ಅಳುತ್ತಿದೆಯೆಂದು ಹಸುಳೆಯ ಕಾಲನ್ನೇ ಮುರಿದ ರಕ್ಕಸ!

Posted By:
Subscribe to Oneindia Kannada

ಡೆಹ್ರಾಡೂನ್, ಫೆಬ್ರವರಿ 07 : ಸುತ್ತಿದ ಬಟ್ಟೆಯಲ್ಲೇ ಸುಸ್ಸು ಮಾಡಿಕೊಂಡಿತ್ತೋ ಏನೋ ಆ ಮೂರು ದಿನಗಳ ಹಸುಳೆ ಆಸ್ಪತ್ರೆಯ ಹಾಸಿಗೆಯಲ್ಲಿ ಒಂದೇ ಸವನೆ ಅಳುತ್ತಿತ್ತು. ಇದರಿಂದ ವಿಚಲಿತನಾದ ಅಟೆಂಡರ್ ಏನು ಮಾಡಿದ್ದಾನೆ ಗೊತ್ತೆ? ಆ ಪುಟ್ಟ ಕಂದಮ್ಮನ ಕಾಲನ್ನೇ ಮುರಿದು ಹಾಕಿದ್ದಾನೆ.

ಈ ಸುದ್ದಿ ಕೇಳಿದರೇ ಹೊಟ್ಟೆಯಲ್ಲಿ ತಳಮಳ ಆರಂಭವಾಗುತ್ತದೆ, ಆ ರಕ್ಕಸ ಮಾಡಿದ ಹೇಯ ಕೆಲಸಕ್ಕೆ ರಕ್ತವೇ ಉಕ್ಕಿ ಬರುತ್ತದೆ. ಇನ್ನು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಪುಟ್ಟಪುಟಾಣಿ ಎಷ್ಟು ಅತ್ತಿರಬೇಡ? ಅದರ ಕಾಲು ಮುರಿಯಲು ಮನಸ್ಸಾದರೂ ಹೇಗೆ ಬಂತು? [ಮಗಳು ಹಲ್ಲುಜ್ಜಿಲ್ಲ ಎಂದು ಆ ಮಹಾತಾಯಿ ಒದ್ದು ಕೊಂದೇಬಿಟ್ಟಳು!]

Hospital warden breaks infants leg for crying

ಈ ಹೃದಯಹಿಂಡುವ ಕೃತ್ಯ ನಡೆದಿರುವುದು ಉತ್ತರಾಖಂಡದ ರೂರ್ಕಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ. ಈ ಘಟನೆ ನಡೆದಿದ್ದು ಜನವರಿ 28ರಂದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಗುವಿಗೆ ಉಸಿರಾಟದ ತೊಂದರೆ ಇದ್ದಿದ್ದರಿಂದ ಸೋಂಕು ತಗಲುತ್ತದೆಂದು ಪ್ರತ್ಯೇಕವಾಗಿ ಇಡಲಾಗಿತ್ತು. ಮಗುವನ್ನು ನೋಡಿಕೊಳ್ಳಲು ಆ ವ್ಯಕ್ತಿಯನ್ನು ನೇಮಿಸಲಾಗಿತ್ತು. ದಾಖಲಿಸಿದ ಕೆಲವೇ ನಿಮಿಷಗಳ ನಂತರ ಮಗು ಅಳಲು ಪ್ರಾರಂಭಿಸಿದೆ. ಆಗ ಅಟೆಂಡರ್ ಅದರ ಕಾಲು ಮುರಿದಿದ್ದಾನೆ.

ಡೆಹ್ರಾಡೂನ್ ನಲ್ಲಿರುವ ಬೇರೆ ಆಸ್ಪತ್ರೆಗೆ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದಾಗ ಮಗುವಿನ ಕಾಲು ಮುರಿದಿರುವುದು ಗಮನಕ್ಕೆ ಬಂದಿದೆ. ರೂರ್ಕಿಯ ಆಸ್ಪತ್ರೆಯ ಸಿಟಿಟಿವಿ ಫುಟೇಜನ್ನು ನೋಡಿದಾಗ ಮಗುವಿನ ಕಾಲು ಮುರಿದಿದ್ದು ಆ ವ್ಯಕ್ತಿ ಎಂದು ತಿಳಿದುಬಂದಿದೆ.

ಇಡೀ ರಾತ್ರಿ ನನ್ನ ಮಗುವಿಗೆ ಆ ವ್ಯಕ್ತಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಮಗುವಿನ ತಂದೆ ದೂರು ನೀಡಿದ್ದಾರೆ. ಹಸುಳೆಯ ಕಾಲು ಮುರಿದ ಅಡೆಂಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An attender of a private hospital has broken the leg of a 3-day-old baby inhumanely as it was crying. The baby was suffering from respiratory problem and was admitted to a private hospital in Roorkee in Uttarakhand. The incident was recorded in CCTV. The accused is arrested.
Please Wait while comments are loading...