ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈ ಮೋದಿ ಎಂದವರಿಗೆ ಕೇಜ್ರಿವಾಲ್ ನೀತಿಪಾಠ!

|
Google Oneindia Kannada News

ಗಾಂಧಿನಗರ, ನವೆಂಬರ್ 11: ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಚಾರದ ಸಂದರ್ಭದಲ್ಲಿ ಕೆಲವು ಯುವಕರ ಗುಂಪು ಪ್ರಧಾನಮಂತ್ರಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದೆ.

ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿದರು. ಈ ವೇಳೆ ಪಂಚಮಹಲ್ ಜಿಲ್ಲೆಯ ಹಲೋಲ್ ನಲ್ಲಿ ಸಭೆಯನ್ನು ಉದ್ದೇಶಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು.

ಗುಜರಾತ್‌ನಲ್ಲಿ ಏನಿದು ಲೆಕ್ಕಾಚಾರ?: ಒಬಿಸಿ ಮತ ಬಿದ್ದರೆ ಬಿಜೆಪಿ ಗೆದ್ದ ಹಾಗೆ!ಗುಜರಾತ್‌ನಲ್ಲಿ ಏನಿದು ಲೆಕ್ಕಾಚಾರ?: ಒಬಿಸಿ ಮತ ಬಿದ್ದರೆ ಬಿಜೆಪಿ ಗೆದ್ದ ಹಾಗೆ!

ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಯಾರಿಗೆ ಬೇಕಾದರೂ ಬೆಂಬಲವಾಗಿ ಘೋಷಣೆಗಳನ್ನು ಕೂಗಬಹುದು. ಆದರೆ ಅವರೇನು ಅವರ ಮಕ್ಕಳಿಗೆ ಶಾಲೆಗಳನ್ನು ನಿರ್ಮಿಸುತ್ತಾರಾ?. ಉಚಿತ ವಿದ್ಯುತ್ ಒದಗಿಸುತ್ತಾರಾ? ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಪರ ಘೋಷಣೆಗಳನ್ನು ಕೂಗುವವರ ಹೃದಯವನ್ನು ಮುಂದೊಂದು ದಿನ ಎಎಪಿ ಗೆಲ್ಲಲಿದೆ ಎಂದು ಹೇಳಿದರು.

ಮಕ್ಕಳೇ ನಿಮಗೆ ಉಚಿತ ವಿದ್ಯುತ್ ಅನ್ನು ನೀಡುವುದೇ ಕೇಜ್ರಿವಾಲ್

ಮಕ್ಕಳೇ ನಿಮಗೆ ಉಚಿತ ವಿದ್ಯುತ್ ಅನ್ನು ನೀಡುವುದೇ ಕೇಜ್ರಿವಾಲ್

"ಕೆಲ ಸ್ನೇಹಿತರು 'ಮೋದಿ, ಮೋದಿ' ಎಂದು ಕೂಗುತ್ತಿದ್ದಾರೆ, ನೀವು ಯಾರನ್ನು ಬೇಕಾದರೂ ಬೆಂಬಲಿಸಿ ಘೋಷಣೆಗಳನ್ನು ಕೂಗಬಹುದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಆದರೆ ಕೇಜ್ರಿವಾಲ್ ನಿಮಗಾಗಿ ಶಾಲೆಗಳನ್ನು ಮಾಡುತ್ತಾರೆ. ಮಕ್ಕಳೇ, ನೀವು ಎಷ್ಟು ಘೋಷಣೆಗಳನ್ನು ಕೂಗಿದರೂ, ಕೇಜ್ರಿವಾಲ್ ನಿಮಗಾಗಿ ಉಚಿತ ವಿದ್ಯುತ್ ಅನ್ನು ನೀಡುತ್ತಾರೆ," ಎಂದು ಅರವಿಂದ್ ಕೇಜ್ರಿವಾಲ್ ಸರಳವಾಗಿ ಹೇಳಿದರು.

ಉದ್ಯೋಗ ಇಲ್ಲದವರಿಗೆ ತಿಂಗಳಾ ತಿಂಗಳಾ 3,000 ರೂಪಾಯಿ!

ಉದ್ಯೋಗ ಇಲ್ಲದವರಿಗೆ ತಿಂಗಳಾ ತಿಂಗಳಾ 3,000 ರೂಪಾಯಿ!

