'ಅಯೋಧ್ಯೆ ರಾಮ' ಸತ್ಯ ಅನ್ನೋದಾದ್ರೆ 'ಟ್ರಿಪಲ್ ತಲಾಖ್' ಕೂಡಾ ಸತ್ಯ!

By: ಅನುಷಾ ರವಿ
Subscribe to Oneindia Kannada

ನವದೆಹಲಿ, ಮೇ 16: ''ಶ್ರೀರಾಮನು ಅಯೋಧ್ಯೆಯಲ್ಲೇ ಹುಟ್ಟಿದ್ದನೆಂದು ಹಿಂದೂಗಳು ನಂಬುವುದು ಸರಿ ಎಂದಾದರೆ, 1400 ವರ್ಷಗಳಿಂದಲೂ ಒಂದು ಧಾರ್ಮಿಕ ನಂಬಿಕೆಯಡಿ ಚಾಲ್ತಿಯಲ್ಲಿರುವ ಟ್ರಿಪಲ್ ತಲಾಖ್ ತಪ್ಪು ಎಂದು ಹೇಳುವುದೇಕೆ?''
- ಸುಪ್ರೀಂ ಕೋರ್ಟ್ ನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಪೀಠಕ್ಕೆ ಕೇಳಿದ ಪ್ರಶ್ನೆಯಿದು.[ಐವರು ನ್ಯಾಯಮೂರ್ತಿಗಳ ಕೈಯಲ್ಲಿ ಮೂರು ತಲಾಖ್ ಹಣೆಬರಹ]

ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ, ಟ್ರಿಪಲ್ ತಲಾಖ್ ಕುರಿತ ವಿಚಾರಣೆ ಆರಂಭವಾಗುತ್ತಿದ್ದಂತೆ ಕಪಿಲ್ ಸಿಬಲ್ ಅವರು ನ್ಯಾಯ ಪೀಠದ ಮುಂದೆ ತಮ್ಮ ಈ ವಾದ ಮಂಡಿಸಿದರು.[ತಲಾಖ್ ವಿರುದ್ಧ ಹನುಮಾನ್ ಮೊರೆಹೋದ ಮುಸ್ಲಿಂ ಮಹಿಳೆಯರು]

ಟ್ರಿಪಲ್ ತಲಾಖ್ ಬಗ್ಗೆ ತೀರ್ಪು ನೀಡುವುದು ಸುಪ್ರೀಂ ಕೋರ್ಟ್ ಮುಂದಿರುವ ದೊಡ್ಡ ಸವಾಲು ಎಂದು ಹೇಳಿದ ಅವರು, ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿದ ಎಂಬ ಹಿಂದೂಗಳ ನಂಬಿಕೆಯನ್ನು ಹೇಗೆ ಸುಪ್ರೀಂ ಕೋರ್ಟ್ ಮಾನ್ಯ ಮಾಡುತ್ತದೆಯೋ, ಅದೇ ರೀತಿ ಟ್ರಿಪಲ್ ತಲಾಖ್ ಮೇಲೆ ಈ ದೇಶದ 165 ಮಿಲಿಯನ್ ಜನಸಂಖ್ಯೆಯುಳ್ಳ ಸಮುದಾಯ ಇಟ್ಟಿರುವ ನಂಬಿಕೆಯನ್ನೂ ಮಾನ್ಯ ಮಾಡಬೇಕು ಎಂದು ಅವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"The challenge is whether the court should decide the faith of 165 million people or should it depends on the legislature as in other cases? That Ram was born in Ayodhya is a matter of faith, not Constitutional morality; same in this case" senior counsel Kapil Sibal told the constitution bench of the Supreme Court.
Please Wait while comments are loading...