ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸಹಿತ ಸುದ್ದಿ: ಭಾರತದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

|
Google Oneindia Kannada News

ನವದೆಹಲಿ, ಜೂನ್ 20: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿ "ಯೋಗ ಫಾರ್ ವೆಲ್ ನೆಸ್" ಎಂಬ ಉದ್ದೇಶವನ್ನು ಇಟ್ಟುಕೊಂಡು ಯೋಗ ಕಾರ್ಯಕ್ರಮವನ್ನು ಆಯೋಜಿಲಾಗುತ್ತಿದೆ.

ಕಳೆದ 2014ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21ರ ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಪ್ರಮುಖ ಅಸ್ತ್ರವಾಗಲಿದೆ ಎಂದು ಪ್ರತಿಪಾದಿಸಲಾಯಿತು. ಅಂದು ಭಾರತದ ಪ್ರಸ್ತಾಪಕ್ಕೆ ಜಗತ್ತಿನ 177 ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು. 2014ರಿಂದ ಈಚೆಗೆ ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ಕೊರೊನಾವೈರಸ್ ನಡುವೆ ಮಾನಸಿಕ ಆರೋಗ್ಯ ವೃದ್ಧಿಗೆ ಯೋಗವೇ ಮದ್ದು: ಮೋದಿಕೊರೊನಾವೈರಸ್ ನಡುವೆ ಮಾನಸಿಕ ಆರೋಗ್ಯ ವೃದ್ಧಿಗೆ ಯೋಗವೇ ಮದ್ದು: ಮೋದಿ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆಯೂ ಜನರು ಈ ಹಿಂದಿನ ಉತ್ಸಾಹದಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು. ದೇಶದ ಯಾವ ಭಾಗಗಳಲ್ಲಿ ನಾಯಕರು ಹಾಗೂ ಸಾರ್ವಜನಿಕರು ನಡೆಸಿದ ಯೋಗ ದಿನದ ಆಚರಣೆ ಹೇಗಿತ್ತು ಎಂಬುದರ ಕುರಿತು ಚಿತ್ರ ಸಹಿತ ಮಾಹಿತಿ ಇಲ್ಲಿದೆ ಓದಿ.

ಅಂತಾರಾಷ್ಟ್ರೀಯ ಯೋಗ ದಿನ ಪ್ರಧಾನಿ ಭಾಷಣ

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ದೇಶದಲ್ಲಿ ಇಂದು ದೈಹಿಕ ಆರೋಗ್ಯದ ಬಗ್ಗೆ ಮಾತ್ರ ಚರ್ಚೆ ಆಗುತ್ತಿಲ್ಲ. ಇದರ ಜೊತೆಗ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಂತದಲ್ಲಿ ನಮ್ಮ ಆರೋಗ್ಯ, ಉಸಿರಾಟ ಸಂಬಂಧಿತ ಸಮಸ್ಯೆ ಹಾಗೂ ಎಲ್ಲ ರೀತಿ ಯಶಸ್ಸಿಗೆ ಯೋಗವೇ ಮೂಲವಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯೋಗ ದಿನ ಆಚರಿಸಿದ ರಾಷ್ಟ್ರಪತಿ ಕೋವಿಂದ್

ಯೋಗ ದಿನ ಆಚರಿಸಿದ ರಾಷ್ಟ್ರಪತಿ ಕೋವಿಂದ್

7ನೇ ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯೋಗಾಭ್ಯಾಸ ಮಾಡಿದರು.

