ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಮುಖ್ಯ ಪರೀಕ್ಷೆಗೆ ಅಂಟಿಕೊಂಡಿದ್ದು ಹೇಗೆ ಹ್ಯಾಕಿಂಗ್ ನಂಟು!?

|
Google Oneindia Kannada News

ನವದೆಹಲಿ, ಅಕ್ಟೋಬರ್ 03: ಕಳೆದ ವರ್ಷ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆ, ಜೆಇಇ ಮುಖ್ಯ ಪರೀಕ್ಷೆಯಲ್ಲೇ ರಾಜಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರೀಯ ತನಿಖಾ ತಂಡದ ಅಧಿಕಾರಿಗಳು ಹೇಳಿದ್ದಾರೆ.

ಜೆಇಇ ಪರೀಕ್ಷೆಯಲ್ಲಿನ ಹಗರಣದಲ್ಲಿ ಕೇಂದ್ರದ ಸಿಬಿಐ ಅಧಿಕಾರಿಗಳು ಹೇಳಲಾಗಿರುವ ರಷ್ಯಾ ಮೂಲದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

Breaking: ಜೆಇಇ ಅಡ್ವಾನ್ಸ್ಡ್ 2022 ರ ಫಲಿತಾಂಶ ಪ್ರಕಟBreaking: ಜೆಇಇ ಅಡ್ವಾನ್ಸ್ಡ್ 2022 ರ ಫಲಿತಾಂಶ ಪ್ರಕಟ

2021ರಲ್ಲಿ ವಿಶ್ವಪ್ರಸಿದ್ಧ ಟಿಸಿಎಸ್ ಅಥವಾ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಒದಗಿಸಿದ ಪರೀಕ್ಷೆಯ ಸಾಫ್ಟ್‌ವೇರ್ ಅನ್ನು ರಷ್ಯಾದ ಮಿಖಾಯಿಲ್ ಶಾರ್ಗಿನ್ ಹ್ಯಾಕ್ ಮಾಡಿದ್ದಾನೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಈ ಮಾಹಿತಿಯ ಸುತ್ತ ಯಾವೆಲ್ಲ ಬೆಳವಣಿಗೆಗಳು ನಡೆದಿವೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

How A Russian Allegedly Hacked Software For Cheating JEE Main Exam: 10 Facts

ಜೆಇಇ ಮುಖ್ಯ ಪರೀಕ್ಷೆ ಹಿಂದೆ ಹ್ಯಾಕಿಂಗ್:

* ಜಾಯಿಂಟ್ ಇಂಜಿನಿಯರಿಂಗ್ ಪರೀಕ್ಷೆ ಅಥವಾ ಜೆಇಇ ಮುಖ್ಯ ಪರೀಕ್ಷೆಯು ಪ್ರತಿಷ್ಠಿತ ಐಐಟಿಗಳು ಸೇರಿದಂತೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶವನ್ನು ಪಡೆದುಕೊಳ್ಳಲು ದೇಶಾದ್ಯಂತ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ.

* ಕಝಾಕಿಸ್ತಾನ್‌ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಾರ್ಗಿನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತದನಂತರದಲ್ಲಿ ಆತನನ್ನು ಅರೆಸ್ಟ್ ಮಾಡಲಾಯಿತು.

* ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ರಿಗ್ಗಿಂಗ್‌ಗಾಗಿ ಈತ ಬೇಕಾಗಿದ್ದಾನೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮೊದಲೇ ಮಾಹಿತಿಯಿತ್ತು. ಈ ಹಿಂದೆ ನಡೆಸಿದ ಪರೀಕ್ಷೆಯಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

* ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಕಂಪ್ಯೂಟರ್ ಟರ್ಮಿನಲ್‌ಗಳನ್ನು ನಿಯಂತ್ರಿಸಲು ರಿಮೋಟ್ ಸಂಪರ್ಕವನ್ನು ಒದಗಿಸುವ ಸಲುವಾಗಿ ಜೆಇಇ ಮೇನ್ಸ್ ಪರೀಕ್ಷೆಯ ವೇದಿಕೆಯಾಗಿದ್ದ ಟಿಸಿಎಸ್ ಸಾಫ್ಟ್‌ವೇರ್ ಅನ್ನು ಆರೋಪಿಉಯು ಹ್ಯಾಕ್ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿದ್ದವು.

* ಇದರ ಅರ್ಥ, ಆರೋಪಿ ಶಾರ್ಗಿನ್ ಹ್ಯಾಕಿಂಗ್ ಮೂಲಕ ವಿದ್ಯಾರ್ಥಿಗಳು ಮೋಸ ಮಾಡಲು ಸಾಧ್ಯವಾಯಿತು. ಏಕೆಂದರೆ 'ಶಿಕ್ಷಕರು' ಅಥವಾ 'ತರಬೇತುದಾರರು' ತಮ್ಮ ಕಂಪ್ಯೂಟರ್‌ಗಳ ಉಸ್ತುವಾರಿಯನ್ನು ತೆಗೆದುಕೊಳ್ಳಲು ಮತ್ತು ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಿತ್ತು.

* ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಅಫಿನಿಟಿ ಎಜುಕೇಶನ್ ಹೆಸರಿನ ಖಾಸಗಿ ಕೋಚಿಂಗ್ ಸಂಸ್ಥೆಯ ಸಿಬ್ಬಂದಿ ತಲಾ 12-15 ಲಕ್ಷದವರೆಗೆ ಪಾವತಿಸಿದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಪರಿಹರಿಸಿದ್ದಾರೆ ಎಂಬ ಬಗ್ಗೆ ಕಳೆದ ವರ್ಷವೇ ಪ್ರಕರಣವೊಂದನ್ನು ದಾಖಲಿಸಲಾಗಿತ್ತು.

* ಹರಿಯಾಣದ ಸೋನೆಪತ್‌ನಲ್ಲಿರುವ ಪರೀಕ್ಷಾ ಕೇಂದ್ರದ ಮೂಲಕ ರಿಮೋಟ್ ಪ್ರವೇಶವನ್ನು ಒದಗಿಸಲಾಗಿದೆ. ಈ ಹಗರಣದಲ್ಲಿ ಹಲವಾರು ವಿದೇಶಿ ಪ್ರಜೆಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

* 20 ವಿದ್ಯಾರ್ಥಿಗಳು ಮೋಸ ಮಾಡಿದ್ದಾರೆ ಎಂದು ನಂಬಲಾಗಿದ್ದು, ಅಂಥವರು ಮುಂದಿನ ಮೂರು ವರ್ಷಗಳವರೆಗೆ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ನಿಷೇಧಿಸಲಾಗಿದೆ.

* ಸಿಬಿಐ ನಂತರ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ವಿವಿಧ ನಗರಗಳಲ್ಲಿ ದಾಳಿ ನಡೆಸಿ ಹಗರಣಕ್ಕೆ ಬಳಸಲಾದ ಲ್ಯಾಪ್‌ಟಾಪ್ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದೆ.

English summary
How A Russian Allegedly Hacked Software For Cheating JEE Main Exam: 10 Facts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X