ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಡೀಸೆಲ್ ದರ ಹೆಚ್ಚಳː ಸುಳ್ಳು ಸುದ್ದಿ

|
Google Oneindia Kannada News

ನವದೆಹಲಿ, ನ.13: ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ 1.50 ರೂ ಏರಿಕೆ ಮಾಡಲಾಗಿದೆ ಎಂಬ ಸುದ್ದಿ ಸುಳ್ಳಾಗಿದೆ. ಹೆಚ್ಚಾಗಿರುವ ಅಬಕಾರಿ ಸುಂಕವನ್ನು ಸರಿದೂಗಿಸಿಕೊಳ್ಳಲು ತೈಲ ಬೆಲೆ ಹೆಚ್ಚಳವಾಗಿದೆ ಎಂಬ ಸುದ್ದಿ ಗುರುವಾರ ಮಧ್ಯಾಹ್ನ ಹರಿದಾಡಿತ್ತು.

ತೈಲ ಬೆಲೆಯಲ್ಲಿ ಯಾವುದೇ ಏರಿಕೆಯಿಲ್ಲ. ಅಬಕಾರಿ ಸುಂಕ ಹೆಚ್ಚಳ ಮಾಡಿದ್ದಕ್ಕೆ ಏಕಾಏಕಿ ಇಂಧನ ಬೆಲೆ ಏರಿಸಲು ಸಾಧ್ಯವಿಲ್ಲ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಪಿ.ಅಶೋಕ್ ತಿಳಿಸಿದ್ದಾರೆ.[ಪೆಟ್ರೋಲ್ ಡೀಸೆಲ್ ಬೆಲೆ, ಸದ್ಯದಲ್ಲೇ ಶುಭ ಸುದ್ದಿǃ]

petrol

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಈ ವಾರಾಂತ್ಯಕ್ಕೆ ಪೆಟ್ರೋಲ್ ಮತ್ತಷ್ಟು ಸೋವಿಯಾಗಲಿದೆ ಎನ್ನಲಾಗಿತ್ತು. ಆದರೆ ಅದರ ಬೆನ್ನಿಗೆ ಅಬಕಾರಿ ಸುಂಕ ಹೆಚ್ಚಳವಾಗಿರುವುದರಿಂದ ಬೆಲೆ ಇಳಿಕೆ ಸಾಧ್ಯತೆ ಕಡಿಮೆಯಾಗಿದೆ.

ಕಳೆದ ಆಗಸ್ಟ್ ತಿಂಗಳಿನಿಂದ ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಕಡಿಮೆ ಮಾಡಲಾಗಿದೆ. ಅಲ್ಲದೇ ವರ್ಷಗಳ ನಂತರ ಡೀಸೆಲ್ ಬೆಲೆ ಸಹ ಕಡಿಮೆ ಇಳಿದಿತ್ತು. ಒಟ್ಟಿನಲ್ಲಿ ಮತ್ತೆ ಒಂದು ರೂಪಾಯಿ ಜಾಸ್ತಿ ನೀಡಬೇಕಲ್ಲ ಎಂದು ತಲೆ ಕೆರೆದುಕೊಂಡಿದ್ದ ನಾಗರಿಕ ನಿರಾಳವಾಗಿದ್ದಾನೆ. ಸದ್ಯ ಬೆಂಗಳೂರಿನ ಗ್ರಾಹಕ ಲೀಟರ್ ಪೆಟ್ರೋಲ್ ಗೆ 70.45 ರೂ. ಮತ್ತು ಡಿಸೇಲ್ ಗೆ 57.94 ನೀಡುತ್ತಿದ್ದಾನೆ.

English summary
Following the rumours that Petrol and diesel prices were today hiked by Rs 1.50 a litre after government raised excise duty on the two fuel to mop up an additional revenue of about Rs 13,000 crore, the Indian Oil Chairman P Ashok said that no changes have been made in the prices. "The rumors are false," he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X