School Holiday: ಜುಲೈ 24 ಮತ್ತು 28ರಂದು ಶಾಲೆಗಳಿಗೆ ರಜೆ ಘೋಷಣೆ

School Holiday: ದೇಶದ ಹಲವು ರಾಜ್ಯಗಳಲ್ಲಿ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳಿಗೆ ಈವರೆಗೂ ಸಾಲು ರಜೆಗಳನ್ನೇ ಘೋಷಿಸಲಾಗಿದೆ. ಹಾಗೆಯೇ ಇದೀಗ ಈ ಭಾಗದ ಶಾಲೆಗಳಿಗೆ ಜುಲೈ 24 ಹಾಗೂ 28ರಂದು ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ವಿಶೇಷ ಕಾರ್ಯಕ್ರಮಗಳು, ಪ್ರತಿಭಟನೆಗಳು, ಭಾರೀ ಮಳೆ ವೇಳೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲೇ ಹೆಚ್ಚು ರಜೆಗಳನ್ನು ನೀಡಲಾಗಿದ್ದು, ಇವುಗಳನ್ನು ಸರಿದೂಗಿಸುವ ಕೆಲಸಗಳು ನಡೆಯುತ್ತಿವೆ. ಯಾಕಂದ್ರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಿರಲೆಂದು ಈ ನಿರ್ಧಾರವನ್ನು ಆಯಾ ಜಿಲ್ಲಾಡಳಿತಗಳು ತೆಗೆದುಕೊಂಡಿವೆ.

Holiday declared for schools in these districts on July 24 and 28

ಇನ್ನೂ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ವೇಳೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ವಾರಗಟ್ಟಲೇ ರಜೆ ಘೋಷಣೆ ಮಾಡಲಾಗಿದೆ. ಇದೀಗ ಈ ಭಾಗಗಳಲ್ಲಿ ಜುಲೈ 24 ಹಾಗೂ 28ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈಗಾಗಲೇ ಇಂದು (ಜುಲೈ 23) ಚಕ್ರವರ್ತಿ ರಾಜೇಂದ್ರ ಚೋಳನ ಜನ್ಮ ದಿನಾಚರಣೆ ಹಿನ್ನೆಲೆ ತಮಿಳುನಾಡಿದ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗೆಯೇ ತಿರುವಾದಿರೈ ಹಬ್ಬದ ಅಂಗವಾಗಿ ಜುಲೈ 24 ಮತ್ತು 28ರಂದು ಸಾರ್ವಜನಿಕ ರಜೆ ಘೋಷಿಸಲಾಗಿದ್ದು, ಈ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ತಿಳಿದುಬಂದಿದೆ.

ಅಧಿಕೃತ ಅಧಿಸೂಚನೆ ಪ್ರಕಾರ, ಚೋಳ ಚಕ್ರವರ್ತಿಯ ಜನ್ಮ ದಿನಾಚರಣೆ ಅಂಗವಾಗಿ ಅರಿಯಲೂರ್ ಜಿಲ್ಲೆಯಲ್ಲಿ ಶಾಲೆಗಳಿಗೆ ಬುಧವಾರ (ಜುಲೈ 23) ರಜೆ ಘೋಷಿಸಲಾಗಿತ್ತು. ಇನ್ನು ಶೈಕ್ಷಣಿಕ ವೇಳಾಪಟ್ಟಿ ಮತ್ತು ಆಡಳಿತಾತ್ಮಕ ಕೆಲಸಗಳಿಗೆ ಅಡ್ಡಿ ಆಗದಂತೆ ನೋಡಿಕೊಳ್ಳಲು, ವಾರದ ಮಧ್ಯದ ರಜಾ ದಿನಗಳನ್ನು ಸರಿದೂಗಿಸಲು ಜುಲೈ 26ರ ಶನಿವಾರ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಪೂರ್ಣ ದಿನ ತೆರೆಯಲಿವೆ ಎಂದು ಅರಿಯಲೂರು ಜಿಲ್ಲಾಧಿಕಾರಿ ಘೋಷಣೆ ಮಾಡಿದರು.

ಜುಲೈ 24ರಂದು ಎಲ್ಲೆಲ್ಲಿ ಶಾಲೆಗಳಿಗೆ ರಜೆ: ಕನ್ಯಾಕುಮಾರಿಯಲ್ಲಿ ಆದಿ ಅಮಾವಾಸ್ಯೆ ಇರುವುದರಿಂದ ಜುಲೈ 24ರ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದಿ ಅಮಾವಾಸ್ಯೆಯನ್ನು ತಮಿಳುನಾಡು ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಆಚರಣೆ ಮಾಡಲಾಗುತ್ತದೆ. ಪೂರ್ವಜರನ್ನು ಗೌರವಿಸಲು ಮತ್ತು ಕುಟುಂಬ ಸದಸ್ಯರ ಸಮೃದ್ಧಿ ಮತ್ತು ಶಾಂತಿಗಾಗಿ ಆಶೀರ್ವಾದ ಪಡೆಯಲು ಇದನ್ನು ಆಚರಿಸಲಾಗುತ್ತದೆ.

ಜುಲೈ 28ರಂದು ಶಾಲೆಗಳಿಗೆ ರಜೆ ಏಕೆ?: ಆದಿಪೂರಂ ಹಬ್ಬ ಹಿನ್ನೆಲೆ ಜುಲೈ 28ರ ಸೋಮವಾರ ಚೆಂಗಲ್ಪಟ್ಟು ಜಿಲ್ಲೆಯ ಶಾಲೆಗಳು ಮುಚ್ಚಲ್ಪಡುತ್ತವೆ. ಈ ಹಬ್ಬವನ್ನು ಜನರು ದೇವಾಲಯಗಳು ಮತ್ತು ಮನೆಗಳಲ್ಲಿ ಆಚರಿಸುತ್ತಾರೆ. ಆಂಡಾಳ್ ದೇವಿಯನ್ನು ಗೌರವಿಸಲು, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ರಜೆಯನ್ನು ಸರಿದೂಗಿಸಲು ಆಗಸ್ಟ್ 9ರ ಶನಿವಾರದಂದು ಶಾಲೆಗಳಲ್ಲಿ ಪೂರ್ಣ ದಿನ ತರಗತಿಗಳನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಹೀಗೆ ಮುಂದಿನ ದಿನಗಳಲ್ಲೂ ಕೂಡ ಹಬ್ಬಗಳ ಸರಮಾಲೆ ಇದ್ದು, ಆಗಲೂ ರಜೆಗಳು ಬರಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹಬ್ಬದೂಟವೇ ಬಡಿಸಿದಂತಾಗಲಿದೆ. ಮತ್ತೊಂದೆಡೆ ಪೋಷಕರು ಮಕ್ಕಳ ವಿದ್ಯಾಭ್ಯಾಸ ಹಿಂದುಳಿಯಬಾರದು ಎನ್ನುವ ಚಿಂತೆಯಲ್ಲಿದ್ದು, ಇದಕ್ಕೂ ಔಷಧವೆಂಬಂತೆ ರಜೆಗಳನ್ನು ಸರಿದೂಗಿಸಲು ಹೆಚ್ಚುವರಿ ತರಗತಿಗಳನ್ನು ನಡೆಸಲು ಜಿಲ್ಲಾಡಳಿತಗಳು ನಿರ್ಧಾರ ತೆಗೆದುಕೊಳ್ಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+