ಯೋಗ ದಿನಾಚರಣೆಯಲ್ಲಿ ಬಾಬಾ ರಾಮ್ ದೇವ್

ಯೋಗ ದಿನಾಚರಣೆಯಲ್ಲಿ ಬಾಬಾ ರಾಮ್ ದೇವ್

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಉತ್ತರಾಖಂಡದ ಹರಿದ್ವಾರದಲ್ಲಿರುವ ನಿರಮಯಂ ಯೋಗ್ರಾಮ್ ಗ್ರಾಮದಲ್ಲಿ ಯೋಗ ಗುರು ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಜೊತೆ ಯೋಗ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಕ್ಕಳು ಮತ್ತು ಇತರ ಅನೇಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲಡಾಖ್ ಗಡಿಯಲ್ಲಿ ಐಟಿಬಿಪಿ ಯೋಗ ದಿನ

7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಬಳಿ ಯೋಗ ದಿನವನ್ನು ಆಚರಿಸಿದರು.

ಗಲ್ವಾನ್ ಕಣಿವೆಯಲ್ಲಿ ಯೋಗಾಭ್ಯಾಸ

ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶ ಗಲ್ವಾನ್ ಕಣಿವೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು.

ಸಿಆರ್ ಪಿಎಫ್ ಸಿಬ್ಬಂದಿ ಯೋಗ

ಸಿಆರ್ ಪಿಎಫ್ ಸಿಬ್ಬಂದಿ ಯೋಗ

ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿತು.

ಪ್ರಾಣಿ ತರಬೇತಿ ಶಾಲೆಯಲ್ಲಿ ಯೋಗ ಪ್ರದರ್ಶನ

ಪ್ರಾಣಿ ತರಬೇತಿ ಶಾಲೆಯಲ್ಲಿ ಯೋಗ ಪ್ರದರ್ಶನ

ಅರುಣಾಚಲ ಪ್ರದೇಶ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಲೋಹಿತ್‌ಪುರದ ಪ್ರಾಣಿ ತರಬೇತಿ ಶಾಲೆಯ (ಎಟಿಎಸ್) ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಸಿಬ್ಬಂದಿ ಕುದುರೆಗಳೊಂದಿಗೆ ಯೋಗ ಪ್ರದರ್ಶನ ನೀಡಿದರು.

ಟೈಮ್ಸ್ ಸ್ಕ್ವೇರ್ನಲ್ಲಿ ಅಂತರರಾಷ್ಟ್ರೀಯ ಯೋಗ ಆಚರಣೆ

ಟೈಮ್ಸ್ ಸ್ಕ್ವೇರ್ನಲ್ಲಿ ಅಂತರರಾಷ್ಟ್ರೀಯ ಯೋಗ ಆಚರಣೆ

ನ್ಯೂಯಾರ್ಕ್ನ ಕಾನ್ಸುಲೇಟ್ ಜನರಲ್, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಅಲೈಯನ್ಸ್ ಜೊತೆ ಸಹಭಾಗಿತ್ವದಲ್ಲಿ ಭಾನುವಾರ ಟೈಮ್ಸ್ ಸ್ಕ್ವೇರ್ನಲ್ಲಿ ಅಂತರರಾಷ್ಟ್ರೀಯ ಯೋಗ ಆಚರಣೆಯನ್ನು ಆಯೋಜಿಸಿತು. 'ಅಯನ ಸಂಕ್ರಾಂತಿ' ಎಂಬ ವಿಷಯದ ದಿನವಿಡೀ ನಡೆದ ಕಾರ್ಯಕ್ರಮದಲ್ಲಿ 3,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು

ಯೋಗಾಭ್ಯಾಸದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಯೋಗಾಭ್ಯಾಸದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ನವದೆಹಲಿಯ ನಿವಾಸದಲ್ಲಿ ಯೋಗಾಭ್ಯಾಸವನ್ನು ನಡೆಸಿದರು.

ಸಚಿವ ಡಾ. ಹರ್ಷವರ್ಧನ್ ಯೋಗ

ಸಚಿವ ಡಾ. ಹರ್ಷವರ್ಧನ್ ಯೋಗ

7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ದೆಹಲಿಯ ಮಹಾರಾಜ ಅಗ್ರಸೆನ್ ಪಾರ್ಕ್‌ನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.

English summary
How Indian Leaders, Security Force And People Celebrated 7th International Yoga Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X