ಪ್ರಧಾನಿ ಪರವಾಗಿ ಘೋಷಣೆ ಕೂಗಿದವರನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ನಮಗೆ ಯಾರೊಂದಿಗೂ ದ್ವೇಷವಿಲ್ಲ ಎಂದರು. ನೀವು ಯಾರನ್ನು ಬೇಕಾದರೂ ಬೆಂಬಲಿಸಿ ಘೋಷಣೆಗಳನ್ನು ಕೂಗಬಹುದು, ಆದರೆ ಮುಂದೊಂದು ದಿನ ನಿಮ್ಮ ಮನಸ್ಸನ್ನು ಗೆದ್ದು ನಮ್ಮ ಪಕ್ಷಕ್ಕೆ ಕರೆತರುತ್ತೇವೆ ಎಂದು ಹೇಳಿದರು. ಅಲ್ಲದೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ನಿರುದ್ಯೋಗಿಗಳಾಗಿದ್ದು, ತಮ್ಮ ಪಕ್ಷದ ಉದ್ಯೋಗ ಖಾತರಿಯನ್ನು ನೀಡುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಮಾಸಿಕ 3,000 ರೂಪಾಯಿ ನಿರುದ್ಯೋಗ ಭತ್ಯೆಯನ್ನು ನೀಡುವುದಾಗಿ ಪುನರುಚ್ಚರಿಸಿದರು.

ಆಸ್ಪತ್ರೆ, ಉಚಿತ ವಿದ್ಯುತ್, ಶಾಲೆ ಬಗ್ಗೆ ಯಾರೂ ಮಾತಾಡಲ್ಲ

ಆಸ್ಪತ್ರೆ, ಉಚಿತ ವಿದ್ಯುತ್, ಶಾಲೆ ಬಗ್ಗೆ ಯಾರೂ ಮಾತಾಡಲ್ಲ

ರಾಜ್ಯದಲ್ಲಿ ಶಾಲೆಗಳ ಬಗ್ಗೆ ಮಾತನಾಡುವ ಯಾವುದೇ ಪಕ್ಷವಿಲ್ಲ, ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಿ ಉದ್ಯೋಗ ಮತ್ತು ಉಚಿತ ವಿದ್ಯುತ್ ನೀಡುವುದಾಗಿ ಯಾವುದೇ ಪಕ್ಷ ಭರವಸೆ ನೀಡಿದೆಯೇ? ಈ ವಿಷಯಗಳ ಬಗ್ಗೆ ಮಾತನಾಡುವುದು ನಮ್ಮ ಪಕ್ಷ ಮಾತ್ರ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಜನರು ಗೂಂಡಾಗಿರಿಯನ್ನು ನಂಬಿದರೆ ಮತ್ತು ನಿಂದನೆಗಳನ್ನು ಮಾಡಲು ಬಯಸಿದರೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬೆಂಬಲಿಸಬಹುದು ಎಂದರು. "ನಿಮಗೆ ಶಾಲೆಗಳು ಬೇಕಾದಲ್ಲಿ ನನ್ನ ಬಳಿಗೆ ಬನ್ನಿ, ನಾನು ಎಂಜಿನಿಯರ್, ನಿಮಗೆ ವಿದ್ಯುತ್, ಆಸ್ಪತ್ರೆ ಅಥವಾ ರಸ್ತೆ ಬೇಕಾದರೆ ನನ್ನ ಬಳಿಗೆ ಬನ್ನಿ, ಇಲ್ಲದಿದ್ದರೆ ಗೂಂಡಾಗಿರಿಗಾಗಿ ಅವರ ಬಳಿಗೆ ಹೋಗಿ," ಎಂದರು.

ಮಾತು ತಪ್ಪಿದರೆ ಮತ್ತೊಮ್ಮೆ ನಿಮ್ಮ ಬಳಿ ಬರುವುದಿಲ್ಲ

ಮಾತು ತಪ್ಪಿದರೆ ಮತ್ತೊಮ್ಮೆ ನಿಮ್ಮ ಬಳಿ ಬರುವುದಿಲ್ಲ

"ನಾನು ಕೇವಲ ಐದು ವರ್ಷ ಅಧಿಕಾರ ನೀಡುವಂತೆ ಕೇಳಲು ಬಂದಿದ್ದೇನೆ. ನೀವು ಅವರಿಗೆ 27 ವರ್ಷಗಳ ಕಾಲ ಅಧಿಕಾರವನ್ನು ನೀಡಿದ್ದೀರಿ. ನನಗೆ ಐದು ವರ್ಷಗಳನ್ನು ಕೊಡಿ ಸಾಕು. ನಾನು ನಿಮಗೆ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ, ಅದು ನನ್ನಿಂದ ಸಾಧ್ಯವಾಗದಿದ್ದರೆ ನಾನು ಮತ್ತೆ ನಿಮ್ಮ ಬಳಿಗೆ ಬರುವುದಿಲ್ಲ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

English summary
How AAP Chief Arvind Kejriwal react to Pro-Modi Chants in Gujarat. Read here to know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X