ರೀಲ್ಸ್ ಹುಚ್ಚಿಗೆ ಡಿಎಸ್‌ಎಲ್‌ಆರ್‌ ಕ್ಯಾಮರಾ ಖರೀದಿಸಲು ಅಡ್ಡದಾರಿ ಹಿಡಿದ ಮನೆಗೆಲಸದಾಕೆ-ಮುಂದಾಗಿದ್ದೇನು?

ರೀಲ್ಸ್‌ ಮೂಲಕ ವೈರಲ್‌ ಸ್ಟಾರ್‌ ಆಗಲು ಕೆಲವೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮನೆಕೆಲಸದಾಕೆ ಸಹ ರೀಲ್ಸ್​ ಮಾಡಿ ವೈರಲ್​ ಆಗಲು ಆಸೆ ಪಟ್ಟಿದ್ದು, ಇದಕ್ಕಾಗಿ ದುಬಾರಿ ಕ್ಯಾಮರಾ ಖರೀದಿ ಮಾಡಲು ಮುಂದಾಗಿದ್ದಳು. ಇದಕ್ಕೆ ಹಣ ಹೊಂದಿಸಲು ಆಕೆ ಹಿಡಿದ ದಾರಿ ಯಾವ್ದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ನವದೆಹಲಿಯ ದ್ವಾರಕಾದಲ್ಲಿ ಮನೆಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬಳು ರೀಲ್ಸ್​ ಮಾಡಲು ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿ ಮಾಡಲು ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದು, ಆಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ನದೆಹಲಿ ಪೊಲೀಸರು ಆಕೆಯನ್ನು ಮಹಿಳೆಯನ್ನು ಬಂಧಿಸಿ ದೋಚಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ.

House Maid stolen gold jewelry for DSLR camera purchase to make reels

ಇನ್ನು ಚಿನ್ನಾಭರಣ ಕದ್ದವಳನ್ನು ನೀತು ಎಂದು ಗುರುತಿಸಲಾಗಿದ್ದು, ಈಕೆ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ವೀಡಿಯೊಗಳನ್ನು ಚಿತ್ರಿಸಲು ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು ಖರೀದಿ ಮಾಡಲು ಬಯಸಿದ್ದಳಂತೆ. ಇದಕ್ಕಾಗಿ ಆಕೆ ಕಳ್ಳತನಕ್ಕೆ ಇಳಿದಿದ್ದಳು. ಇನ್ನು ದ್ವಾರಕಾದ ಐಷಾರಾಮಿ ಪ್ರದೇಶದಲ್ಲಿರುವ ಬಂಗಲೆಯ ಮಾಲೀಕರು ಜುಲೈ 15ರಂದು ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದರು.

ಮನೆಯಲ್ಲಿ ಚಿನ್ನದ ಬಳೆ, ಬೆಳ್ಳಿ ಸರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಕಳ್ಳತನಕ್ಕೆ ಕೆಲವು ದಿನಗಳ ಮೊದಲು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಕೆಲಸದಾಕೆಯೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ನೀತು ಅವರ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು, ಆಕೆಯ ವಿಳಾಸವೂ ನಕಲಿ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಮಾತನಾಡಿ, ನೀತು ವಿಳಾಸವನ್ನು ಪಡೆಯಲಾಯಿತು. ನವದೆಹಲಿಯಿಂದ ಬ್ಯಾಗ್ ಸಮೇತ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆಕೆಯನ್ನು ಪೊಲೀಸರು ಬಂದಿಸಿದ್ದಾರೆ. ಇನ್ನು ವಿಚಾರಣೆ ವೇಳೆ ತಾನು ರಾಜಸ್ಥಾನದ ನಿವಾಸಿ ಆಗಿದ್ದು, ತನ್ನ ಪತಿ ಮಾದಕ ವ್ಯಸನಿ ಎಂದು ಹೇಳಿದ್ದಾಳೆ.

ಕೆಲವು ದಿನಗಳಿಂದ ಆಕೆ ಯೂಟ್ಯೂಬ್ ಚಾನೆಲ್ ತೆರೆದಿದ್ದಳು, ಜೊತೆಗೆ ಇನ್ಸ್ಟಾಗ್ರಾಂ ರೀಲ್ಸ್‌‌ಗಳನ್ನು ಪೋಸ್ಟ್ ಮಾಡಲು ಆರಂಭಿಸಿದಳು. ವಿಡಿಯೋಗಳನ್ನು ಶೂಟ್​ ಮಾಡಲು ಡಿಎಸ್‌ಎಲ್‌ಆರ್‌ ಕ್ಯಾಮರಾವನ್ನು ಪಡೆದುಕೊಳ್ಳುವಂತೆ ಯಾರೋ ಆಕೆಗೆ ಸಲಹೆ ಕೊಟ್ಟಿದ್ದು, ಕ್ಯಾಮರಾಕ್ಕೆ ಲಕ್ಷಗಟ್ಟಲೇ ಬೇಕೆಂದು ತಿಳಿದ ಆಕೆ ಸಂಬಂಧಿಕರಲ್ಲಿ ಸಾಲ ಕೇಳಿದರೂ ಯಾರೂ ಹಣ ಕೊಟ್ಟಿರಲಿಲ್ಲ. ಕೊನೆಗೆ ದ್ವಾರಕಾ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದಿಯಲು ಯೋಜನೆ ರೂಪಿಸಿದ್ದಳು ಎಂದು ಆಕೆಯೇ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+