School & Colleges Holiday: ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ
School & Colleges Holiday: ಸಾಮಾನ್ಯವಾಗಿ ಶಾಲಾ, ಕಾಲೇಜುಗಳಿಗೆ ಹಬ್ಬಗಳು ಹಾಗೂ ಪ್ರಕೃತಿ ವಿಕೋಪಗಳು ಸಂಭವಿಸಿದಂತಹ ವೇಳೆ ರಜೆ ನೀಡಲಾಗುತ್ತದೆ. ಆದರೆ ಜನವರಿ 18 ಅಂದರೆ ಶನಿವಾರ ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ ಎಲ್ಲಿ ಹಾಗೂ ಸೂಕ್ತ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ಗಮನಿಸಿ.
ರಜೆ ಅಂದರೆ ಸಾಕು ಶಾಲಾ-ಕಾಲೇಜು ಮಕ್ಕಳ ಕಿವಿಗಳು ಬೇಗ ನೆಟ್ಟಗಾಗಿ ಬಿಡುತ್ತವೆ. ಅದರಲ್ಲೂ ಸರ್ಕಾರಿ ರಜೆ ಹೊರತುಪಡಿಸಿ ಬೇರೆ ರಜೆಗಳು ಸಿಕ್ಕರಂತೂ ಅವರಿಗೆ ಹಬ್ಬವೋ ಹಬ್ಬ. ಹಾಗೆಯೇ ಇದೀಗ ತಂಜಾವೂರು ಜಿಲ್ಲೆಯ ತಿರುವೈಯಾರಿನಲ್ಲಿ ಜನವರಿ 18ರಂದು ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ರಜೆಗಳು ಸಿಕ್ಕಿವೆ. ಅದರಲ್ಲೂ ಫೆಂಗಲ್ ಚಂಡಮಾರುತದ ವೇಳೆ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಗಳು ಹಲವು ರಾಜ್ಯಗಳ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಪೊಂಗಲ್ ಹಬ್ಬಕ್ಕೆ ನಿರಂತರ ರಜೆ ಸಿಕ್ಕ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ.
ತಂಜಾವೂರು ಜಿಲ್ಲೆಯ ತಿರುವೈಯಾರು ತ್ಯಾಗರಾಜರ್ ಆರಾಧನಾ ಹಬ್ಬ ಮಾಡಲಾಗುತ್ತದೆ. ಪ್ರತೀ ವರ್ಷವೂ ಸಹ ತ್ಯಾಗರಾಜರ ಆರಾಧನೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಅಂದರೆ ಜನವರಿ 18ರಂದು ಈ ಹಬ್ಬವನ್ನು ಮಾಡಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆ ಜಿಲ್ಲಾಧಿಕಾರಿ ಪ್ರಿಯಾಂಕಾ ಅವರು ಜಿಲ್ಲೆಗೆ ಸ್ಥಳೀಯ ರಜೆ ಘೋಷಣೆ ಮಾಡಿದ್ದಾರೆ. ಜನವರಿ 18ರಂದು ಈ ಭಾಗದಲ್ಲಿ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಅಂದು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಚಳಿಗಾಲದ ರಜೆ: ಜನವರಿ ಪ್ರಾರಂಭದಿಂದ ಭೀಕರ ಚಳಿ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಉತ್ತರ ಭಾರತದಲ್ಲಿ ಜನವರಿ 1ರಿಂದ 15 ವರೆಗೆ 15 ದಿನಗಳ ಕಾಲ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಇನ್ನು ಚಳಿಗಾಲದ ರಜೆಗಳನ್ನು ಹೊರತುಪಡಿಸಿ ಹಬ್ಬಗಳ ಹಿನ್ನೆಲೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಜನವರಿ 14ರಂದು ಮಕರ ಸಂಕ್ರಾತಿ ಆಚರಣೆ ಮಾಡಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಈ ಹಬ್ಬವನ್ನು ಜನವರಿ 15ರಂದು ಆಚರಣೆ ಮಾಡಲಾಗುತ್ತದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಕರ ಜ್ಯೋತಿ ಬೆಳಗುವ ಸಮಯವನ್ನು ಆಧರಿಸಿ ಕೆಲವು ಕಡೆಗಳಲ್ಲಿ ಈ ಎರಡು ದಿನಗಳಲ್ಲಿ ಒಂದು ದಿನವನ್ನು ಸಂಕ್ರಾತಿ ಎಂದು ಆಚರಣೆ ಮಾಡುತ್ತಾರೆ. ಈ ಹಿನ್ನೆಲೆ ಕರ್ನಾಟಕದ ಬಹುತೇಕ ಶಾಲಾ-ಕಾಲೇಜುಗಳಿಗೆ ಜನವರಿ 14 ಅಥವಾ 15ರಂದು ರಜೆ ಘೋಷಿಸಲಾಗುತ್ತದೆ.
ಇದನ್ನು ಹೊರತುಪಡಿಸಿ ಮಕರ ಸಂಕ್ರಾಂತಿ ಹಬ್ಬವನ್ನು ಅನೇಕ ರಾಜ್ಯಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಎಂದು ಆಚರಣೆ ಮಾಡುತ್ತಾರೆ. ಇನ್ನು ಅಸ್ಸಾಂನಲ್ಲಿ ಮಾಘ ಬಿಹು ಎಂದು ಆಚರಣೆ ಮಾಡುತ್ತಾರೆ. ಇನ್ನು ಜನವರಿ 26 ರಂದು ದೇಶಾದ್ಯಂತ ಗಣರಾಜ್ಯೋತ್ಸ ಆಚರಣೆ ಮಾಡಲಾಗುತ್ತದೆ. ಈ ದಿನ ಶಾಲಾ-ಕಾಲೇಜುಗಳು ಸೇರಿದಂತೆ ದೇಶದ ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ಧ್ವಜಾರೋಹಣ ನೆರವೇರಿಸಿ ಸಮಾರಂಭಗಳನ್ನು ಆಯೋಜನೆ ಮಾಡಲಾಗುತ್ತದೆ. ಆದರೆ ಈ ಬಾರಿ ಭಾನುವಾರದಂದೇ ಗಣರಾಜ್ಯೋತ್ಸವ ಬಂದಿದೆ.












Click it and Unblock the Notifications