದ್ರೂಪಿ ತರುಣ, ಇನ್ನೂ 30ರ ಹರೆಯ ದಾಟದ ಉಗ್ರ ಅಬು ದುಜಾನಾ ಸಾವನ್ನಪ್ಪಿದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The dreaded militant Abu Dujana has been killed by security forces in the Valley. The Lashkar-e-Tayiba militant, Dujana who had several miraculous escapes in the past year has finally been killed when he came to meet his wife.
Please Wait while comments are loading...